• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ:ಕೇಂದ್ರ ಸಚಿವ ಸುರೇಶ್ ಪ್ರಭು

|
   ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗ್ತಾರೆ | ಹೀಗೆ ಹೇಳಿದ್ದು ಯಾರು? | Oneindia Kannada

   ಮಂಗಳೂರು, ಏಪ್ರಿಲ್ 16:ದೇಶದ ಎಲ್ಲೆಡೆ ತೆರಳಿ ಪ್ರಚಾರ ವೀಕ್ಷಿಸಿದ್ದೇನೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ ಎಂದು ಕೇಂದ್ರ ವಾಣಿಜ್ಯ ಮತ್ತು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ತಿಳಿಸಿದರು.

   ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಆಗಿರುವ ಪ್ರಗತಿ, ಸಾಮಾಜಿಕ ಕ್ಷೇತ್ರದಲ್ಲಿ ಸಾಧಿಸಿರುವ ಸೌಹಾರ್ದತೆ ದೇಶದಲ್ಲಿ ಗೋಚರಿಸುತ್ತಿದೆ ಎಂದು ಹೇಳಿದರು.

   ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

   ನಮ್ಮ ಸರ್ಕಾರದಲ್ಲಿ 30 ಹೊಸ ವಿಮಾನ ನಿಲ್ದಾಣಗಳು ಪ್ರಾರಂಭಗೊಂಡಿದ್ದು, ಇನ್ನೂ 100 ಆಗಬೇಕಿದೆ. ಮುಂದೆ 200 ವಿಮಾನ ನಿಲ್ದಾಣ ನಿರ್ಮಾಣದ ಗುರಿ ಹೊಂದಲಾಗಿದೆ. ಕಳೆದ ಜನವರಿಯಲ್ಲಿ ಮುಂಬೈನಲ್ಲಿ ನಡೆದ ವಿಶ್ವ ವೈಮಾನಿಕ ಸಮಾವೇಶದಲ್ಲಿ ದೇಶಕ್ಕೆ ಒಟ್ಟು 2,300 ವಿಮಾನ ನಿಲ್ದಾಣ ಆಗಬೇಕು ಎಂಬ ಅಭಿಪ್ರಾಯ ಬಂದಿದೆ ಎಂದು ತಿಳಿಸಿದರು.

   Modi will be re elected as PM:Suresh Prabhu

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣ ಅಂತಿಮವಾಗಿಲ್ಲ ಎಂದು ಹೇಳಿದ ಸುರೇಶ್ ಪ್ರಭು ಅವರು, ಈ ಪ್ರಸ್ತಾಪ ಇನ್ನೂ ಅಂತಿಮವಾಗಿಲ್ಲ. ಜೆಟ್‌ಏರ್‌ವೇಸ್ ಸಂಸ್ಥೆ ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದೆ, ಈ ಕುರಿತು ಸಾಲಗಾರರು, ಬ್ಯಾಂಕ್‌ನವರು ಹಣಕಾಸು ವಿಚಾರಗಳನ್ನು ಪರಿಶೀಲಿಸುತ್ತಿದ್ದಾರೆ.ಸರ್ಕಾರವು ಸಂಸ್ಥೆಯ ಗ್ರಾಹಕರು, ಸಿಬ್ಬಂದಿಗಳಿಗೆ ಅಗತ್ಯವಿರುವ ಸಹಕಾರವನ್ನು ನೀಡುವುದಕ್ಕೆ ಬದ್ಧವಾಗಿದೆ ಎಂದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Lok Sabha Elections 2019: Addressing media persons in Mangaluru union minister for commerce industry civil aviation Suresh Prabhu has expressed his confidence that Modi will be re-elected as the prime minister second term.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more