ದೇಶವಾಸಿಗಳದ್ದು ಕೃತಕ ಸಂಭ್ರಮ: ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ಕಿಡಿಕಾರಿದ ಎಸ್‌ಡಿಪಿಐ

ಮಂಗಳೂರು, ಜನವರಿ 23: ಶತಶತಮಾನಗಳ ಹಿಂದೂಗಳ ಕನಸು ರಾಮಮಂದಿರ ನಿನ್ನೆ ಲೋಕಾರ್ಪಣೆಗೊಂಡಿದೆ. ಇದರ ಬೆನ್ನಲ್ಲೇ ಎಸ್‌ಡಿಪಿಐ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿ ಪೋಸ್ಟ್‌ಗಳನ್ನು ಹಾಕಿದೆ. ದೇಶವಾಸಿಗಳ ಸಡಗರವನ್ನು ಕೃತಕ ಸಂಭ್ರಮವೆಂದು ಅಣಕವಾಡಿದೆ.

ಎಸ್‌ಡಿಪಿಐನ ಹಲವಾರು ನಾಯಕರು ರಾಮಮಂದಿರ ಉದ್ಘಾಟನೆಯ ಸಂಭ್ರಮವನ್ನು ವಿರೋಧಿಸಿ ಟ್ವೀಟ್ ಮಾಡಿ, ಪೋಸ್ಟ್ ಬರೆದು ಕಿಡಿಕಾರಿದ್ದಾರೆ. ಎಸ್‌ಡಿಪಿಐ ಮುಖಂಡರಾದ ರಿಯಾಝ್ ಫರಂಗಿಪೇಟೆ, ರಿಯಾಝ್ ಸಾದತ್ ಬಜತ್ತೂರು, ರಿಯಾಝ್ ಕಡಂಬು ವಿಷಕಾರಿ ಪೋಸ್ಟ್ ಹಾಕಿದ್ದಾರೆ. ರಾಮಮಂದಿರವನ್ನು ಬಾಬರಿ ಮಸೀದಿ ಭೂಮಿಯಲ್ಲಿ ನಿರ್ಮಿಸಲಾಗಿದೆ‌. ರಾಮ ಮಂದಿರದ ಸಂಭ್ರಮ ಸಡಗರದ ಹಿಂದೆ ಅಮಾಯಕರ ಮೂರು ದಶಕಗಳ ಕಣ್ಣೀರು ಇದೆ ಎಂದು ಬರೆದಿದ್ದಾರೆ.

SDPI Leaders Lashes Out At Ram Mandir Inauguration Program

ರಾಮಮಂದಿರ ಉದ್ಘಾಟನೆಯನ್ನು ವಿರೋಧಿಸಿ ಬಾಬರಿ ಮಸೀದಿ ಪರ ಪೋಸ್ಟ್ ಮಾಡಿರುವ ಕೊಪ್ಪಳದ ಶಾರುಖ್ ನನ್ನು ಬಿಡುಗಡೆ ಮಾಡಿ ಎಂದು ಕೊಪ್ಪಳ ಎಸ್‌ಪಿ ವಿರುದ್ಧ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಾಹ ಭವನ ಮತ್ತೆ ಅಲ್ಲಾಹನ ನೈಜ ದಾಸರ ಮೂಲಕವೇ ತಲೆ ಎತ್ತಲಿದೆ ಎಂದು ಪೋಸ್ಟ್ ಹಾಕಲಾಗಿದೆ.

ಮಸೀದಿಗಳಲ್ಲಿ ಶ್ರೀರಾಮನ ಫೋಟೋ ಇಟ್ಟು ಪೂಜೆ

ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಮಸೀದಿಗಳಲ್ಲಿ ರಾಮ ಮಂದಿರ ಉದ್ಘಾಟನೆಗೊಂಡ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರು ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಎರಡೂ ಮಸೀದಿಗಳು ಮತ್ತು ಸಯ್ಯದ್ ಅಲಿ ದರ್ಗಾದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯತು.

ಒಂದು ಮಸೀದಿಯ ಒಳಭಾಗದಲ್ಲಿ ಪ್ರಭು ಶ್ರೀರಾಮನ ಫೋಟೋ ಇಟ್ಟು ಪೂಜೆ ಸಲ್ಲಿಸಲಾಯಿತು. ಇನ್ನೊಂದು ಕಡೆ ಮಸೀದಿಯ ಆವರಣದಲ್ಲಿ ರಾಮನ ಪೋಟೋ ಇಟ್ಟು ಪೂಜೆ ನೆರವೇರಿಸಲಾಯಿತು. ಆ ಮೂಲಕ ಹಳ್ಯಾಳ ಗ್ರಾಮಸ್ಥರು ಭಾವೈಕತೆ ಸಾರಿದರು. ಕೇವಲ ಪೂಜೆ ಅಲ್ಲದೇ ಅನ್ನ ಸಮರ್ಪಣೆಯೂ ನಡೆಯಿತು. ಸಂಭ್ರಮಾಚರಣೆಯಲ್ಲಿ ಕೆಲವು ಮುಸ್ಲಿಂ ಸಮುದಾಯದವರು ಕೇಸರಿ ಬಣ್ಣದ ಬಟ್ಟೆ ತೊಟ್ಟು, ಧ್ವಜ ಹಿಡಿದು ಶ್ರೀರಾಮನಿಗೆ ಭಕ್ತಿ ಅಪರ್ಣೆ ಮಾಡಿದರು.

SDPI Leaders Lashes Out At Ram Mandir Inauguration Program

ಗ್ರಾಮದ ವಿವಿಧ ದೇವಾಲಯಗಳಲ್ಲಿ ರುದ್ರಾಭಿಷೇಕ ಮಾಡಿ, ಭಾರತಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಂತರ ರಂಜಾನ್ ತಿಂಗಳಲ್ಲಿ ಪೂಜಿಸುವ ಆಲಿ ದೇವರ ಸಮ್ಮುಖದಲ್ಲಿ ಭಾರತ ಮಾತೆ ಫೋಟೋಗೆ ಪೂಜೆ ಸಲ್ಲಿಸುತಿದ್ದು ಇದೊಂದು ಭಾವೈಕ್ಯತ ಸಂದೇಶವಾಗಿದೆ.

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೂ ಮುನ್ನ ಶ್ರೀರಾಮನ ಪ್ರಸಾದವಾಗಿ ಮಂತ್ರಾಕ್ಷತೆಯನ್ನು ಇಡೀ ಗ್ರಾಮದಲ್ಲಿ

ಹಂಚಲಾಗಿತ್ತು. ಹಿಂದೂ ಕಾರ್ಯಕರ್ತರು, ರಾಮ ಭಕ್ತರು ಮನೆಮನೆಗಳಿಗೆ ತೆರಳಿ ಮಂತ್ರಾಕ್ಷತೆ ಹಂಚಿಸಿದ್ದರು. ಇದೇ ವೇಳೆ ಮುಸಲ್ಮಾನರ ಮನೆಗಳಿಗೂ ಭೇಟಿ ನೀಡಿ ಮಂತ್ರಾಕ್ಷತೆಯನ್ನು ವಿತರಿಸಿ ಸಿಹಿ ಹಂಚಲಾಗಿತ್ತು. ಮುಸ್ಲಿಂ ಸಮುದಾಯದ ಮಂದಿ ಮಂತ್ರಾಕ್ಷತೆಯನ್ನು ಸಂತೋಷದಿಂದ ಸ್ವೀಕಾರ ಮಾಡಿದ್ದರು ಎಂದು ಸ್ಥಳೀಯ ಹಿಂದೂ ಕಾರ್ಯಕರ್ತರು ಖುಷಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+