ಮಲೇಷ್ಯಾ ಮತ್ತು ಕತಾರ್‌ನಿಂದ ಭಾರತಕ್ಕೆ ಬಂದಿಳಿದ ಭಾರತೀಯರು

ಮುಂಬೈ, ಮೇ 13: ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಭಾರತಕ್ಕೆ ಕರೆದುಕೊಂಡು ಬರುವ ಪ್ರಕ್ರಿಯೆ ಮುಂದುವರಿದ್ದು, ಮೇ 13ರಂದು ಮಲೇಷ್ಯಾ ಮತ್ತು ಕತಾರ್‌ನಿಂದ ವಿಮಾನಗಳು ಬಂದು ತಲುಪಿದೆ.

ಮಲೇಷ್ಯಾದ ಕೌಲಾಲಂಪುರ್‌ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ AI-1377 ವಿಮಾನದಲ್ಲಿ 255 ಪ್ರಯಾಣಿಕರು ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ್ದಾರೆ.

ಮತ್ತೊಂದೆಡೆ ಕತಾರ್‌ನ ದೋಹಾದಿಂದ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಏರ್‌ ಇಂಡಿಯಾ ಎಕ್ಸ್ ಪ್ರೆಸ್‌ ವಿಮಾನ ಭಾರತೀಯರನ್ನು ಕರೆದುಕೊಂಡು ಬಂದಿದೆ.

ಬಾಂಗ್ಲಾದೇಶದ ಡಾಕಾದಿಂದ 169 ಜನ ವಿದ್ಯಾರ್ಥಿಗಳನ್ನು ಹೊತ್ತ ಏರ್ ಇಂಡಿಯಾ ವಿಮಾನ ನಿನ್ನೆ ಜಮ್ಮು ಕಾಶ್ಮೀರಕ್ಕೆ ಬಂದಿಳಿದಿದೆ.

225 Passengers From Malaysia Arrived At Mumbai

ಅಂದ್ಹಾಗೆ, ಮೇ 7ರಂದು ಏರ್‌ ಇಂಡಿಯಾ ಕಾರ್ಯಾಚರಣೆ ಆರಂಭಿಸಿದ್ದು, ಈವರೆಗೂ 6000 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಸ್ವದೇಶಕ್ಕೆ ಕರೆದುಕೊಂಡು ಬರಲಾಗಿದೆ ಎಂದು ನಾಗರಿಕ ವಿಮಾನ ಸಚಿವಾಲಯ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+