ಮಂಗಳೂರು ಕದ್ರಿ ಪಾರ್ಕಿನಲ್ಲಿ ಎಲೆಕ್ಷನ್ ಕಿಲಾಡಿ

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಂಗಳೂರಿನ ಪ್ರಸಿದ್ದ ಕದ್ರಿ ಪಾರ್ಕಿನಲ್ಲಿ ಮತಯಾಚಿಸುತ್ತಿದ್ದಾರಂತೆ ಮಾರಾಯ್ರೇ.. ಎನ್ನುವ ಸುದ್ದಿಯನ್ನು ಕರಾವಳಿ ನಗರದಲ್ಲಿ ರವಿವಾರ (ಏ 13) ಯಾರೋ ಹಬ್ಬಿಸಿದ್ದರು. ನಮೋ ಅಲೆ ಇರಬಹುದಾದ ಮಂಗಳೂರಿನಲ್ಲಿ ಮೋದಿ ಅವರನ್ನು ಕಣ್ಣಾರೆ ಕಂಡು "ಪುನೀತರಾಗೋಣ" ಎಂದು ಜನ ಕದ್ರಿ ಪಾರ್ಕಿನತ್ತ ಮುಖ ಮಾಡಲಾರಂಭಿಸಿದರು.

ಆದರೆ, ಮೋದಿಯನ್ನು ನೋಡುವ ತವಕದಿಂದ ಪಾರ್ಕಿಗೆ ದೌಡಾಯಿಸಿದ್ದ ಜನರಿಗೆ ಕಂಡಿದ್ದು ನರೇಂದ್ರ ಮೋದಿಯನ್ನೇ ದಿಟ್ಟಾ ಹೋಲುವ ವ್ಯಕ್ತಿಯೊಬ್ಬರು ದಕ್ಷಿಣಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಮತಯಾಚಿಸುತ್ತಿದ್ದದ್ದು. ಹಹಾ..

ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವ ಗಾದೆ ಮಾತಿದೆ ನೋಡಿ. ಆದರೆ ಈಗ ಚುನಾವಣೆಯ ಸಮಯವಾಗಿರುವುದರಿಂದ 'ವೋಟು ನಿಮಿತ್ತಂ ಬಹುಕೃತ ವೇಷಂ' ಎಂದು ಈ ವ್ಯಕ್ತಿ ಮೋದಿ ವೇಷ ಧರಿಸಿ ಬಿಜೆಪಿ ಪರ ಮತಯಾಚಿಸುತ್ತಿದ್ದಾರೆ.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಎಂದೇ ಹೆಸರು ಪಡೆದಿರುವ ಮತ್ತು ಪ್ರಸಕ್ತ ಲೋಕಸಭಾ ಚುನಾವಣೆಯ ಅಭ್ಯರ್ಥಿಯೊಬ್ಬರು ಸ್ಪೈಡರ್ ಮ್ಯಾನ್ ವೇಷ ಧರಿಸಿ ಗೋಡೆ ಏರಿ ಜನರಲ್ಲಿ ಮತಯಾಚಿಸುತ್ತಿದ್ದಾರಂತೆ. ಅಂತೆಯೇ, ಮಂಗಳೂರಿನಲ್ಲಿ ಮೋದಿ ವೇಷ ಧರಿಸಿ ಜನರನ್ನು ಮೋಡಿ ಮಾಡಲು ಹೊರಟಿದ್ದಾರೆ, ಇಲ್ಲಿನ ವಸಂತ ಪ್ರಭು ಎನ್ನುವ ವಕ್ತಿ.

ಕ್ಷೇತ್ರದಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಮತ್ತು ಕಾಂಗ್ರೆಸ್ಸಿನ ಜನಾರ್ಧನ ಪೂಜಾರಿ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಕದ್ರಿ ಪಾರ್ಕ್ ಬಗ್ಗೆ: ಆಕಾಶವಾಣಿ ಸ್ಟುಡಿಯೋದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಈ ಪಾರ್ಕನ್ನು ಕದ್ರಿಗುಡ್ಡೆ ಎಂದೂ ಕರೆಯುವುದುಂಟು. ಮಂಗಳೂರಿನ ಅತಿದೊಡ್ಡ ಪಾರ್ಕ್ ಆಗಿರುವ ಕದ್ರಿ ಪಾರ್ಕಿನಲ್ಲಿ ಸರ್ಪೋದ್ಯಾನ, ಮೃಗಾಲಯ ಮುಂತಾವವನ್ನೂ ಕಾಣಬಹುದಾಗಿದೆ. ಕುಟುಂಬ ಸಮೇತ ವಾರಾಂತ್ಯದ ವಿಹಾರಕ್ಕೆ ಹೇಳಿ ಮಾಡಿಸಿದ ಪಾರ್ಕ್ ಇದಾಗಿದೆ.

ಮೋದಿ ಅಭಿಮಾನಿ

ಮೋದಿ ಅಭಿಮಾನಿ

ಕಟ್ಟಾ ನರೇಂದ್ರ ಮೋದಿ ಬೆಂಬಲಿಗರಾಗಿರುವ ವಸಂತ ಪ್ರಭು ಎನ್ನುವ ಈ ವ್ಯಕ್ತಿ ಮಂಗಳೂರಿನ ಮಣ್ಣುಗುಡ್ಡೆ ನಿವಾಸಿ.

ಏಕೈಕ ಉದ್ದೇಶ

ಏಕೈಕ ಉದ್ದೇಶ

ವಸಂತ ಪ್ರಭು ಅವರ ಏಕೈಕ ಮಹದಾಶೆಯೆಂದರೆ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಗಿ ಕಾಣುವುದು.

ಮಂಗಳೂರು ನಗರದಾದ್ಯಂತ ಪ್ರಚಾರ

ಮಂಗಳೂರು ನಗರದಾದ್ಯಂತ ಪ್ರಚಾರ

ಮಂಗಳೂರು ನಗರವನ್ನು ಸುತ್ತಾಡುತ್ತಾ ಮೋದಿ ದೇಶದ ಪ್ರಧಾನಿಯಾಗಬೇಕು. ಹಾಗಾಗಿ ನಳಿನ್ ಕುಮಾರ್ ಕಟೀಲ್ ಅವರಿಗೆ ಮತ ನೀಡಿ ಎಂದು ಜನರಲ್ಲಿ ವಸಂತ ಪ್ರಭು ಕೇಳಿಕೊಳ್ಳುತ್ತಿದ್ದಾರೆ.

ನಮೋ ಬ್ರಿಗೇಡ್

ನಮೋ ಬ್ರಿಗೇಡ್

ಮಂಗಳೂರಿನಲ್ಲಿ ಜನ್ಮ ತಾಳಿದ ನಮೋ ಬ್ರಿಗೇಡಿನ ಸುಮಾರು 25 ಜನ ಸದಸ್ಯರು ವಸಂತ ಪ್ರಭು ಜೊತೆ ಮತಯಾಚನೆಯಲ್ಲಿ ತೊಡಗಿದ್ದಾರೆ.

ಮೋದಿ ಮಂಗಳೂರಿಗೆ ಬಂದಿದ್ದಾಗ

ಮೋದಿ ಮಂಗಳೂರಿಗೆ ಬಂದಿದ್ದಾಗ

ನರೇಂದ್ರ ಮೋದಿ ಈ ಹಿಂದೆ ಮಂಗಳೂರಿಗೆ ಬಂದಿದ್ದಾಗ ವಸಂತ ಪ್ರಭು ಮೋದಿ ರೂಪದಲ್ಲಿ ಕಾಣಿಸಿಕೊಂಡು ಅನೇಕರನ್ನು ಚಕಿತಗೊಳಿಸಿದ್ದರು.

ಕದ್ರಿ ಪಾರ್ಕ್

ಕದ್ರಿ ಪಾರ್ಕ್

ಭಾನುವಾರ (ಏ 13) ಕದ್ರಿ ಪಾರ್ಕಿನಲ್ಲಿ ಮೋದಿ ವೇಷ ಧರಿಸಿ ವಸಂತ ಪ್ರಭು ಕದ್ರಿ ಪಾರ್ಕ್, ಸಿಟಿ ಸೆಂಟರಿಗೆ ತೆರಳಿ ಕಟೀಲ್ ಪರ ಮತಯಾಚಿಸುವುದರ ಜೊತೆಗೆ ಜನರ ಆಕರ್ಷಣೆಯ ಕೇಂದ್ರವಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+