ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ ಅನಾವರಣ

|
Google Oneindia Kannada News

ಮಂಗಳೂರು, ಡಿಸೆಂಬರ್‌ 6: ಡಿಸೆಂಬರ್ 6ರಂದು 66ನೇ ಮಹಾಪರಿನಿರ್ವಾಣ ದಿನದಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ರಾಜ್ಯಪಾಲರಾದ ಥಾವರ್‌ಚಂದ್‌ ಗೊಹ್ಲೋಟ್‌ ಅವರಿಂದ ಅನಾವರಣಗೊಳಿಸಲಾಯಿತು.

ಪ್ರತಿಮೆಯು ಒಂಬತ್ತು ಅಡಿ ಎತ್ತರ, 600 ಕೆಜಿ ತೂಕ ಮತ್ತು ಕಂಚಿನಿಂದ ಮಾಡಲ್ಪಟ್ಟಿದೆ. ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಕಟ್ಟಡದ ಮುಂಭಾಗದಲ್ಲಿರುವ ಉದ್ಯಾನದಲ್ಲಿ ಪ್ರತಿಮೆಯು ನಿರ್ಮಿಸಲ್ಪಟ್ಟಿದೆ. ಪ್ರತಿಮೆಯ ಅಂದಾಜು ವೆಚ್ಚ 14.30 ಲಕ್ಷ ರೂಪಾಯಿ ಆಗಿದೆ. ಅಂಬೇಡ್ಕರ್ ಪ್ರತಿಮೆಯು 42 ವರ್ಷಗಳ ಹಿಂದಿನ ವಿಶ್ವವಿದ್ಯಾನಿಲಯದ ಬಹುಕಾಲದ ಕನಸಾಗಿತ್ತು ಎಂದು ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದ್ದಾರೆ.

ಹಿಜಾಬ್‌ಗೆ ಪರೋಕ್ಷವಾಗಿ ಬೆಂಬಲ: ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡ ಶಾಸಕಹಿಜಾಬ್‌ಗೆ ಪರೋಕ್ಷವಾಗಿ ಬೆಂಬಲ: ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡ ಶಾಸಕ

ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಅಧೀನದಲ್ಲಿರುವ ಸಮಿತಿಯು ಪ್ರತಿಮೆ ನಿರ್ಮಾಣದ ಮೇಲ್ವಿಚಾರಣೆ ನಡೆಸುತ್ತಿದೆ. ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಪ್ರತಿಮೆ ಸ್ಥಾಪನೆಗೆ ಮುಂದಾಗಿತ್ತು. ಕ್ಯಾಂಪಸ್‌ನ ಮಂಗಳಾ ಸಭಾಂಗಣದ ಬಳಿಯೂ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

Dr BR Ambedkar statue unveiled at Mangalore University

ಜನವರಿ 12ರಂದು ವಿವೇಕಾನಂದ ಜಯಂತಿ ಎಂದು ಕರೆಯಲ್ಪಡುವ ರಾಷ್ಟ್ರೀಯ ಯುವ ದಿನದಂದು ಪ್ರತಿಮೆಯನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ. ಏತನ್ಮಧ್ಯೆ, ಪ್ರತಿಮೆಯ ಅಮೃತಶಿಲೆಯ ಫಲಕದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರ ಹೆಸರನ್ನು ಸೇರಿಸುವ ಕ್ರಮವನ್ನು ವಿರೋಧಿಸಿ ಮಂಗಳೂರು ವಿವಿಯ ಎಸ್‌ಸಿ/ಎಸ್‌ಟಿ ನೌಕರರು ಅರ್ಜಿ ಸಲ್ಲಿಸಿದ್ದಾರೆ.

ಅಮೃತಶಿಲೆಯ ಫಲಕದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಶಾಸನಬದ್ಧ ಅಧಿಕಾರಿಗಳು ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳ ಹೆಸರನ್ನು ಇಡುವುದು ಸಂಪ್ರದಾಯವಾಗಿದೆ. ಆದರೆ, ಫಲಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರ ಹೆಸರನ್ನು ನಮೂದಿಸಲಾಗಿದೆ. ವೆಚ್ಚವನ್ನು ಮಂಗಳೂರು ವಿಶ್ವವಿದ್ಯಾನಿಲಯವೇ ಭರಿಸಿರುವುದರಿಂದ ನಿರ್ದೇಶಕರ ಹೆಸರನ್ನು ನಮೂದಿಸಿರುವುದು ಅಪ್ರಸ್ತುತವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಪ್ರತಿಮೆಯ ಶ್ರೇಯಸ್ಸನ್ನು ನಿರ್ದೇಶಕರು ತಗೆದುಕೊಳ್ಳುವುದು ಸರಿಯಲ್ಲ ಎಂದು ಉಪಕಲಪತಿಗಳಿಗೆ ಅರ್ಜಿ ನೀಡಲಾಗಿದೆ.

Mangalore University: ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಹೇಮಾವತಿ ವಿ. ಹೆಗ್ಗಡೆಗೆ ಗೌರವ ಡಾಕ್ಟರೇಟ್Mangalore University: ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಹೇಮಾವತಿ ವಿ. ಹೆಗ್ಗಡೆಗೆ ಗೌರವ ಡಾಕ್ಟರೇಟ್

ಇದಕ್ಕೆ ಪ್ರತಿಕ್ರಿಯಿಸಿದ ಉಪಕುಲಪತಿ, ಪ್ರತಿಮೆಯ ಪ್ರಸ್ತಾವನೆಯನ್ನು ಡಾ ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರವು ಪ್ರಸ್ತಾಪಿಸಿದೆ. ಕೇಂದ್ರದ ನಿರ್ದೇಶಕರ ಮಾರ್ಗದರ್ಶನದ ಸಮಿತಿಯು ಪ್ರತಿಮೆಯ ಕೆಲಸವನ್ನು ಮೇಲ್ವಿಚಾರಣೆ ಮಾಡಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯೂ ಆಗಿರುವ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ನಂತರ ಪ್ರತಿಮೆಯ ಕೆಳಗೆ ಅಮೃತಶಿಲೆಯ ಫಲಕವನ್ನು ಇರಿಸಲಾಗುವುದು. ನಿಯಮ ಮತ್ತು ಮಾರ್ಗಸೂಚಿಯಂತೆ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಈ ಬಗ್ಗೆ ಪ್ರಾತಿನಿಧ್ಯ ನೀಡಿದವರ ಗಮನಕ್ಕೆ ತರಲಾಗಿದೆ ಎಂದರು.

English summary
Governor Thawarchand Gohlot unveiled the statue of Dr BR Ambedkar at Mangalore University on 6th December on the 66th Mahaparinirvana Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X