ಮುಂಬೈನಲ್ಲಿ ಲಘು ಭೂಕಂಪ: 2.7 ತೀವ್ರತೆ ದಾಖಲು
ಮುಂಬೈ, ಸೆಪ್ಟೆಂಬರ್ 05: ಮುಂಬೈನಲ್ಲಿ ಲಘು ಭೂಕಂಪ ಸಂಭವಿಸಿದ್ದು, 2.7 ತೀವ್ರತೆ ದಾಖಲಾಗಿದೆ. ಉತ್ತರ ಮುಂಬೈನಿಂದ 98 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ.
ಶನಿವಾರ ಬೆಳಗ್ಗೆ 6.36ರ ವೇಳೆಗೆ ಭೂಕಂಪ ಸಂಭವಿಸಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಶುಕ್ರವಾರ ಬೆಳಗ್ಗೆಯಷ್ಟೇ ಉತ್ತರ ಮುಂಬೈನಿಂದ 91 ಕಿ.ಮೀ ದೂರದಲ್ಲಿ 2.8ತೀವ್ರತೆಯ ಭೂಕಂಪ ಸಂಭವಿಸಿತ್ತು.
ಬೆಳಗ್ಗೆ 10.33 ವೇಳೆಗೆ ಭೂಕಂಪ ಸಂಭವಿಸಿತ್ತು, ಒಂದೇ ದಿನದ ಅಂತರದಲ್ಲಿ ಎರಡು ಭೂಕಂಪ ಸಂಭವಿಸಿದತಾಗಿದೆ. 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿದೆ.

ಆಗಸ್ಟ್ 19 ರಂದುಇಂಡೋನೇಷ್ಯಾದಲ್ಲೂ ಭೂಕಂಪ ಸಂಭವಿಸಿತ್ತು. ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. 6 ನಿಮಿಷಗಳ ಅಂತರದಲ್ಲಿ ಎರಡು ಬಾರಿ ಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ.
ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿ ಎರಡು ಬಾರಿ ಭೂಮಿ ಕಂಪಿಸಿದ್ದು, ಜನರು ಆತಂಕಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ. ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಫಿಲಿಪೈನ್ಸ್ 6.4 ತೀವ್ರತೆಯ ಭೂಕಂಪ ಮೊದಲ ಕಂಪನ 6.8 ತೀವ್ರತೆ ಹೊಂದಿತ್ತು. ಆರು ನಿಮಿಷಗಳ ಬಳಿಕ ಮತ್ತೊಮ್ಮೆ ಭೂಮಿ ಕಂಪಿಸಿದ್ದು 6.9 ತೀವ್ರತೆ ದಾಖಲಾಗಿದೆ. ಎರಡು ಬಾರಿ ಭೂಮಿ ಕಂಪಿಸಿದರೂ ಸಹ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ.












Click it and Unblock the Notifications