ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ಲೇಖನ; ಕುಗ್ರಾಮದ ಶಾಲೆಯಲ್ಲಿ ಪ್ರತಿದಿನ ಮೊಳಗುತ್ತದೆ ರೇಡಿಯೋ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 27; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಐದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡರೆ ಆ ಶಾಲೆಗಳನ್ನು ವಾರಗಳ ಕಾಲ ಮುಚ್ಚಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ನೀಡಿದೆ.

ಮಕ್ಕಳಲ್ಲಿ ಕೊರೊನಾದ ಬಗ್ಗೆ ಭಯ ಆತಂಕ ಇರುವಾಗಲೇ, ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಗ್ರಾಮದ ಶಾಲೆಯೊಂದು ಮಾತ್ರ ಕೊರೊನಾ ಭಯದಲ್ಲಿದ್ದ ವಿದ್ಯಾರ್ಥಿಗಳಿಗೆ ನವಚೈತನ್ಯ ತುಂಬುತ್ತಿದೆ. ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ನೀಡಿ, ಮಕ್ಕಳ ಮನಸ್ಸನ್ನು ಸದಾ ಕ್ರೀಯಾಶೀಲವನ್ನಾಗಿಸಿದೆ.

ನೆಲಸಮಗೊಳ್ಳುವ ಹಂತದಲ್ಲಿದೆ ಬೆಂಗಳೂರಿನ 91 ವರ್ಷ ಹಳೆಯ ಸರ್ಕಾರಿ ಶಾಲೆ ನೆಲಸಮಗೊಳ್ಳುವ ಹಂತದಲ್ಲಿದೆ ಬೆಂಗಳೂರಿನ 91 ವರ್ಷ ಹಳೆಯ ಸರ್ಕಾರಿ ಶಾಲೆ

ಗ್ರಾಮೀಣ ಭಾಗದ ಶಾಲೆಯಲ್ಲಿ ಪ್ರತಿದಿನ ರೇಡಿಯೋ ಮೊಳಗುತ್ತಿದ್ದು,ಶಾಲೆಯ ಚಿಕ್ಕ ಮಕ್ಕಳೇ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇಂತಹ ವಿನೂತನ ಪ್ರಯೋಗವನ್ನು ಮಾಡಿ ಯಶಸ್ವಿಯಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನ ಮಾರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆ.

ದಕ್ಷಿಣ ಕನ್ನಡದ ವಿಶೇಷ ಶಾಲೆ; ಹಸಿರ ಬಳ್ಳಿಯೇ ಮೇಲ್ಛಾವಣಿ ದಕ್ಷಿಣ ಕನ್ನಡದ ವಿಶೇಷ ಶಾಲೆ; ಹಸಿರ ಬಳ್ಳಿಯೇ ಮೇಲ್ಛಾವಣಿ

ಪ್ರಾಥಮಿಕ ಶಾಲೆಯಿಂದ ಫ್ರೌಢ ತರಗತಿಯವರೆಗೆ ಇರುವ ಈ ಶಾಲೆಯ ವಿನೂತನ ಪರಿಕಲ್ಪನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಲಾಕ್ ಡೌನ್, ಆ ಬಳಿಕ ಆನ್ ಲೈನ್ ಕ್ಲಾಸ್ ಅಂತಾ ಮನೆಯೊಳಗೆ ಬಂಧಿಯಾಗಿದ್ದ ಮಕ್ಕಳ ಜಿಡ್ಡು ಹೋಗಿದ್ದ ಮನಸ್ಸನ್ನು ಕ್ರಿಯಾಶೀಲವನ್ನಾಗಿ ಈ ಕಾರ್ಯಕ್ರಮ ಮಾಡಿದೆ.

ಸರ್ಕಾರಿ ಶಾಲೆ ಉಳಿಸಲು ಕೈ ಜೋಡಿಸಿದ ನಟಿ ನೀತು ಸರ್ಕಾರಿ ಶಾಲೆ ಉಳಿಸಲು ಕೈ ಜೋಡಿಸಿದ ನಟಿ ನೀತು

ಮುಖ್ಯೋಪಾಧ್ಯಾಯರ ಪರಿಕಲ್ಪನೆ

ಮುಖ್ಯೋಪಾಧ್ಯಾಯರ ಪರಿಕಲ್ಪನೆ

ಶಾಲೆಯ ಮುಖ್ಯೋಪಾಧ್ಯಾಯಿನಿ ಲೀನಾ ಅವರ ಪರಿಕಲ್ಪನೆಯಂತೇ ಮಾರಿಯಾಂಬಿಕಾ ಶಾಲೆಯಲ್ಲಿ ಪ್ರತಿದಿನ 15 ನಿಮಿಷ ರೇಡಿಯೋ ಮೊಳಗುತ್ತದೆ. 15 ನಿಮಿಷಗಳ ಕಾರ್ಯಕ್ರಮದಲ್ಲಿ ನಿರೂಪಣೆ, ಹಾಡು, ಭಾಷಣ, ಸಮೂಹ ಗಾಯನ, ಸುದ್ದಿ ವಾಚನ ಸೇರಿದಂತೆ ವಿವಿಧ ಭಾಷೆಯಲ್ಲಿ ಮಕ್ಕಳು ಕಾರ್ಯಕ್ರಮ ಮಾಡಿಕೊಡುತ್ತಾರೆ. ಮಕ್ಕಳಲ್ಲಿ ಸಭಾಕಂಪನವನ್ನು ಹೋಗಲಾಡಿಸಿದ ಶಾಲೆಯ ವಿನೂತನ ಕಾರ್ಯಕ್ರಮ ಮಕ್ಕಳ ಹೆತ್ತವರಿಗೂ ಖುಷಿ ತಂದಿದ್ದು, ಶಾಲೆಯ ಈ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ.

ಮೂರು ಭಾಷೆಯಲ್ಲಿ ಕಾರ್ಯಕ್ರಮ

ಮೂರು ಭಾಷೆಯಲ್ಲಿ ಕಾರ್ಯಕ್ರಮ

ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ಈ ರೇಡಿಯೋ ಕಾರ್ಯಕ್ರಮ ಆರಂಭವಾಗುತ್ತದೆ. 15 ನಿಮಿಷಗಳ ಕಾಲ ಮಕ್ಕಳಿಗೆ ವಿವಿಧ ಚಟುವಟಿಕೆ ನೀಡಲಾಗುತ್ತದೆ. ನಿರೂಪಣೆ, ಭಾಷಣ, ಗಾಯನ, ಸಮೂಹ ಗಾಯನಕ್ಕೆ ವೇದಿಕೆ ಇದಾಗಿದ್ದು, ಎಳೆಯ ಮಕ್ಕಳು ಹಿಂದಿ, ಇಂಗ್ಲಿಷ್, ಕನ್ನಡ ಭಾಷೆಯಲ್ಲಿ ಕಾರ್ಯಕ್ರಮ ಮಾಡಿಕೊಟ್ಟು, ಪ್ರತಿಭೆಯ ಅನಾವರಣ ಮಾಡುತ್ತಾರೆ. 1 ರಿಂದ 10 ತರಗತಿ ತನಕ ಇರುವ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದೆ.

ಈ ಬಗ್ಗೆ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ, "ಈ ಕಾರ್ಯಕ್ರಮ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ಈ ಶಾಲೆಗೆ ಅತೀ ಹೆಚ್ಚು ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಆಗಮಿಸುತ್ತಾರೆ. ಈ ಕಾರ್ಯಕ್ರಮದಿಂದ ಮಕ್ಕಳಲ್ಲಿದ್ದ ಸಭಾ ಕಂಪನ ದೂರವಾಗಿದೆ" ಎಂದು ಹೇಳುತ್ತಾರೆ.

ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸಿದೆ

ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸಿದೆ

"ಈ 15 ನಿಮಿಷದ ಕಾರ್ಯಕ್ರಮ ದಲ್ಲಿ ಮಕ್ಕಳು ಜೋಕ್ಸ್, ಹಾಡು, ಮಿಮಿಕ್ರಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಭಾಷಣ, ಕ್ವಿಜ್ ಕಾರ್ಯಕ್ರಮ, ಸ್ಕಿಟ್ ಮಾಡಿಕೊಡುತ್ತಾರೆ. ಈ ಕಾರ್ಯಕ್ರಮದಿಂದ ಮಕ್ಕಳಲ್ಲಿ ಸಾತ್ವಿಕ ಗುಣ ವೃದ್ಧಿಯಾಗುತ್ತದೆ. ಈ ಕಾರ್ಯಕ್ರಮ ಮಕ್ಕಳು ನಡೆಸುವ ವೇಳೆ, ಇತರ ಮಕ್ಕಳು ತರಗತಿಯಲ್ಲಿ ಕೂತು ಕಾರ್ಯಕ್ರಮವನ್ನು ಆಲಿಸುತ್ತಾರೆ. ವಿದ್ಯಾರ್ಥಿಗಳು ಲಾಕ್ ಡೌನ್ ಸಂದರ್ಭದಲ್ಲಿ ಬಹಳ ಸಂಕುಚಿತರಾಗಿದ್ದರು. ಆದರೆ ಈ ಕಾರ್ಯಕ್ರಮ ಮಕ್ಕಳನ್ನು ಮತ್ತೆ ಚಟುವಟಿಕೆಯಿಂದ ಇರುವಂತೆ ಮಾಡಿದೆ ಎನ್ನುತ್ತಾರೆ" ಲೀನಾ.

500 ವಿದ್ಯಾರ್ಥಿಗಳಿದ್ದಾರೆ

500 ವಿದ್ಯಾರ್ಥಿಗಳಿದ್ದಾರೆ

ಬೆಳ್ತಂಗಡಿ ತಾಲೂಕಿನಿಂದ ಸುಮಾರು16 ಕಿ. ಮೀ. ದೂರದಲ್ಲಿ ಈ ಶಾಲೆಯಿದ್ದು, ಹತ್ತನೇ ತರಗತಿವರೆಗೆ ಸುಮಾರು 500 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿ ಅನ್ವಿತಾ, "ಈ ಶಾಲೆ ನಮ್ಮಲ್ಲಿ ತುಂಬಾ ಬದಲಾವಣೆ ತಂದಿದೆ. ವಿದ್ಯಾರ್ಥಿಗಳಲ್ಲಿದ್ದ ಸಭಾ ಕಂಪನ ದೂರವಾಗಿದೆ. ಭಾಷೆಗಳ‌ ಮೇಲೂ ಹಿಡಿತವಾಗಿದೆ. ಏನೇ ಕಾರ್ಯಕ್ರಮ ಹೇಳಿದರೂ ಧೈರ್ಯದಿಂದ ಮುಂದೆ ಬಂದು ನಿಭಾಯಿಸುವ ಸಾಮರ್ಥ್ಯ ಬಂದಿದೆ" ಎಂದು ಹೇಳಿದ್ದಾರೆ.

English summary
Dakshina Kannada district Belthangady taluk Bedrabettu school students running 15 minute radio program daily. By this students stage fear come down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X