ದೀಪಾವಳಿ ಬಂತು ಅಂಜಲ್ ಮೀನಿನ ಬೆಲೆ ಏರಿತು!

ಮಂಗಳೂರು, ನವೆಂಬರ್ 09 : ದೀಪಾವಳಿ ಹಬ್ಬಕ್ಕೆ ಸಿದ್ಧತೆಗಳು ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ಅಂಜಲ್ ಮೀನುಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ದೀಪಾವಳಿಯ ಸಮಯದಲ್ಲಿ ಅಂಜಲ್ ಮೀನಿಗೆ ಬೇಡಿಕೆ ಹೆಚ್ಚು, ಅದರಂತೆ ದರವೂ ಅಧಿಕವಾಗುತ್ತದೆ.

ನರಕಚತುದರ್ಶಿಯಂದು ಕರಾವಳಿಯಲ್ಲಿ ಅಂಜಲ್ ಮೀನು ಉಟಕ್ಕೆ ಹೆಚ್ಚು ಮಹತ್ವವಿದೆ. ಅಂದು ಅಂಜಲ್ ಮೀನಿನ ಖಾದ್ಯಗಳನ್ನು ಏಕೆ ಮಾಡುತ್ತಾರೆ ಎಂಬ ಬಗ್ಗೆ ಸ್ಪಷ್ಟಮಾಹಿತಿ ಯಾರ ಬಳಿಯೂ ಇಲ್ಲ. ಆದರೂ ನರಕಾಚತುದರ್ಶಿಯಂದು ಅಂಜಲ್ ಮೀನಿನ ಫ್ರೈ ಮಾಡುವುದು ವಾಡಿಕೆ. [ಕರಾವಳಿ ತೀರ ಮಂಗಳೂರಿನಲ್ಲಿ ತಿನ್ನಲು ಮೀನು ಸಿಕ್ತಿಲ್ಲ!]

fish

ಪ್ರತಿ ವರ್ಷ ದೀಪಾವಳಿ ಹಬ್ಬ ಹತ್ತಿರವಾಗುತ್ತಿದ್ದಂತೆ ಅಂಜಲ್ ಮೀನಿನ ಬೆಲೆ ಏರಿಕೆಯಾಗುತ್ತದೆ. ಅಂಜಲ್ ಮೀನಿಗೆ ಮಾರುಕಟ್ಟೆಯಲ್ಲಿ ವರ್ಷಪೂರ್ತಿ ಉತ್ತಮ ಬೆಲೆ ಇರುತ್ತದೆ. ಆದರೆ, ದೀಪಾವಳಿ ಸಮಯದಲ್ಲಿ ದರ ಹೆಚ್ಚಾಗುತ್ತದೆ ಎನ್ನುತ್ತಾರೆ ವ್ಯಾಪಾರಸ್ಥರು. [ಮೀನಿನ ಫ್ರೈ ಮಾಡುವುದು ಹೇಗೆ?]

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಂಜಲ್ ಮೀನಿನ ಉಟಕ್ಕೆ ಮಹತ್ವವಿದೆ. ಆದ್ದರಿಂದ ಹೆಚ್ಚಿನವರು ಮೀನು ಖರೀದಿ ಮಾಡುತ್ತಾರೆ. ದೀಪಾವಳಿಯ ದಿನಗಳಲ್ಲಿ 100 ಟನ್‌ಗೂ ಅಧಿಕ ಮೀನು ಸಾಮಾನ್ಯ ಮಾರುಕಟ್ಟೆಯಲ್ಲಿ ಖರ್ಚಾಗುತ್ತದೆ.

ಈ ಬಾರಿಯ ದೀಪಾವಳಿಗಾಗಿ ಹಳೆ ಬಂದರು ಪ್ರದೇಶದ ಮಾರುಕಟ್ಟೆಯ ಮೀನು ವ್ಯಾಪಾರಿಗಳು ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಅಂಜಲ್ ಮೀನುಗಳ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಮುಂದಿನ ಎರಡು ದಿನದಲ್ಲಿ ಕೆಜಿ ಮೀನಿನ ಬೆಲೆ 800 ರಿಂದ 1000 ರೂ.ವಾದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ಮಾರುಕಟ್ಟೆಯವರು.

ದೀಪಾವಳಿ ರಜೆ ಸವಿಯಲು ಮಂಗಳೂರಿಗೆ ಹೋಗಿ ಹೋಟೆಲ್‌ಗಳಲ್ಲಿ ಅಂಜಲ್ ಮೀನು ಫ್ರೈ ತೆಗೆದುಕೊಂಡಾಗ ಅದರ ತುಂಡುಗಳು ಕಿರಿದಾಗಿದ್ದರೆ ಅಚ್ಚರಿಪಡಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+