ಮಂಡ್ಯದಲ್ಲಿ ಸುಮಲತಾ ಸ್ವಾಭಿಮಾನಿ ಸಮಾವೇಶ: ವಿರೋಧಿಗಳಿಗೆ ನಡುಕ

Recommended Video

      Lok Sabha Elections 2019 : ಮಂಡ್ಯದಲ್ಲಿ ಸುಮಲತಾ ಸ್ವಾಭಿಮಾನಿ ಸಮಾವೇಶ | Oneindia Kannada

      ಮಂಡ್ಯ, ಏಪ್ರಿಲ್ 16: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬೃಹತ್ ಸಮಾವೇಶವನ್ನು ಆಯೋಜಿಸಿದ್ದು, ಈಗಾಗಲೇ ಸಾವಿರಾರು ಮಂದಿ ಜನರು ಸಮಾವೇಶದಲ್ಲಿ ಭಾಗವಹಿಸಲು ನೆರದಿದ್ದಾರೆ.

      ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

      ಮಂಡ್ಯದ ಕಾಳಿಕಾಂಬಾ ದೇವಾಲಯದ ಬಳಿ ಬೃಹತ್ ಸಮಾವೇಶಕ್ಕೆ ವೇದಿಕೆ ಸಿದ್ಧವಾಗಿದ್ದು, ಸಮಾವೇಶಕ್ಕೆ 'ಸ್ವಾಭಿಮಾನಿಗಳ ಸಮ್ಮಿಲನ' ಎಂದು ನಾಮಕರಣ ಮಾಡಲಾಗಿದೆ.

      ಇಷ್ಟು ದಿನ ಪ್ರಚಾರದಲ್ಲಿ ಸುಮಲತಾ ಅವರಿಗೆ ಸಾಥ್ ನೀಡಿದ್ದ ಯಶ್ ಮತ್ತು ದರ್ಶನ್ ಅವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಈಗಾಗಲೇ ಯಶ್, ದರ್ಶನ್, ಸುಮಲತಾ ಅಂಬರೀಶ್ ಅವರುಗಳು ವೇದಿಕೆಗೆ ಆಗಮಿಸಿದ್ದಾರೆ.

      Independent candidate Sumalatha organizing huge rally in Mandya

      ಸಮಾವೇಶದಲ್ಲಿ ಕಾಂಗ್ರೆಸ್, ಬಿಜೆಪಿ ಬಾವುಟಗಳು ಹಾರಾಡುತ್ತಿರುವುದು ವಿಶೇಷ. ಕೆಲವರು ಕಾಂಗ್ರೆಸ್ ಮುಖಂಡ ಅತೃಪ್ತ ಚೆಲುವರಾಯಸ್ವಾಮಿ ಅವರ ಭಾವಚಿತ್ರಗಳನ್ನು ತಂದಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಇಂದು ಬಹಿರಂಗ ಪ್ರಚಾರ ಅಂತ್ಯ

      ಇಂದು ಬಹಿರಂಗ ಪ್ರಚಾರ ಅಂತ್ಯ

      ಇಂದು ಐದು ಗಂಟೆಗೆ ಬಹಿರಂಗ ಸಮಾವೇಶ ಅಂತ್ಯವಾಗಲಿದ್ದು, ಬಹಿರಂಗ ಪ್ರಚಾರ ಅಂತ್ಯ ಮಾಡುವ ಮುನ್ನಾ ಭಾರಿ ಸಮಾವೇಶವನ್ನು ಮಾಡಿ ಮತದಾನದೆಡೆಗೆ ಹೋಗುವ ತಂತ್ರವನ್ನು ಸುಮಲತಾ ಮತ್ತು ಬಳಗ ಮಾಡಿದೆ.

      ಸಮಾವೇಶದಲ್ಲಿ ಭಾರಿ ಸಂಖ್ಯೆ ಜನ

      ಸಮಾವೇಶದಲ್ಲಿ ಭಾರಿ ಸಂಖ್ಯೆ ಜನ

      ಸಮಾವೇಶಕ್ಕೆ ಈಗಾಗಲೇ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಕಹಳೆಗಳು ಎಲ್ಲೆಡೆ ಕಾಣುತ್ತಿವೆ. ಸುಮಲತಾ, ದರ್ಶನ್, ಯಶ್, ಅಭಿಷೇಕ್, ರಾಕ್‌ಲೈನ್ ವೆಂಕಟೇಶ್ ಕೆಲವು ಕಾಂಗ್ರೆಸ್ ಮುಖಂಡರು, ಬಿಜೆಪಿ ಸ್ಥಳೀಯ ಮುಖಂಡರು ಮೆರವಣಿಗೆಯಲ್ಲಿ ವೇದಿಕೆಗೆ ಆಗಮಿಸಿದ್ದಾರೆ.

      ಪವರ್‌ಪುಲ್ ಹೇಳಿಕೆಗಳು ಹೊರಬೀಳಲಿವೆ

      ಪವರ್‌ಪುಲ್ ಹೇಳಿಕೆಗಳು ಹೊರಬೀಳಲಿವೆ

      ಸುಮಲತಾ ಅವರು ಸಮಾವೇಶದಲ್ಲಿ ಜೆಡಿಎಸ್ ವಿರುದ್ಧ ಹರಿಹಾಯುವ ಸಂಭವವಿದೆ. ಜೊತೆಗೆ ಯಶ್, ದರ್ಶನ್ ಸಹ ಸುಮಲತಾ ಅವರ ಪರವಾಗಿ ಕೊನೆಯದಾಗಿ ಮತಕೇಳಲಿದ್ದು, ಕೆಲವು ಪವರ್‌ಪುಲ್ ಹೇಳಿಕೆಗಳು ಸಮಾವೇಶದಲ್ಲಿ ಕೇಳಿಬರುವ ಸರ್ವ ಸಾಧ್ಯತೆ ಇದೆ.

      ನಿಖಿಲ್ ಪರ ಎಚ್‌ಡಿಕೆ ರೋಡ್‌ ಶೋ

      ನಿಖಿಲ್ ಪರ ಎಚ್‌ಡಿಕೆ ರೋಡ್‌ ಶೋ

      ಇದೇ ಸಮಯದಲ್ಲಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿಯೇ ಇದ್ದು, ಪುತ್ರ ನಿಖಿಲ್ ಪರ ಭರ್ಜರಿಯಾಗಿ ರೋಡ್ ಶೋ ಮಾಡುತ್ತಿದ್ದಾರೆ. ಅವರಿಗೆ ಮಂಡ್ಯದ ಜೆಡಿಎಸ್ ಶಾಸಕರು ಜೊತೆ ನೀಡಿದ್ದಾರೆ. ಅತ್ತ ಸುಮಲತಾ, ಇತ್ತ ಕುಮಾರಸ್ವಾಮಿ ಇಬ್ಬರೂ ಇಂದು ಮಂಡ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+