Breaking: INS ರಣವೀರ್ ಯುದ್ಧ ನೌಕೆಯಲ್ಲಿ ಸ್ಫೋಟ: ನೌಕಾಪಡೆಯ 3 ಸಿಬ್ಬಂದಿ ಸಾವು

ಮುಂಬೈ, ಜನವರಿ 18: ಭಾರತೀಯ ನೌಕಾಪಡೆಯ ಯುದ್ಧ ನೌಕೆ ಐಎನ್​ಎಸ್​ ರಣವೀರ್​​ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಮೂವರು ನೌಕಾಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, 11 ಮಂದಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.

3 Navy Sailors Killed In Explosion Onboard Destroyer At Mumbai Dockyard

ಮುಂಬೈನ ನೌಕಾನೆಲೆಯಲ್ಲಿ ಈ ಘಟನೆ ಸಂಭವಿಸಿದೆ, ಐಎನ್‌ಎಸ್ ರಣವೀರ್ ಹಡಗಿನ ಆಂತರಿಕ ವಿಭಾಗದಲ್ಲಿ ಸ್ಫೋಟ ಉಂಟಾಗಿತ್ತು, ಮೂವರು ಮೃತಪಟ್ಟಿದ್ದಾರೆ, ಆದರೆ ಯುದ್ಧ ನೌಕೆಯಲ್ಲಿ ಇನ್ಯಾವುದೇ ರೀತಿಯ ವಸ್ತಿಉಗಳಿಗೆ ಹಾನಿಯಾಗಿಲ್ಲ.

ಸ್ಫೋಟಕ್ಕೂ ನೌಕೆಯಲ್ಲಿದ್ದ ಶಸ್ತ್ರಾಸ್ತ್ರ, ಮದ್ದುಗುಂಡುಗಳಿಗೂ ಸಂಬಂಧವಿ್ಲಲ, ಹೆಚ್ಚಿನ ಕಾರಣಗಳನ್ನು ಅರಿಯಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಡಗಿನ ಸಿಬ್ಬಂದಿ ತಕ್ಷಣವೇ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಯುದ್ಧನೌಕೆಯು ಪೂರ್ವ ನೌಕಾ ಕಮಾಂಡ್‌ನಿಂದ ಕರಾವಳಿಯ ಕಾರ್ಯಾಚರಣೆಯ ನಿಯೋಜನೆಯಲ್ಲಿತ್ತು ಹಾಗೂ ಶೀಘ್ರದಲ್ಲೇ ಬೇಸ್‌ ಪೋರ್ಟ್‌ಗೆ ಮರಳಲಿದೆ ಎಂದು ನೌಕಾಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+