20 ನೇ ಬಾರಿಗೆ ಗರ್ಭಿಣಿಯಾದ ಮಹಾರಾಷ್ಟ್ರದ 38 ರ ಮಹಿಳೆ!

ಮುಂಬೈ, ಸೆಪ್ಟೆಂಬರ್ 10: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ 'ಜನಸಂಖ್ಯಾ ನಿಯಂತ್ರಣ'ದ ಅಗತ್ಯದ ಬಗ್ಗೆ ಮಾತನಾಡಿದ್ದರು. ಅದಕ್ಕೆ ಮಿಶ್ರ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಆದರೆ ಜನಸಂಖ್ಯೆಯ ನಿಯಂತ್ರಣ ಮಹತ್ವ, ಕುಟುಂಬ ಯೋಜನೆಯ ಅಗತ್ಯದ ಬಗ್ಗೆ ಇಂದಿಗೂ ಜನರಲ್ಲಿ ಅರಿವಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಮಹಾರಾಷ್ಟ್ರದ ಬೀಡ್ ಎಂಬ ಜಿಲ್ಲೆಯ 38 ವರ್ಷ ವಯಸ್ಸಿನ ಮಹಿಳೆಯೊಬ್ಬರು 20 ನೇ ಬಾರಿ ಗರ್ಭಿಣಿಯಾಗುವ ಮೂಲಕ 'ಜನಸಂಖ್ಯೆಯ ನಿಯಂತ್ರಣ'ದ ಬಗ್ಗೆ ಮಾತನಾಡುವವರಿಗೆ ಸವಾಲೆಸೆದಿದ್ದಾರೆ!

ಆಕೆಗೆ ಇದುವರೆಗೆ 3 ಬಾರಿ ಗರ್ಭಪಾತವಾಗಿದ್ದು, 16 ಬಾರಿ ಯಶಸ್ವಿಯಾಗಿ ಹೆರಿಗೆಯಾಗಿದೆ! ಆದರೆ ಸದ್ಯಕ್ಕೆ 11 ಮಕ್ಕಳು ಮಾತ್ರವೇ ಬದುಕಿದ್ದು, ಉಳಿದವರು ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಅಸುನೀಗಿದ್ದಾರೆ.

38 Year Old Maharashtra Woman Becomes Pregnant For 20th Time

ಅಷ್ಟೇ ಅಲ್ಲ, ಆಕೆ ಇದೇ ಮೊದಲ ಬಾರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರಂತೆ! ಇದುವರೆಗೂ ಆದ ಹೆರಿಗೆಯೆಲ್ಲವೂ ಆಕೆಯ ಮನೆಯಲ್ಲೇ ಆಗಿದ್ದು ಎನ್ನುತ್ತಾರೆ ವೈದ್ಯರು! ಕೂಲಿ ಕೆಲಸಕ್ಕಾಗಿ ಒಂದಿಲ್ಲೊಮದು ಪ್ರದೇಶಗಳಿಗೆ ಓಡಾಡುತ್ತಿರುವ ಬಡ ಸಮುದಾಯದ ಮಹಿಳೆಯಾಗಿದ್ದು, ಆಧುನಿಕ ಔಷಧಗಳು, ಗರ್ಭಧರಿಸದೆ ಇರಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅರಿವು, ಮತ್ತು ಅಗತ್ಯ ಔಷಧಗಳನ್ನು ಕೊಳ್ಳಲು ಹಣವೂ ಇಲ್ಲದ ಕಾರಣ ಅವರು ಇಪ್ಪತ್ತನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎನ್ನುತ್ತಾರೆ ಸ್ಥಳೀಯ ವೈದ್ಯರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+