Love jihad: ಮಂಗಳೂರಿನಲ್ಲಿ ಲವ್ ಜಿಹಾದ್ ತಡೆಯಲು ಸಹಾಯವಾಣಿ ಆರಂಭಿಸಿದ ಭಜರಂಗದಳ
ಮಂಗಳೂರು, ಡಿಸೆಂಬರ್, 30: ಮಂಗಳೂರಿನಲ್ಲಿ ಹೆಚ್ವುತ್ತಿರುವ ಲವ್ ಜಿಹಾದ್ ಪ್ರಕರಣಗಳಿಗೆ ಕಡಿವಾಣ ಹಾಕಲು ಹಿಂದೂ ಸಂಘಟನೆಗಳು ಸಹಾಯವಾಣಿಯನ್ನು ಆರಂಭಿಸಿವೆ.
ಮನೆಯಲ್ಲಿ, ನೆರೆಹೊರೆಗಳಲ್ಲಿ, ಊರು ಹಳ್ಳಿಗಳಲ್ಲಿ ಲವ್ ಜಿಹಾದ್ ಪ್ರಕರಣ ಕಂಡುಬಂದರೆ ತಕ್ಷಣ ಸಂಪರ್ಕಿಸಿ ಎಂದು ಎರಡು ವಾಟ್ಸ್ಆ್ಯಪ್ ಸಂಖ್ಯೆಗಳನ್ನು ನೀಡಲಾಗಿದೆ. ಅಲ್ಲದೆ ಇಮೇಲ್ ಐಡಿಯನ್ನು ನೀಡಲಾಗಿದೆ. ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಹಿಂದೂ ಸಂಘಟನೆಗಳು ಕರೆ ನೀಡಿದೆ. ಶಾಲೆ, ಕಾಲೇಜು ಕ್ಯಾಂಪಸ್, ಕೆಲಸ ಮಾಡುವ ಸ್ಥಳಗಳಲ್ಲಿ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಆದ್ದರಿಂದ ಲವ್ ಜಿಹಾದ್ ಪ್ರಕರಣ ಕಂಡುಬಂದಲ್ಲಿ ಹೆಲ್ಪ್ ಲೈನ್ ನಂಬರ್‌ಗೆ ಸಂಪರ್ಕಿಸಿ. ಪೋಷಕರು ಲವ್ ಜಿಹಾದ್ ಬಗ್ಗೆ ಎಚ್ಚರ ವಹಿಸಿ, ಮಕ್ಕಳ ಬಗ್ಗೆ ಸಂಶಯವಿದ್ದಲ್ಲಿ ಸಂಕೋಚ ಪಡದೆ ಸಂಪರ್ಕಿಸಬಹುದು. ಅಗತ್ಯವಿದ್ದಲ್ಲಿ ಕಾನೂನಿನ ಸಲಹೆಗಳನ್ನು ನೀಡಲಾಗುತ್ತದೆ. ಲವ್ ಜಿಹಾದ್ ಮುಕ್ತವನ್ನಾಗಿ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಹಾಗೆಯೇ "ಲವ್ ಜಿಹಾದ್ ಮುಕ್ತ ಹಿಂದೂ ಸಮಾಜ ನಮ್ಮ ಗುರಿ" ಎನ್ನುವ ಟ್ಯಾಗ್ ಲೈನ್‌ನ ಪೋಸ್ಟರ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಜಲೀಲ್ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಬಂಧನ: ಸುರತ್ಕಲ್‌ನಲ್ಲಿ ನಿಯಮ ಸಡಿಲಿಕೆ
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಭಜರಂಗದ ಕಾರ್ಯಕರ್ಯ ಪುನೀತ್ ಅತ್ತಾವರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

1. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದೆ.
2. ನಮ್ಮ ಮನೆ, ನೆರೆಹೊರೆ, ಊರು ಹಳ್ಳಿಗಳಲ್ಲಿ ಲವ್ ಜಿಹಾದ್ ಪ್ರಕರಣ ಕಂಡುಬಂದರೆ ತಕ್ಷಣ ಸಂಪರ್ಕಿಸಿ.
3. ಶಾಲೆ, ಕಾಲೇಜು ಕ್ಯಾಂಪಸ್, ಕೆಲಸ ಮಾಡುವ ಸ್ಥಳಗಳಲ್ಲಿ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಲವ್ ಜಿಹಾದ್ ಪ್ರಕರಣ ಕಂಡುಬಂದಲ್ಲಿ ಹೆಲ್ಪ್ ಲೈನ್ ನಂಬರ್‌ಗೆ ಸಂಪರ್ಕಿಸಿ.
4. ಪೋಷಕರು ಲವ್ ಜಿಹಾದ್ ಬಗ್ಗೆ ಎಚ್ಚರ ವಹಿಸಿ, ಮಕ್ಕಳ ಬಗ್ಗೆ ಸಂಶಯವಿದ್ದಲ್ಲಿ ಸಂಕೋಚ ಪಡದೆ ಸಂಪರ್ಕಿಸಿ.
5. ಲವ್ ಜಿಹಾದ್ ಪ್ರಕರಣಗಳ ವಿವರ / ಫೋಟೋ ಇತ್ಯಾದಿ ವಾಟ್ಸಪ್ಪ್ ಮೂಲಕ ಕಳುಹಿಸಬಹುದು.
6. ಲವ್ ಜಿಹಾದ್‌ಗೆ ಸಂಬಂಧಪಟ್ಟ ಯಾವುದೇ ಸಲಹೆ, ದೂರುಗಳನ್ನು ಇ ಮೇಲ್ ಮೂಲಕ ಕೂಡ ಕಳುಹಿಸಬಹುದು.

7. ಅಗತ್ಯವಿದ್ದಲ್ಲಿ ಕಾನೂನಿನ ಸಲಹೆಗಳನ್ನು ನೀಡಲಾಗುವುದು. ಮಾಹಿತಿಗಳನ್ನು ಗೌಪ್ಯವಾಗಿಡಲಾಗುವುದು.
8. ಹಾಗೆಯೇ "ಲವ್ ಜಿಹಾದ್ ಮುಕ್ತ ಹಿಂದೂ ಸಮಾಜ ನಮ್ಮ ಗುರಿ" ಎಂನ್ನುವ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದಾರೆ.
ಲವ್ ಜಿಹಾದ್ ತಡೆಗೆ ಸಹಾಯವಾಣಿ ಮೊಬೈಲ್ ಸಂಖ್ಯೆ: 9148658108, 9591658108, ಇಮೇಲ್ ಐಡಿ: [email protected]ಎಂದು ಸಂಘಟನೆ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications