KRS Dam: ಪ್ರಸ್ತುತ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಡ್ಯಾಂ ನೀರಿನ ಮಟ್ಟ ಎಷ್ಟಿದೆ ಗೊತ್ತಾ?-ಇಲ್ಲಿವೆ ಅಂಕಿಅಂಶಗಳು
KRS Dam: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೇ ಆರಂಭದಿಂದಲೇ ಆರ್ಭಟ ಶುರು ಮಾಡಿದ್ದು, ಸೊರಗಿದ್ದ ಜಲಮೂಗಳಿಗೆ ಜೀವಕಳೆ ಬಂದಾಗಿತ್ತು. ಆದರೆ ಇದೀಗ ಮತ್ತೆ ಅದೇ ಆಡಿದ್ದ ಆಟ ಎಂಬಂತೆ ಮಳೆರಾಯ ಮುನಿಸಿಕೊಂಡಿದ್ದಾನೆ.
ಇದರ ನಡುವೆಯೂ ಕೊಡಗಿನಲ್ಲಿ ತನ್ನ ರೌಧ್ರಾವತಾರವನ್ನು ಮುಂದುವರೆಸಿದ ಪರಿಣಾಮ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ ಕಳೆದ ವಾರಕ್ಕೆ ಹೋಲಿಕ್ಕಿಂತಲೂ ತುಸು ಹೆಚ್ಚಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಅಂಕಿಂಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯ ಮಂಡ್ಯ, ಬೆಂಗಳೂರು, ಮೈಸೂರು ಜಿಲ್ಲೆಗಳ ಜನರ ಜೀವನಾಡಿಯಾಗಿದ್ದು, ಇದೀಗ ನೀರಿನ ಪ್ರಮಾಣ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾದ ಹಿನ್ನೆಲೆ ಈ ಭಾಗದ ಜನರ ಮುಖದಲ್ಲಿ ಮತ್ತಷ್ಟು ಮಂದಹಾಸ ಹೆಚ್ಚಾದಂತಾಗಿದೆ.
ಇನ್ನು ನಿನ್ನೆ (ಮೇ 29) ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಕೊಡಗಿನಲ್ಲಿ ಭಾರೀ ಮಳೆಯಿಂದ ಕೃಷ್ಣರಾಜ ಸಾಗರ ಜಲಾಶಯ (KRS)ಕ್ಕೆ ಮತ್ತಷ್ಟು ನೀರು ಹರಿದುಬಂದಿದೆ ಎಂದು ತಿಳಿದುಬಂದಿದೆ. ಹಾಗಾದರೆ ಪ್ರಸ್ತುತ ನೀರಿನ ಪ್ರಮಾಣ ಹೆಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕೆಆರ್‌ಎಸ್ ಜಲಾಶಯದ ಗರಿಷ್ಠ ನಿರಿನ ಪ್ರಮಾಣ 124.80 ಅಡಿಯಾಗಿದೆ. ಇನ್ನು ಕಳೆದ ವಾರದ ಈಚೆಗೆ ಹೋಲಿಕೆ ಮಾಡಿದರೆ, ಇದೀಗ ತುಸು ನೀರು ಹರಿದುಬಂದಿದ್ದು, ಜಲಾಶಯ ನೀರಿನ ಮಟ್ಟ ಇದೀಗ 83.7 ಅಡಿಗೆ ತಲುಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಂದು ವಾರದ ಹಿಂದೆ ಜಲಾಶಯದಲ್ಲಿ 79 ಅಡಿಗಳಷ್ಟು ನೀರಿತ್ತು. ಕಾವೇರಿ ಕಣಿವೆಯಲ್ಲಿ ಮುಂಗಾರು ಪೂರ್ವ ಮಳೆ ಸುರಿದ ಪರಿಣಾಮ, ಡ್ಯಾಂಗೆ 4.7 ಅಡಿಗಳಷ್ಟು ನೀರು ಹರಿದುಬಂದಿದೆ. ಜಲಾಶಯಕ್ಕೆ 1,798 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಕುಡಿಯುವ ಉದ್ದೇಶಕ್ಕೆ ನಾಲೆ ಮತ್ತು ನದಿಯ ಮೂಲಕ 542 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
ಇದೀಗ ಜಲಾಶಯದಲ್ಲಿ 12.5 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ ಎಂದು ಕಾವೇರಿ ನೀಡರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 79.72 ಅಡಿಗಳಷ್ಟು ನೀರಿನ ಸಂಗ್ರಹ ಇತ್ತು. ಡ್ಯಾಂಗೆ 344 ಕ್ಯೂಸೆಕ್ ಒಳಹರಿವು ಇದ್ದು, 2,991 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು. ಒಟ್ಟು 10.66 ಟಿಎಂಸಿ ನೀರಿನ ಸಂಗ್ರಹ ಇತ್ತು ಎಂದು ತಿಳಿದುಬಂದಿದೆ.












Click it and Unblock the Notifications