• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಂದ್ರ ಗ್ರಹಣ: ದಕ್ಷಿಣ ಕನ್ನಡದ ದೇವಸ್ಥಾನಗಳಲ್ಲಿ ಪೂಜಾ ಸಮಯ ಬದಲಾವಣೆ ಇರಲಿದೆಯೇ?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 18: ನವೆಂಬರ್ 19 ಕಾರ್ತಿಕ ಪೂರ್ಣಿಮೆಯ ದಿನ ಶುಕ್ರವಾರ ಸಂಭವಿಸುವ ಅಪರೂಪದ ಚಂದ್ರ ಗ್ರಹಣ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ದೇವಸ್ಥಾನಗಳಲ್ಲಿ ಪೂಜಾ ಸಮಯ ಬದಲಾವಣೆ, ವಿಶೇಷ ಪೂಜೆ, ಸ್ವಚ್ಛತೆ ಇರುವುದಿಲ್ಲ.

ಭಾರತದ ದಕ್ಷಿಣ ಭಾಗಕ್ಕೆ ಈ ಚಂದ್ರ ಗ್ರಹಣದ ಎಫೆಕ್ಟ್ ಇಲ್ಲದಿರುವುದರಿಂದ ಯಾವುದೇ ಬದಲಾವಣೆ ಇಲ್ಲ ಅಂತಾ ದೇವಸ್ಥಾನಗಳ ಆಡಳಿತ ಮಂಡಳಿ ಹೇಳಿವೆ.

ಈ ತಿಂಗಳ ಕಾರ್ತಿಕ ಪೂರ್ಣಿಮೆ ವಿಶೇಷವಾಗಿರಲಿದ್ದು, ನವೆಂಬರ್ 19 ಕಾರ್ತಿಕ ಪೂರ್ಣಿಮೆಯ ದಿನ ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರ ಗ್ರಹಣ ನಡೆಯಲಿದೆ.

ಭಾಗಶಃ ಚಂದ್ರಗ್ರಹಣ ಇದೇ ನವೆಂಬರ್ 19ರಂದು ಸಂಭವಿಸಲಿದೆ. ವಿಶೇಷವಾಗಿ ಚಂದ್ರ ಮತ್ತು ಭೂಮಿಯ ನಡುವಿನ ಹೆಚ್ಚಿನ ಅಂತರದಿಂದಾಗಿ, ಈ ಗ್ರಹಣವು ದೀರ್ಘಾವಧಿಯವರೆಗೆ ಇರುತ್ತದೆ.

ಈ ಭಾಗಶಃ ಚಂದ್ರ ಗ್ರಹಣದ ಅವಧಿ 3 ಗಂಟೆ 28 ನಿಮಿಷ 24 ಸೆಕೆಂಡುಗಳು. ಇದಕ್ಕೂ ಮೊದಲು 18 ಫೆಬ್ರವರಿ 1440 ರಂದು ಅಂತಹ ದೀರ್ಘ ಚಂದ್ರ ಗ್ರಹಣ ಸಂಭವಿಸಿತ್ತು. ಅಂದರೆ, ಇಷ್ಟು ದೀರ್ಘಾವಧಿಯ ಈ ಭಾಗಶಃ ಚಂದ್ರಗ್ರಹಣವು 580 ವರ್ಷಗಳ ನಂತರ ಸಂಭವಿಸುತ್ತಿದೆ.

ಈ ವೇಳೆ, ಸುಮಾರು 1:30 ಮಧ್ಯಾಹ್ನ ನಂತರ ಪೂರ್ಣ ಚಂದ್ರಗ್ರಹಣವು ಪೂರ್ಣ ಪ್ರಮಾಣದಲ್ಲಿರಲಿದೆ. ಈ ಸಂದರ್ಭದಲ್ಲಿ ಭೂಮಿಯು 97 ಪ್ರತಿಶತದಷ್ಟು ಪೂರ್ಣ ಚಂದ್ರನನ್ನು ಸೂರ್ಯನ ಕಿರಣಗಳಿಂದ ಮರೆಮಾಡುತ್ತದೆ ಎಂದು ನಾಸಾ ಹೇಳಿದೆ.

ಈ ಚಂದ್ರ ಗ್ರಹಣವು 3 ಗಂಟೆ 28 ನಿಮಿಷ ಹಾಗೂ 23 ಸೆಕೆಂಡುಗಳ ಕಾಲ ಇರಲಿದೆ. ಹಾಗಾಗಿಯೇ ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ ಎನಿಸಿಕೊಳ್ಳಲಿದೆ. 2001ರಿಂದ 2100ವರೆಗಿನ ಅವಧಿಯಲ್ಲಿ ಇಷ್ಟು ಸುದೀರ್ಘವಾದ ಯಾವುದೇ ಚಂದ್ರ ಗ್ರಹಣ ಇರುವುದಿಲ್ಲ. ಹಾಗಾಗಿಯೇ ಇದನ್ನು ಶತಮಾನದ ಸುದೀರ್ಘ ಚಂದ್ರ ಗ್ರಹಣ ಎಂದು ಕರೆಯಲಾಗುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.

English summary
Lunar Eclipse 2021: No changes in pooja timings and cleaning at dakshina kannada district temples.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion