Kabini and KRS Dam: ಕಬಿನಿ & KRS ಡ್ಯಾಂಗಳ ಭರ್ತಿಗೆ ಕ್ಷಣಗಣನೆ.! ಪ್ರಸ್ತುತ ನೀರಿನ ಮಟ್ಟದ ಅಂಕಿಅಂಶಗಳನ್ನು ತಿಳಿಯಿರಿ
Kabini and KRS Dam: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಪರಿಣಾಮ ನದಿ, ಕೆರೆ-ಕಟ್ಟೆಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಹಾಗೆಯೇ ಹಲವು ಜಲಾಶಯಗಳು ಕೂಡ ಭರ್ತಿಯಾಗುವ ಹಂತ ತಲುಪಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ಇಂದು (ಜುಲೈ 22) ಕಬಿನಿ & ಕೆಆರ್‌ಎಸ್ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
ರಾಜ್ಯದ ರಾಜಧಾನಿ ಬೆಂಗಳೂರು, ಸಕ್ಕರೆ ನಾಡು ಮಂಡ್ಯ, ಸಾಂಸ್ಕೃತಿಕ ನಗರಿ ಮಂಡ್ಯ ಜಿಲ್ಲೆಗಳ ಜೀವನಾಡಿಯಾದ ಕೆಆರ್‌ಎಸ್ ಜಲಾಶಯ ಬಹುತೇಕ ಭರ್ತಿಯಾಗಿದೆ. ಗರಿಷ್ಠ 124.80 ಅಡಿ ನೀರಿನ ಸಂಗ್ರಹ ಸಾಮರ್ಥ್ಯವುಳ್ಳ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ಇಂದಿನ ನೀರಿನ ಮಟ್ಟ 123.20 ಅಡಿ ಆಗಿದೆ. ಅಂದರೆ ಜಲಾಶಯ ಭರ್ತಿಯಾಗಲು ಇನ್ನೂ ಕೇವಲ ಒಂದು ಅಡಿಯಷ್ಟೇ ಬಾಕಿಯಿದ್ದು, ಯಾವ ಕ್ಷಣದಲ್ಲಾದರೂ ತುಂಬಬಹುದು ಎನ್ನುವ ಮಾಹಿತಿ ಇದೆ.

ಇನ್ನು ಇಂದು ಜಲಾಶಯದ ಒಳಹರಿವು 60,016 ಕ್ಯೂಸೆಕ್ ಇದ್ದರೆ, ಹೊರಹರಿವಿನ ಪ್ರಮಾಣ 52,020 ಕ್ಯೂಸೆಕ್ ಆಗಿದೆ. ಯಾವುದೇ ಕ್ಷಣದಲ್ಲಾದರೂ ತುಂಬುವ ಹಂತದಲ್ಲಿರುವ ಹಿನ್ನೆಲೆ ನದಿ ತೀರದ ಜನರನ್ನು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಹಾಗೆಯೇ 2284 ಅಡಿ ನೀರಿನ ಸಂಗ್ರಹ ಸಾಮರ್ಥ್ಯವುಳ್ಳ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 2282.40 ಅಡಿಗೆ ಬಂದು ತಲುಪಿದೆ. ತುಂಬಲು ಇನ್ನೂ ಕೆಲವೇ ಅಡಿಗಳಷ್ಟೇ ಬಾಕಿಯಿದ್ದು, ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಇನ್ನು ಇಂದು ಜಲಾಶಯದ ಒಳಹರಿವಿನ ಪ್ರಮಾಣ 25,885 ಕ್ಯೂಸೆಕ್ ಇದ್ದರೆ, ಹೊರಹರಿವಿನ ಪ್ರಮಾಣ 17491 ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
1. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 96.31 ಟಿಎಂಸಿ
* ಒಳಹರಿವು- 1,50,000 ಕ್ಯೂಸೆಕ್
* ಹೊರಹರಿವು - 1,00,064 ಕ್ಯೂಸೆಕ್
2. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ- 1,625.27 ಅಡಿ
* ಒಳಹರಿವು - 34,150 ಕ್ಯೂಸೆಕ್
* ಹೊರಹರಿವು - 34,150 ಕ್ಯೂಸೆಕ್
3. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.5 ಅಡಿ
* ಇಂದಿನ ನೀರಿನ ಮಟ್ಟ - 2,062.30 ಅಡಿ
* ಒಳಹರಿವು - 14,824 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
4. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1797.60 ಅಡಿ
* ಒಳಹರಿವು - 44,387 ಕ್ಯೂಸೆಕ್
* ಹೊರಹರಿವು - 1,898 ಕ್ಯೂಸೆಕ್
5. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 164.4 ಅಡಿ
* ಇಂದಿನ ನೀರಿನ ಮಟ್ಟ - 162.70 ಅಡಿ
* ಒಳಹರಿವು - 25,367 ಕ್ಯೂಸೆಕ್
* ಹೊರಹರಿವು - 193 ಕ್ಯೂಸೆಕ್
6. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಇಂದಿನ ನೀರಿನ ಮಟ್ಟ - 2,154.90 ಅಡಿ
* ಒಳಹರಿವು - 10,823 ಕ್ಯೂಸೆಕ್
* ಹೊರಹರಿವು - 1,733 ಕ್ಯೂಸೆಕ್
7. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಇಂದಿನ ನೀರಿನ ಮಟ್ಟ - 2,922 ಅಡಿ
* ಒಳಹರಿವು - 23,769 ಕ್ಯೂಸೆಕ್
* ಹೊರಹರಿವು - 15,624 ಕ್ಯೂಸೆಕ್
8. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಇಂದಿನ ನೀರಿನ ಮಟ್ಟ - 2,854.95 ಅಡಿ
* ಒಳಹರಿವು - 9,520 ಕ್ಯೂಸೆಕ್
* ಹೊರಹರಿವು - 4,000
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications