'ಅಕ್ರಮ ಕಟ್ಟಡದಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ತೆರೆದಿದೆ'
ಮಂಗಳೂರು, ಏಪ್ರಿಲ್ 05:ಕಟ್ಟಡ ಮಾಲೀಕರು ಪ್ರಮಾಣಪತ್ರ ಪಡೆಯದ ಕಟ್ಟಡದಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಚುನಾವಣಾ ಕಚೇರಿಯನ್ನು ತೆರೆದಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಗರದ ಬೆಂದೂರ್ ವೆಲ್ ನಲ್ಲಿ ಜೋಕೀಂ ಲೂವಿಸ್ ಪಿಂಟೋ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡವನ್ನು ಕಾಂಗ್ರೆಸ್ ಬಳಸಿಕೊಂಡಿರುವುದು ಅದರ ನೈಜ ಅಕ್ರಮ ಸಂಸ್ಕೃತಿಯನ್ನು ಅನಾವಣರಣಗೊಳಿಸಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಚುನಾವಣಾ ಕಚೇರಿ ಇರುವ ಕಟ್ಟಡ ಮಾಲೀಕರು ಕಟ್ಟಡ ಪೂರ್ಣಗೊಂಡಿರುವ ಪ್ರಮಾಣಪತ್ರ ಪಡೆದಿಲ್ಲ.ಮಂಗಳೂರು ಮಹಾನಗರ ಪಾಲಿಕೆಯ ಪ್ರಕಾರ ಪ್ರಮಾಣ ಪತ್ರ ಪಡೆಯದೇ ಬಳಸಿಕೊಂಡರೆ ಅದು ಅಕ್ರಮ ಚಟುವಟಿಕೆಯಾಗಲಿದೆ.

ಚುನಾವಣೆ ಮೊದಲೇ ಇಂತಹ ಅಕ್ರಮ ಚಟುವಟಿಕೆ ನಡೆಸುವ ಮಾನಸಿಕತೆಯನ್ನು ತೋರ್ಪಡಿಸಿರುವ ಕಾಂಗ್ರೆಸ್ ಪಕ್ಷವು ಚುನಾವಣೆ ಬಳಿಕ ಇನ್ನು ಹೆಚ್ಚಿನ ಅಕ್ರಮಗಳಿಗೆ ದಾರಿ ಮಾಡಿ ಕೊಡಲಿದೆ ಎಂದು ವೇದವ್ಯಾಸ ಕಾಮತ್ ದೂರಿದರು.












Click it and Unblock the Notifications