ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಂಡವಪುರದಲ್ಲಿ ನ. 25ರಿಂದ ಮೂರು ದಿನಗಳ ಪುನೀತೋತ್ಸವ; ಒಂದು ಸಾವಿರ ವಿದ್ಯಾರ್ಥಿನಿಯರಿಂದ ಗಾಯನ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಪಾಂಡವಪುರ, ನವೆಂಬರ್‌, 23: ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನವೆಂಬರ್ 25, 26, 27ರಂದು ಮೂರು ದಿನಗಳ ಕಾಲ ಶಾಸಕ ಸಿ.ಎಸ್.ಪುಟ್ಟರಾಜು ಅವರ ನೇತೃತ್ವದಲ್ಲಿ ಪುನೀತೋತ್ಸವ ಕಾರ್ಯಕ್ರಮದಲ್ಲಿ ನಡೆಯಲಿದೆ. ಪುನೀತೋತ್ಸವ ಕಾರ್ಯಕ್ರಮದಲ್ಲಿ ಪಟ್ಟಣದ ಬಾಲಕೀಯರ ಪದವಿ ಪೂರ್ವ ಶಿಕ್ಷಣ ಸಂಸ್ಥೆಯ ಒಂದು ಸಾವಿರ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಹಾಡು ಹೇಳುವ ಮೂಲಕ ದಾಖಲೆ ನಿರ್ಮಿಸಲು ತಯಾರಾಗಿದ್ದಾರೆ.

ಒಂದು ಸಾವಿರ ವಿದ್ಯಾರ್ಥಿನಿಯರಿಂದ ಹಾಡು
ಕಾರ್ಯಕ್ರಮದಲ್ಲಿ ನಟ ಡಾ.ಪುನೀತ್‌ ರಾಜ್‌ಕುಮಾರ್‌ಗಾಗಿ ಹಾಡು ಹೇಳಲು ವಿದ್ಯಾರ್ಥಿನಿಯರು ತರಬೇತಿ ನಡೆಸಿದರು. ಕಾರ್ಯಕ್ರಮದಲ್ಲಿ ಒಂದು ಸಾವಿರ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಪುನೀತ್‌ ರಾಜ್‌ಕುಮಾರ್ ಕುರಿತು ಹಾಡು ಹೇಳಲಿದ್ದು, ಈ ಹಿನ್ನೆಲೆ ಪಾಂಡವಪುರ ಪಟ್ಟಣದಲ್ಲಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಎಲ್ಲಾ ವಿದ್ಯಾರ್ಥಿನಿಯರು ಹಾಡುವ ಹೇಳಲು ತರಬೇತಿ ಪಡೆದರು. ಕಾರ್ಯಕ್ರಮದಲ್ಲಿ ನಾಡಗೀತೆ ಸೇರಿದಂತೆ ಹಲವು ಜಾನಪದ ಗೀತೆಗಳು ಹಾಗೂ ಪುನೀತ್‌ರಾಜ್‌ಕುಮಾರ್ ಅವರ ಕುರಿತ ಹಲವು ಹಾಡುಗಳನ್ನು ಹಾಡಲಿದ್ದಾರೆ.

ಕಾಡಿನ ಸಂರಕ್ಷಣೆ ಸಂದೇಶದೊಂದಿಗೆ ಮಗುವಿನ ಫೋಟೋಶೂಟ್‌ ಮಾಡಿಸಿದ ಅಪ್ಪು ಅಭಿಮಾನಿಕಾಡಿನ ಸಂರಕ್ಷಣೆ ಸಂದೇಶದೊಂದಿಗೆ ಮಗುವಿನ ಫೋಟೋಶೂಟ್‌ ಮಾಡಿಸಿದ ಅಪ್ಪು ಅಭಿಮಾನಿ

ಸುಮಾರು ಒಂದು ಗಂಟೆಗೂ ಅಧಿಕ ಕಾಲ ಪಾಂಡವ ಕ್ರೀಡಾಂಗಣದಲ್ಲಿ ಒಂದು ಸಾವಿರ ವಿದ್ಯಾರ್ಥಿನಿಯರು ಪ್ರಾಕ್ಟೀಸ್ ನಡೆಸಿದರು. ಒಂದು ಸಾವಿರ ವಿದ್ಯಾರ್ಥಿನಿಯರು ಏಕಕಾಲದಲ್ಲಿ ತೆರೆದ ಬೃಹತ್ ವೇದಿಕೆಯಲ್ಲಿ ಹಾಡು ಹೇಳುತ್ತಿರುವುದು ಇದೇ ಮೊದಲಾಗಿದೆ. ಇದೊಂದು ದಾಖಲೆಯ ಪುಟ ಸೇರಲಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಅವರ ಪುತ್ರ ಸಿ.ಪಿ.ಶಿವರಾಜು ಅವರು ಹೇಳಿದರು.

Puneethotsava from November 25th at Pandavapura

ಮೂರು ದಿನಗಳ ಕಾಲ ನಡೆಯುವ ಪುನೀತೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಿ.ಪಿ.ಶಿವರಾಜು ಮನವಿ ಮಾಡಿದರು.

ಚಾಮರಾಜನಗರ ರಾಯಭಾರಿ ಆಗಲು ಸಿದ್ಧ: ರಾಘವೇಂದ್ರ ರಾಜ್‌ಕುಮಾರ್ಚಾಮರಾಜನಗರ ರಾಯಭಾರಿ ಆಗಲು ಸಿದ್ಧ: ರಾಘವೇಂದ್ರ ರಾಜ್‌ಕುಮಾರ್

ಇತ್ತೀಚೆಗಷ್ಟೇ ಅಪ್ಪು ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಮಾಡಿದ್ದು, ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಜನಸಾಗರವೇ ಸೇರಿತ್ತು. ಪುನೀತ್‌ ರಾಜ್‌ಕುಮಾರ್‌ ಅವರು ನಮ್ಮನ್ನ ಅಗಲಿ ಒಂದು ವರ್ಷ ಕಳೆದರೂ ಕೂಡ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಪ್ಪು ಸಮಾಧಿ ಬಳಿ ಈಗಲೂ ಕೂಡ ಜನಸಾಗರ ಸೇರುತ್ತಿದೆ.

Puneethotsava from November 25th at Pandavapura

ಎಷ್ಟೇ ಕೆಲಸಗಳು ಇದ್ದರೂ ಕೂಡ ಅಪ್ಪು ಸಮಾಧಿ ಬಳಿ ಬಂದು ಕುಳಿತು ವಿಶ್ರಾಂತಿ ಪಡೆಯುವವರನ್ನು ಈಗಲೂ ನೋಡಬಹುದಾಗಿದೆ. ದೂರದ ಊರುಗಳಿಂದ ಜನರು ಬರುತ್ತಿದ್ದು, ಸಮಾಧಿ ಬಳಿ ಯಾವಾಗಲೂ ಜಾತ್ರೆಯಂತೆಯೇ ಅಭಿಮಾನಿಗಳು ಸೇರಿರುತ್ತಾರೆ. ಹೀಗೆ ಪುನೀತ್‌ ರಾಜ್‌ಕುಮಾರ್‌ ರಾಜ್ಯದ ಜನರ ಮನಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದ್ದಾರೆ.

English summary
Puneethotsava Program from November 25th in Pandavapura of Mandya district, One thousand Girl students will sing, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X