Get Updates
Get notified of breaking news, exclusive insights, and must-see stories!

ಕರೆಂಟ್ ಬಿಲ್ ನೋಡಿ ಶಾಕ್ ಆದ ಕಲ್ಲುಗುಂಡಿ ಗ್ರಾಮಸ್ಥರು!

ಮಂಗಳೂರು, ಡಿಸೆಂಬರ್ 20: ತಿಂಗಳ ವಿದ್ಯುತ್ ಬಿಲ್ ಇಂತಿಷ್ಟೇ ಬರುತ್ತದೆ ಎಂಬ ಲೆಕ್ಕಾಚಾರ ಪ್ರತಿಯೊಬ್ಬರಿಗೂ ಇರುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಬಿಲ್ ಕಡಿಮೆ. ಆದರೆ ತಿಂಗಳಿಗೆ 80 , 100 ರೂಪಾಯಿ ವಿದ್ಯುತ್ ಬಿಲ್ ಬರುತ್ತಿದ್ದ ಆ ಮನೆ ಮಂದಿಗೆ ಈ ಬಾರಿಯ ಬಿಲ್ ನೋಡಿ ಮನೆಯ ಮೇಲ್ಛಾವಣಿಯೇ ತಲೆ ಮೇಲೆ ಬಿದ್ದಂತ ಅನುಭವಾಗಿದೆ.

ಹೌದು, ವಿದ್ಯುತ್ ಸರಬರಾಜು ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಮನೆಗಳಿಗೆ ನೀಡುವ ಬಿಲ್ ಗಳು ಮನೆ ಮಂದಿಗೆಲ್ಲಾ ಕರೆಂಟ್ ಶಾಕ್ ನೀಡುತ್ತಿವೆ. ಸುಳ್ಯದ ಗ್ರಾಮೀಣ ಭಾಗ ಕಲ್ಲುಗುಂಡಿಯ ಕೆಲವು ಮನೆಗಳಿಗೆ ವಿತರಣೆಯಾದ ಬಿಲ್ ಗಳು ಮನೆ ಮಂದಿಗೆ ಶಾಕ್ ನೀಡಿದೆ. ತಿಂಗಳಿಗೆ 80 ರೂಪಾಯಿಯಂತೆ ಎರಡು ತಿಂಗಳಿಗೆ 230ರೂಪಾಯಿ ಆಗುತ್ತಿದ್ದ ಕರಂಟ್ ಬಿಲ್ ಈ ಬಾರಿ ಬರೋಬ್ಬರಿ 9000 ಬಂದಿದೆ.

Electricity bills shocks villagers of Sullia

ಇನ್ನೊಂದು ಕಡೆ ಅಂಗಡಿಯಾತನಿಗೆ ತಿಂಗಳಿಗೆ 1500 ಬರುತ್ತಿದ್ದ ಕರೆಂಟ್ ಬಿಲ್ ಈ ಬಾರಿ 7 ಲಕ್ಷದ 66 ಸಾವಿರ ರೂಪಾಯಿ ಬಿಲ್‌ ಬಂದಿದೆ. ಪ್ರತಿ ಬಾರಿಯೂ ಮೆಸ್ಕಾ ನಿಂದ ಈ ರೀತಿಯ ಲೆಕ್ಕವಿಲ್ಲದ ಬಿಲ್ ಬರುತ್ತಿದ್ದು, ಕೆಲವು ಗ್ರಾಹಕರು ಇದನ್ನು ನಿಜವೆಂದೇ ನಂಬಿ ಪಾವತಿ ಮಾಡುತ್ತಿದ್ದಾರೆ.

ಅಲ್ಲದೇ ಪ್ರಶ್ನಿಸಲು ಹೋದಲ್ಲಿ ಮೆಸ್ಕಾಂ ಅಧಿಕಾರಿಗಳು ತಮ್ಮ ತಪ್ಪನ್ನು ಸಮರ್ಥಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+