ಮಂಗಳೂರು: ಈ ದೈವಸ್ಥಾನದ ಬಾವಿಯ ನೀರು ಕುಡಿದ್ರೆ ದೇಹದಲ್ಲಿ ವಿಷವೇ ಇರಲ್ಲ..!

ಮಂಗಳೂರು, ಡಿಸೆಂಬರ್‌ 19: ಆ ಬಾವಿಯ ನೀರು ಎಲ್ಲಾ ಬಾವಿಗಳಲ್ಲಿ ಸಿಗುವ ಮಾಮೂಲಿ ನೀರಲ್ಲ. ಬದಲಾಗಿ ಜೀವ ಉಳಿಸುವ ಸಂಜೀವಿನಿ. ಯಾವುದೇ ರೀತಿಯ ವಿಷ ಜಂತುಗಳು ಕಡಿದರೆ ಆ ಬಾವಿಯ ನೀರನ್ನು ಕುಡಿದು, ಅಲ್ಲಿನ ಮಣ್ಣನ್ನು ಹಾಕಿಕೊಂಡರೆ ವಿಷವೆಲ್ಲಾ ಇಳಿಯುತ್ತದೆ. ಏತದ ಮೂಲಕ ನೀರನ್ನು ಎಳೆಯುವ ಈ ಬಾವಿ ಪವಿತ್ರ ಸಂಜೀವಿನಿ ಬಾವಿ.

ಮಂಗಳೂರಿನ ಕಟೀಲು ಸಮೀಪದ ಶಿಬರೂರು ಎಂಬಲ್ಲಿರುವ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಪವಿತ್ರ ಬಾವಿ ಇದು. ವರ್ಷಕ್ಕೊಂದು ಬಾರಿ ನಡೆಯುವ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವದ ಎಂಟು ದಿನಗಳ ಕಾಲ ಈ ಬಾವಿಯ ನೀರನ್ನು ಅತೀ ಹೆಚ್ಚು ಭಕ್ತರಿಗೆ ತೆಗೆದುನೀಡಲಾಗುತ್ತದೆ.

Mangaluru Shibaroor Sree Kodamanithaya kshethra Water Specialty

ಪುರಾತನ ಕಾಲದಲ್ಲಿ ಸ್ಥಳೀಯ ದೈವೀ ವೈದ್ಯರಾದ ತ್ಯಾಂಪಣ್ಣ ಶೆಟ್ಟಿ ಎಂಬವರು ತನ್ನಲ್ಲಿದ್ದ ವಿಷ ಹೀರುವ ಕಲ್ಲೊಂದನ್ನು ಲೋಕದ ಜನತೆಯ ಒಳಿತಿಗಾಗಿ ಈ ಬಾವಿಗೆ ಹಾಕಿದ್ದಾರೆ. ಹೀಗಾಗಿ ಆ ಶಕ್ತಿಯಿಂದಲೇ ಈ ಬಾವಿಯ ನೀರು ಯಾವುದೇ ರೀತಿಯ ವಿಷವನ್ನು ಹೀರಿಕೊಳ್ಳುತ್ತದೆ ಅನ್ನುವ ನಂಬಿಕೆ ಹಿಂದಿನ ಕಾಲದಿಂದ ಇಂದಿನವರೆಗೂ ಉಳಿದುಕೊಂಡು ಬಂದಿದೆ.

ಜಾತ್ರಾ ಮಹೋತ್ಸವದ 8 ದಿನದಲ್ಲಿ ಈ ದೈವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬಂದು, ಈ ಪವಿತ್ರ ನೀರನ್ನು ಕೊಂಡೊಯ್ಯತ್ತಾರೆ. ಈ ನೀರನ್ನು ಕುಡಿಯುವುದರಿಂದ ವರ್ಷವಿಡೀ ದೇಹದಲ್ಲಿದ್ದ ವಿಷಕಾರಿ ಅಂಶಗಳು ಹೋಗುತ್ತದೆ. ಜೊತೆಗೆ ವಿಷಜಂತುಗಳು ಕಡಿದಂತಹ ಸಂದರ್ಭದಲ್ಲಿ ತಕ್ಷಣ ಈ ನೀರನ್ನು ಕುಡಿದು ನಂತರ ಈ ಕ್ಷೇತ್ರದಲ್ಲೇ ಸಿಗುವ ಮಣ್ಣನ್ನು ನೀರಲ್ಲಿ ಬೆರಸಿ ಗಾಯಕ್ಕೆ ಹಚ್ಚಿದರೆ ವಿಷ ಕಾರುತ್ತದೆ ಅನ್ನುವ ನಂಬಿಕೆ ಇಂದಿಗೂ ಉಳಿದಿದೆ. ನಾನಾ ಊರುಗಳಿಂದ ಬರುವ ಭಕ್ತರು ಈ ಆಧುನಿಕ ಯುಗದಲ್ಲೂ ಈ ನಂಬಿಕೆಯನ್ನು ಇಟ್ಟು ನೀರು ಹಾಗೂ ಮಣ್ಣನ್ನು ಕೊಂಡೊಯ್ಯಲು ಮುಗಿ ಬೀಳುತ್ತಾರೆ.

Mangaluru Shibaroor Sree Kodamanithaya kshethra Water Specialty

ಈ ಪವಿತ್ರ ನೀರಿಗೆ ಒಂದು ವರ್ಷಗಳ ಕಾಲ ಶಕ್ತಿ ಇರುತ್ತದೆ. ಹೀಗಾಗಿ ಪ್ರತಿ ವರ್ಷವೂ ಹೊಸ ನೀರನ್ನು ಹಾಗೂ ಮಣ್ಣನ್ನು ಕೊಂಡೊಯ್ಯಲು ಭಕ್ತರು ಜಾತ್ರಾ ಸಂದರ್ಭದಲ್ಲಿ ಇಲ್ಲಿಗೆ ಬರುತ್ತಾರೆ. ಇಂದಿಗೂ ಹಳ್ಳಿ ಪ್ರದೇಶದ ಜನ ವಿಷ ಜಂತುಗಳ ಕಡಿತಕ್ಕೊಳಗಾದರೆ ಈ ನೀರು ಹಾಗೂ ಮಣ್ಣಿನ ಮೊರೆ ಹೋಗುತ್ತಾರೆಯೇ ಹೊರತು ಆಸ್ಪತ್ರೆಗೆ ಹೋಗೋದಿಲ್ಲ. ಒಟ್ಟಿನಲ್ಲಿ ಈಗಿನ ಕಾಲದಲ್ಲೂ ಇಂತಹ ನಂಬಿಕೆ ಉಳಿಯಬೇಕಿದ್ದರೆ ಈ ಕ್ಷೇತ್ರದಲ್ಲಿ ಹಾಗೂ ಬಾವಿಯಲ್ಲಿ ದೈವಿ ಶಕ್ತಿ ಇದೆ ಎನ್ನುವುದರಲ್ಲಿ ಸಂದೇಹವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+