ಮಂಗಳೂರಿನ ಪುಟಾಣಿ ಜಾದೂ ಸಹೋದರಿಯರಿಂದ ದಾಖಲೆ
ಮಂಗಳೂರು, ಮೇ 26: ನಗರದ ಇಬ್ಬರು ಪುಟಾಣಿ ಜಾದೂಗಾರ್ತಿಯರು ಭಾರತದ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಸಹೋದರಿಯರಾದ ಅಂಜನಾ ಮಳಿ(8)ಮತ್ತು ಅಪೂರ್ವ ಮಳಿ(6) ಅವರೇ ಈ ಜಾದೂಗಾರ್ತಿಯರಾಗಿದ್ದು, ಅಪೂರ್ವ ಮಳಿ ಭಾರತದ ಅತ್ಯಂತ ಕಿರಿಯ ಕೈಚಳಕದ ಜಾದೂಗಾರ್ತಿಯಾಗಿ ಹಾಗೂ ಅಂಜನಾ ಮಳಿ ಅತ್ಯಂತ ಕಿರಿಯ ಐಂದ್ರಜಾಲಕಿ ಬಿರುದು ಪಡೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭಾರತದ ಖ್ಯಾತ ಜಾದೂಗಾರ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಈ ವಿಷಯ ತಿಳಿಸಿದರು. ಜಾದೂಗಾರ ದಂಪತಿ ರಾಜೇಶ್ ಮಳಿ ಹಾಗೂ ಶುಭಾರಾಜ್‌ರ ಪುತ್ರಿಯರಾಗಿರುವ ಇವರು, ಅತ್ಯಂತ ಕಿರಿ ವಯಸ್ಸಿನಲ್ಲಿಯೇ ಜಾದೂಗಾರ್ತಿಯರಾಗಿ ಪ್ರದರ್ಶನ ನೀಡಿದ ಖ್ಯಾತಿಯನ್ನು ಹೊಂದಿದ್ದಾರೆ.

ಪ್ರಸ್ತುತ ಮಂಗಳೂರಿನ ಕೆನರಾ ಹೈಸ್ಕೂಲ್ (ಸಿಬಿಎಸ್ಇ)ಯಲ್ಲಿ ಅಂಜನಾ ಮಳಿ 3ನೇ ತರಗತಿ ಹಾಗೂ ಅಪೂರ್ವ ಮಳಿ 2ನೇ ತರಗತಿ ಓದುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೆನರಾ ಹೈಸ್ಕೂಲ್‌ನ ಪ್ರಾಂಶುಪಾಲೆ ಜಾಯ್ ಜೆ. ರೈ, ಕಿರಿಯ ಜಾದೂಗಾರ್ತಿಯರಾದ ಅಪೂರ್ವ ಮಳಿ ಹಾಗೂ ಅಂಜನಾ ಮಳಿ, ತಂದೆ ರಾಜೇಶ್ ಮಳಿ, ತಾಯಿ ಶುಭಾರಾಜ್ ಮಳಿ ಉಪಸ್ಥಿತರಿದ್ದರು.












Click it and Unblock the Notifications