ಮಂಗಳೂರಿನಲ್ಲಿ ಕಾಣಿಸಿಕೊಂಡ MRSA ರೋಗದ ಸೋಂಕು

ಮಂಗಳೂರು, ಜೂ 13: ಸಾಮಾನ್ಯವಾಗಿ ಐರೋಪ್ಯ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುವ ಮಹಾಮಾರಿ ಸೋಂಕು ಕಡಲನಗರಿ ಮಂಗಳೂರಿನಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದೆ.

ಎಂಆರ್ಎಸ್ಎ (MRSA, Methicillin-resistant staphylococcus aureus) ಎನ್ನುವ ಈ ಗಾಳಿಯಲ್ಲಿ ಹರಡುವ ಸೋಂಕು, ನಗರದ ಸುಮಾರು 60 ಕಾಲೇಜು ವಿದ್ಯಾರ್ಥಿಗಳಿಗೆ ತಗುಲಿದ್ದು ಜನ ಭಯಭೀತರಾಗಿದ್ದಾರೆ.

ನಗರದ ಬಲ್ಮಠ ಪ್ರದೇಶದಲ್ಲಿರುವ ಲಕ್ಷ್ಮೀ ಮೆಮೋರಿಯಲ್ ನರ್ಸಿಂಗ್ ಕಾಲೇಜಿನ 60 ವಿದ್ಯಾರ್ಥಿಗಳು ಈ ವಿಚಿತ್ರ ರೋಗಕ್ಕೆ ತುತ್ತಾಗಿದ್ದು, ಕಾಲೇಜಿನ ಇತರ ವಿದ್ಯಾರ್ಥಿಗಳಿಗೆ ಹರಡುತ್ತಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.

Mangaluru: Students of nursing college infected with MRSA, protest held

ಕಾಯಿಲೆಗೊಳಗಾದವರು ತೀವ್ರ ದೌರ್ಬಲ್ಯಕ್ಕೆ ತುತ್ತಾಗುವುದರಿಂದ, ಸೋಂಕು ತಗಲಿರುವ ವಿದ್ಯಾರ್ಥಿಗಳಿಗೆ ಕಡ್ಡಾಯ ರಜೆ ನೀಡಬೇಕೆಂದು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ.

ರೋಗ ಹರಡುವ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ, ಸೋಂಕಿತ ವಿದ್ಯಾರ್ಥಿಗಳಿಗೆ ರಜೆ ನೀಡಿದರೆ ರೋಗ ಹರಡುವಿಕೆಯನ್ನು ನಿಯಂತ್ರಿಸಬಹುದು.

ಆದರೆ ಕಾಲೇಜು ಮಂಡಳಿ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗದಿರುವುದಕ್ಕೆ ವಿದ್ಯಾರ್ಥಿಗಳು ತೀವ್ರ ಆಕ್ರೋಶಗೊಂಡಿದ್ದಾರೆ.

ದೈನಂದಿನ ಚಟುವಟಿಕೆಯಿಂದ ದೂರವಿರಲು ಸೋಂಕಿತ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಸೂಚಿಸಿದ್ದರೂ, ಕಡ್ಡಾಯ ರಜೆಯಲ್ಲಿ ತೆರಳಲು ಇದುವರೆಗೂ ನಿರ್ದೇಶನ ನೀಡಿಲ್ಲ.

ಸೋಂಕಿತರು ಇನ್ನೊಬ್ಬರ ಜೊತೆ ಸಂಪರ್ಕದಲ್ಲಿದ್ದರೆ ಮಾತ್ರ, ಈ ರೋಗ ಇತರರಿಗೆ ಹರಡುತ್ತದೆ. ಸೋಂಕಿತ ವಿದ್ಯಾರ್ಥಿಗಳಿಗೆ ಎರಡು ದಿನದ ರಜೆ ನೀಡಿದ್ದು, ಕಾಯಿಲೆಗೆ ಚಿಕಿತ್ಸೆ ನೀಡಲಾಗಿದೆ ಎಂದು ಕಾಲೇಜಿನ ಪ್ರಮುಖ ಡಿಯಾನಾ ಲೋಬೋ ಹೇಳಿದ್ದಾರೆ.

ಜನಸಂಚಾರ ಹೆಚ್ಚಾಗಿರುವ ಕಡೆ ಚರ್ಮ ಸ್ಪರ್ಶದಿಂದ, ಬ್ಯಾಕ್ಟೀರಿಯಾ ಮೂಲಕ ಈ ಸೋಂಕು ಹರಡುತ್ತದೆ. ಈ ರೋಗದ ಲಕ್ಷಣವೆಂದರೆ ಆರಂಭದಲ್ಲಿ ಜ್ವರ, ಚರ್ಮ ತುರಿಕೆ, ಕೂದಲ ಬುಡದಲ್ಲಿ ಹುಣ್ಣಾಗುವುದು.

ಸೋಂಕಿತ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಕೇರಳ ಮೂಲದವರು. ಏನಿದು ಎಂಆರ್ಎಸ್ಎ ಸೋಂಕು, ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+