ಮಂಗಳೂರು : ಪಾಲಿಕೆ ಬಜೆಟ್ ಮುಖ್ಯಾಂಶಗಳು
ಮಂಗಳೂರು, ಮಾ. 25 : ಅಭಿವೃದ್ಧಿ ಕಾಮಗಾರಿಗಳಿಗೆ 160 ಕೋಟಿ, ಘನ ತ್ಯಾಜ್ಯ ನಿರ್ವಹಣೆಗೆ 20 ಕೋಟಿ ರೂ.ಗಳನ್ನು ಮೀಸಲಾಗಿಟ್ಟ ಮಂಗಳೂರು ಮಹಾನಗರ ಪಾಲಿಕೆಯ 2015-16ನೇ ಸಾಲಿನ ಬಜೆಟ್‌ಅನ್ನು ಮಂಗಳವಾವಾರ ಮಂಡನೆ ಮಾಡಲಾಗಿದೆ.
ಮೇಯರ್ ಜಸಿಂತಾ ವಿಜಯಾ ಆಲ್ರೆಡ್ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ, ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಹರಿನಾಥ್ ಅವರು ಬಜೆಟ್ ಅನ್ನು ಮಂಡನೆ ಮಾಡಿದರು. 358 ಕೋಟಿ ರೂ. ಆದಾಯದ ನಿರೀಕ್ಷೆಯನ್ನು ಈ ಬಜೆಟ್‌ನಲ್ಲಿ ಇಟ್ಟುಕೊಳ್ಳಲಾಗಿದೆ. [ಜೆಸಿಂತಾ ಮಂಗಳೂರಿನ ನೂತನ ಮೇಯರ್]

ಪಾಲಿಕೆಗೆ ನೀರಿನ ಶುಲ್ಕದಿಂದ 45 ಕೋಟಿ ರೂ., ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಿಂದ 40 ಕೋಟಿ ರೂ., ಉದ್ದಿಮೆ ಪರವಾನಿಗೆಯಿಂದ 3 ಕೋಟಿ ರೂ., ಮಾರುಕಟ್ಟೆಗಳಿಂದ 2.75 ಕೋಟಿ ರೂ., ಘನ ತ್ಯಾಜ್ಯ ಕರ ಮತ್ತು ಶುಲ್ಕ ರೂಪದಲ್ಲಿ 14.10 ಕೋಟಿ ಅನುದಾನ ಬರಲಿದೆ ಎಂದು ನಿರೀಕ್ಷಿಸಲಾಗಿದೆ. [ಕರ್ನಾಟಕ ಬಜೆಟ್ ಮುಖ್ಯಾಂಶಗಳು]
ಪಾಲಿಕೆ ಬಜೆಟ್ ಮುಖ್ಯಾಂಶಗಳು
* ಪಾಲಿಕೆ ನೌಕರರ ಸಂಘಕ್ಕೆ 6 ಲಕ್ಷ ರೂ. ಅನುದಾನ
* ತುಂಬೆ ಎರಡನೇ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ 21.976 ಕೋಟಿ ರೂ. ಪಾವತಿ
* ಪಾಲಿಕೆ ಸಹಯೋಗದಲ್ಲಿ ನಡೆಯುವ ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳಿಗೆ 10 ಲಕ್ಷ ರೂ. ಅನುದಾನ
* ಪ್ರಾಕೃತಿಕ ವಿಕೋಪದಿಂದ ನೊಂದವರಿಗೆ ಪರಿಹಾರ ನೀಡಲು 15 ಲಕ್ಷ ರೂ. ಅನುದಾನ
* ಕ್ರೀಡೆಗೆ ಪ್ರೋತ್ಸಾಹಧನ ನೀಡಲು 25 ಲಕ್ಷ ರೂ. ಅನುದಾನ
* ಸ್ವಸ್ಥ ಕುಟೀರ ಯೋಜನೆಗೆ 60 ಲಕ್ಷ ರೂ. ಅನುದಾನ, 15 ಸಾವಿರ ರೂ. ನೆರವು 20 ಸಾವಿರ ರೂ.ಗೆ ಏರಿಕೆ
* ಬಜಾಲ್ ವಾರ್ಡಿನ ಬಜಾಲ್ ಕಟ್ಟೆಪುಣಿ ಹೊಸ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ.
* ದೇರೆಬೈಲ್ ವಾರ್ಡಿನ ಉರ್ವಸ್ಟೋರ್ ಮೈದಾನ ಅಭಿವೃದ್ಧಿಗೆ 30 ಲಕ್ಷ ರೂ.
ಅಸಮರ್ಪಕ ಮಾಹಿತಿ : 2015-16ನೇ ಸಾಲಿನ ಬಜೆಟ್‌ನಲ್ಲಿ ನೀಡಿರುವ ಅಂಕಿ-ಅಂಶಗಳ ಮಾಹಿತಿ ಸಮರ್ಪಕವಾಗಿಲ್ಲ, ಈ ಬಗ್ಗೆ ಮೇಯರ್ ಅಥವಾ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷಗಳ ಸದಸ್ಯರು ಒತ್ತಾಯಿಸಿದರು.












Click it and Unblock the Notifications