ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 11 ಕೊರೊನಾ ಪ್ರಕರಣ ಪತ್ತೆ

ಮುಂಬೈ, ಮಾರ್ಚ್ 21: ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 11 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

ಶುಕ್ರವಾರವಷ್ಟೇ ಹೊಸ 11 ಪ್ರಕರಣಗಳು ದಾಖಲಾಗಿದ್ದವು, ಶುಕ್ರವಾರದ ಆರಂಭಕ್ಕೆ 52 ಪ್ರಕರಣಗಳಿದ್ದವು ಆದರೆ ಶುಕ್ರವಾರದ ಅಂತ್ಯದಲ್ಲಿ ಇದು 63ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 11 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.

ಇದರಲ್ಲಿ ಎಂಟು ಮಂದಿ ವಿದೇಶದಿಂದ ಬಂದವರಿದ್ದಾರೆ, ಮೂರು ಮಂದಿ ಈ ಎಂಟು ಮಂದಿಯ ಸಂಪರ್ಕದಲ್ಲಿದ್ದರು ಎಂದು ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ. ಭಾರತದಲ್ಲಿ ಇಲ್ಲಿಯವರೆಗೆ 271 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಐವರು ಸಾವನ್ನಪ್ಪಿದ್ದಾರೆ.

The Number Of Corona Cases Increased By 11 Within A Day In Maharashtra

22 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ವಿಶ್ವಾದ್ಯಂತ ಕೊರೊನಾದಿಂದ 10,048ಮಂದಿ ಸಾವಿಗೀಡಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ.
ಮಹಾರಾಷ್ಟ್ರದ ರಸ್ತೆಯಲ್ಲಿ ಕರ್ಚಿಫ್ ಮುಖಕ್ಕೆ ಅಡ್ಡಹಿಡಿಯದೇ ಸೀನಿದ ಎನ್ನುವ ಕಾರಣಕ್ಕೆ ಸಾರ್ವಜನಿಕರು ಥಳಿಸಿರುವ ಘಟನೆಯೂ ವರದಿಯಾಗಿದೆ.

ಸೀನುವಾಗ ಮುಖಕ್ಕೆ ಅಡ್ಡಲಾಗಿ ಏನಾದರೂ ಇಟ್ಟುಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವೇ? ನಿಮ್ಮಂಥವರಿಂದಲೇ ಕೊರೋನಾ ವೈರಸ್ ಹೆಚ್ಚು ಹರಡುತ್ತಿದೆ,' ಎಂದು ಬೈಕ್​ ತಡೆದವರು ಸೀನಿದವನಿಗೆ ಬುದ್ಧಿವಾದ ಹೇಳಿದ್ದಾರೆ. ಅದು ಕೊನೆಗೆ ಜಗಳವಾಗಿ ಅಂತ್ಯಕಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+