ವಿಮಾನ ನಿಲ್ದಾಣದಲ್ಲಿ 54 ಲಕ್ಷ ಮೌಲ್ಯದ ಚಿನ್ನ ವಶ

ಮಂಗಳೂರು, ಜೂ. 5: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಟ್ಟು 54.20 ಲಕ್ಷ ರೂ. ಮೌಲ್ಯದ 2 ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬುಧವಾರ ಜೂ.4ರಂದು ದುಬೈಯಿಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಫ್ಲೈಟ್‌‌ ನಲ್ಲಿ ಬಂದಿಳಿದ ವಿಮಾನದ ಪ್ರಯಾಣಿಕ ಕಾಸರಗೋಡು ಜಿಲ್ಲೆ ಕಲ್ಲಂಗಾಯ್‌ ನಿವಾಸಿ ಇಬ್ರಾಹಿಂ ಖಲೀಲ್‌‌ ಅಕ್ರಮವಾಗಿ ಶೂ ಒಳಗಡೆ ಚಿನ್ನವನ್ನು ಸಾಗಿಸುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ.[ಉಡುಪಿ: ಶಾಸಕರಿಗೆ ಟೋಪಿ ಹಾಕಿದ ವಿದ್ಯಾರ್ಥಿ‌ಗಳು]

 mangalore air port
ಆರೋಪಿಯನ್ನು ಸಿಟಿ ಸಿವಿಲ್‌ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಜು. 17ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕಸ್ಟಮ್ಸ್‌ ಅಸಿಸ್ಟೆಂಟ್‌ ಕಮಿಷನರ್‌ ಪ್ರವೀನ್‌ ವಿನೋದ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕಮಿಷನರ್‌ ಡಿ. ಪುರುಷೋತ್ತಮ್‌ ಮಾರ್ಗದರ್ಶನದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.[ಮಂಗಳೂರು: ಅಪಘಾತದಲ್ಲಿ ಬಾಲಕ ಸಾವು, ಗುರುಪುರ ಪ್ರಕ್ಷುಬ್ದ]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+