ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಾಝಿಲ್‌ ಹತ್ಯೆ ಸಮರ್ಥಿಸಿಕೊಂಡ ಶರಣ್‌ ಪಂಪ್‌ವೆಲ್‌: ಶೌರ್ಯ ಯಾತ್ರೆಯಲ್ಲಿ ವಿವಾದಾತ್ಮಕ ಹೇಳಿಕೆ

ಉಳ್ಳಾಲದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ ಶೌರ್ಯ ಯಾತ್ರೆಯಲ್ಲಿ ಶರಣ್ ಪಂಪ್‌ವೆಲ್‌ ಬಹಿರಂಗವಾಗಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದ ಫಾಝಿಲ್‌ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಜನವರಿ 30: ತುಮಕೂರಿನಲ್ಲಿ ಗುಜರಾತ್ ಹಿಂಸೆಯನ್ನು ಸಮರ್ಥಿಸಿಕೊಂಡಿದ್ದ ವಿಶ್ವ ಹಿಂದೂ ಪರಿಷತ್‌ ಮುಖಂಡ ಶರಣ್ ಪಂಪ್‌ವೆಲ್‌ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದ ಫಾಝಿಲ್‌ ಹತ್ಯೆಯನ್ನು ಕೂಡ ಸಮರ್ಥಿಸಿಕೊಂಡಿದ್ದಾರೆ.

ಉಳ್ಳಾಲದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ ಶೌರ್ಯ ಯಾತ್ರೆಯಲ್ಲಿ ಶರಣ್ ಪಂಪ್‌ವೆಲ್‌ ಬಹಿರಂಗವಾಗಿ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ಶರಣ್ ಪಂಪ್‌ವೆಲ್‌ ವಿವಾದಾತ್ಮಕ ಹೇಳಿಕೆಯ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದು, ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಶೌರ್ಯ ಯಾತ್ರೆಯಲ್ಲಿ ಮಾತನಾಡಿದ ಶರಣ್ ಪಂಪ್ವೆಲ್ " ಪ್ರವೀಣ್ ನೆಟ್ಟಾರು ಮಾತ್ರವಲ್ಲ, ಇನ್ನೂ ಕೆಲವು ಹಿಂದೂ ಕಾರ್ಯಕರ್ತರ ಹೆಸರಿತ್ತು ಎಂದು ಎನ್ಐಎ ಹೇಳಿದೆ. ಪಿಎಫ್‌ಐ ಬ್ಯಾನ್ ಆಗಿದ್ದರೂ ಅವರ ಕಾರ್ಯಕರ್ತರೂ ಇನ್ನೂ ಜೀವಂತ ಇದ್ದಾರೆ' ಎಂದು ಬಹಿರಂಗವಾಗಿ ಕಿಡಿಕಾರಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡಿದ ಪಂಪ್‌ವೆಲ್‌

ವಿವಾದಾತ್ಮಕ ಹೇಳಿಕೆ ನೀಡಿದ ಪಂಪ್‌ವೆಲ್‌

ಮಾತು ಮುಂದುವರಿಸಿದ ಅವರು, ಇನ್ನಷ್ಟು ನಮ್ಮ ಕಾರ್ಯಕರ್ತರ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. ಆದರೆ ನಾನು ಆ ಜಿಹಾದ್ ನಾಯಿಗಳಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಇನ್ನು ಮುಂದೆ ನಮ್ಮ ಕಾರ್ಯಕರ್ತರ ಹತ್ಯೆಯಾದರೆ ಒಂದಕ್ಕೆ ಒಂದಲ್ಲ, ಎರಡಾಗುತ್ತದೆ, ಮೂರಾಗುತ್ತದೆ. ನಮ್ಮ ಕಾರ್ಯಕರ್ತರ ಮೇಲೆ ನೀವು ಹಲ್ಲೆ ಮಾಡಿದರೆ, ನಿಮ್ಮ ಹತ್ತು ಜನರನ್ನು ನಾವು ಆಸ್ಪತ್ರೆಗೆ ಸೇರಿಸುತ್ತೇವೆ ಎಂದು ಶರಣ್ ಪಂಪ್‌ವೆಲ್‌ ವಿವಾದಾತ್ಮಕ ಭಾಷಣ ಮಾಡಿದ್ದಾರೆ.

ಹಿಂದೂ ನಾಯಕ ಕಾಂಗ್ರೆಸ್‌ನಲ್ಲಿದ್ದರೂ ಬೆಂಬಲವಿದೆ

ಹಿಂದೂ ನಾಯಕ ಕಾಂಗ್ರೆಸ್‌ನಲ್ಲಿದ್ದರೂ ಬೆಂಬಲವಿದೆ

ಉಳ್ಳಾಲದಲ್ಲಿ ಚುನಾವಣೆಗೋಸ್ಕರ ನಾವು ಕಾರ್ಯಕ್ರಮ ‌ಮಾಡುತ್ತಿಲ್ಲ. ಆದರೆ ಉಳ್ಳಾಲದಲ್ಲಿ ಹಿಂದೂ ಶಾಸಕ ಆಯ್ಕೆಯಾಗಬೇಕು ಎನ್ನುವ ಸಂಕಲ್ಪ ನಮ್ಮದು. ಅದಕ್ಕಾಗಿ ನಾವು ಉಳ್ಳಾಲದಲ್ಲಿ ಹಿಂದೂ ಶಾಸಕನ ಆಯ್ಕೆಗಾಗಿ ಅಭಿಯಾನ ಮಾಡುತ್ತಿದ್ದೇವೆ. ಈ ಹಿಂದೂ ಶಾಸಕ ಬಿಜೆಪಿ ಮಾತ್ರ ಅಲ್ಲ, ಕಾಂಗ್ರೆಸ್‌ನಲ್ಲಿದ್ದರೂ ನಮ್ಮ ಬೆಂಬಲ ಇದೆ. ಉಳ್ಳಾಲದ ಹಿಂದೂ ಕಾಂಗ್ರೆಸ್ಸಿಗರು ಎಷ್ಟು ದಿನ ಗುಲಾಮನ ಕಾಲ ಕೆಳಗೆ ಇದ್ದೀರಿ, ನೀವು ತಾಕತ್ತಿ ದ್ದರೆ, ಒಬ್ಬ ಹಿಂದೂವನ್ನು ಶಾಸಕನಾಗಿ ಗೆಲ್ಲಿಸಿ ಎಂದು ಶರಣ್ ಕರೆ ನೀಡಿದ್ದಾರೆ.

ಎಲ್ಲಾ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿ ಆಗಲಿದೆ

ಎಲ್ಲಾ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿ ಆಗಲಿದೆ

ಸಿದ್ದರಾಮಯ್ಯ ಜೀವನದ ಮೊದಲ ಸತ್ಯವನ್ನು ಮೊನ್ನೆ ಹೇಳಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ ಆಗುತ್ತಿದೆ ಎಂದು ಸತ್ಯ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ನೆಲ, ಈ ಮಣ್ಣಲ್ಲಿ ಹಿಂದುತ್ವ ಇದೆ. ನಮಗೆ ಹೆಮ್ಮೆ ಇದೆ, ಈ ಹಿಂದುತ್ವದ ಫ್ಯಾಕ್ಟರಿಯಲ್ಲಿ ನಾವು ದೇಶಕ್ಕೋಸ್ಕರ ಕೆಲಸ ಮಾಡುತ್ತಿದ್ದೇವೆ ಸಿದ್ದರಾಮಯ್ಯನವರೇ, ಕೇವಲ ದ.ಕ ಜಿಲ್ಲೆ ಅಲ್ಲ, ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿ ಆಗಲಿದೆ ಎಂದು ಸವಾಲು ಹಾಕಿದ್ದಾರೆ.

ಸುರತ್ಕಲ್‌ಗೆ ಹೋಗಿ ನುಗ್ಗಿ ನುಗ್ಗಿ ಹೊಡೆದರು

ಸುರತ್ಕಲ್‌ಗೆ ಹೋಗಿ ನುಗ್ಗಿ ನುಗ್ಗಿ ಹೊಡೆದರು

ಗುಜರಾತ್‌ನಲ್ಲಿ ನಡೆದಿದ್ದು ನರಮೇಧ ಅಲ್ಲ, ಅದು ಹಿಂದೂಗಳ ಪರಾಕ್ರಮ. ಅಲ್ಲಿ ನಡೆದಿದ್ದು ಹಿಂದುಗಳ ಶೌರ್ಯ, ಅದು ನಮ್ಮ ಪರಾಕ್ರಮ. ಅಗತ್ಯ ಬಿದ್ದರೆ, ಭಜರಂಗದಳ ಹೋರಾಟ ಮಾಡುತ್ತದೆ, ಕೆಲವೊಮ್ಮೆ ‌ನಾವು ನುಗ್ಗಿ ಹೊಡೆಯುತ್ತೇವೆ. ಪ್ರವೀಣ್‌ ನೆಟ್ಟಾರು ‌ಹತ್ಯೆಯಾದಾಗ ಹಿಂದೂ ಸಮಾಜ ಕಣ್ಣೀರಲ್ಲಿ ಮುಳುಗಿತ್ತು. ಇಡೀ ಜಿಲ್ಲೆ ಒಬ್ಬ ಉತ್ತಮ ಕಾರ್ಯಕರ್ತನ ಬಲಿದಾನಕ್ಕೆ ಬೇಸರ ಪಟ್ಟಿತ್ತು. ಆಗ ನಮ್ಮ ಕಾರ್ಯಕರ್ತರು ಅವನ ಬಲಿದಾನ ನೋಡಿ ಸುಮ್ಮನೆ ಕೂರಲಿಲ್ಲ. ಸುರತ್ಕಲ್‌ಗೆ ಹೋಗಿ ನುಗ್ಗಿ ನುಗ್ಗಿ ಹೊಡೆದರು. ಅದು ನಮ್ಮ ಶೌರ್ಯ. ಸುರತ್ಕಲ್‌ನಲ್ಲಿ ಹೊಡೆದ ವಿಡಿಯೋವನ್ನು ಎಲ್ಲರೂ ನೋಡಿದ್ದೀರಾ ಎಂದು ಶರಣ್ ಪಂಪ್‌ವೆಲ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

English summary
Vishwa Hindu parishad Leader Sharan Pumpwell justified surathkal Fazil Murder case. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X