ಮುಂಬೈನಲ್ಲಿ ಪತ್ರಕರ್ತರ ಮೇಲೆ ದಾಳಿ ಮಾಡಿದ ಕೊರೊನಾ!
ಮುಂಬೈ, ಏಪ್ರಿಲ್ 20: ಕೊರೊನಾ ಮಾಹಾಮಾರಿ ಸಂಬಂಧ ದೇಶವೇ ಲಾಕ್‌ಡೌನ್ ಆಗಿ ಕುಳಿತಿದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಪ್ರಾಣದ ಹಂಗು ತೊರೆದು ಜನರಿಗೆ ಸುದ್ದಿ, ಮಾಹಿತಿ ತಿಳಿಸಲು ಶ್ರಮ ಪಡುತ್ತಿದ್ದಾರೆ.
ಇಂತಹ ಸಮಯದಲ್ಲೇ ಮುಂಬೈನಿಂದ ಆಘಾತಕಾರಿ ಸಂಗತಿ ಬಹಿರಂಗಗೊಂಡಿದೆ. ಮುಂಬೈನಲ್ಲಿ 53 ಪತ್ರಕರ್ತರಿಗೆ, ಮಾಧ್ಯಮ ಸಂಸ್ಥೆ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇದರಲ್ಲಿ ಪತ್ರಕರ್ತರು, ವರದಿಗಾರರು, ವಾಹಿನಿಗಳ ಕ್ಯಾಮೆರಾಮೆನ್‌ಗಳು ಹಾಗೂ ವಾಹಿನಿಗಳ ಕ್ಯಾಬ್ ಚಾಲಕರು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಾಧ್ಯಮ ವಲಯದ ಒಟ್ಟು 170 ಜನರನ್ನು ಕೋವಿಡ್ 19 ತಪಾಸಣೆಗೆ ಗುರಿಪಡಿಸಿದಾಗ ಅದರಲ್ಲಿ 53 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಸೋಂಕುಗೆ ತುತ್ತಾಗುವವರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಮುಂಬೈ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಇಡೀ ದೇಶದಲ್ಲೇ ಕೊರೊನಾ ಮಹಾಮಾರಿ ಮಹಾರಾಷ್ಟ್ರದಲ್ಲಿ ಅಕ್ಷರಶಃ ಅಟ್ಟಹಾಸ ಮೆರೆಯುತ್ತಿದೆ. ಇದುವರೆಗೆ 4,203 ಜನರಿಗೆ ಸೋಂಕು ದೃಢಪಟ್ಟಿದೆ. 223 ಜನ ಮೃತಪಟ್ಟಿದ್ದಾರೆ. ಮುಂಬೈ ಒಂದರಲ್ಲೇ 2000 ಜನಕ್ಕೆ ಸೋಂಕು ತಗುಲಿದೆ. ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.












Click it and Unblock the Notifications