ಶೌಚಾಲಯ ಎಂದು ನಿರ್ಮಾಣ ಹಂತದ ಲಿಫ್ಟ್‌ಗೆ ಹತ್ತಿ ಮಹಿಳೆ ಸಾವು
ಮಂಡ್ಯ, ಫೆಬ್ರವರಿ 14: ಶೌಚಾಲಯ ಎಂದು ನಿರ್ಮಾಣ ಹಂತದಲ್ಲಿರುವ ಲಿಫ್ಟ್ ಒಳಗೆ ಹೋಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಲಿಫ್ಟ್ ಅನ್ನೇ ಶೌಚಾಲಯ ಎಂದು ಕಾಲಿಟ್ಟ ಮಹಿಳೆ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದೆ.ಶಾರದಮ್ಮ(62) ಮೃತರು, ಅವರು ಪಾಂಡವಪುರದ ಎಣ್ಣೆಹೊಳೆ ಕೊಪ್ಪಲಿನ ನಿವಾಸಿಯಾಗಿದ್ದಾರೆ. ಕಾಮಗಾರಿ ನಡೆಯುತ್ತಿದ್ದ ಲಿಫ್ಟ್ ರೂಮ್‌ಗೆ ಬಾಗಿಲು ಅಳವಡಿಸದೆ ಇದ್ದುದರಿಂದ ಈ ದುರ್ಘಟನೆ ಸಂಭವಿಸಿದೆ.
ಮೊಮ್ಮಗಳೊಂದಿಗೆ ಡಯಾಲಿಸಿಸ್ ಗೆ ನೆರವಾಗಲು ಈ ಮಹಿಳೆ ಬಂದಿದ್ದರು ಎನ್ನಲಾಗಿದೆ. ಘಟನೆಯಿಂದಾಗಿ ಕೆಲಕಾಲ ಆಸ್ಪತ್ರೆ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕತ್ತಲೆಯಲ್ಲಿ ಶೌಚಾಲಯದ ಕೊಠಡಿ ಎಂದು ಲಿಫ್ಟ್ ಕೋಣೆಗೆ ಮಹಿಳೆ ಹೋಗಿದ್ದಾರೆ. ಈ ವೇಳೆ ಈ ದುರ್ಘಟನೆ ನಡೆದಿದೆ.












Click it and Unblock the Notifications