ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ

Recommended Video

      Income Tax ride on Rashmika Mandanna house. | FILMIBEATN KANNADA

      ವಿರಾಜಪೇಟೆ, ಜನವರಿ 16: ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.

      ಕೊಡಗು ಜಿಲ್ಲೆಯ ವಿರಾಜಪೇಟೆಯ ಕುಕ್ಲೂರಿನಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

      ರಶ್ಮಿಕಾ ಮಂದಣ್ಣ ಅವರು ಕನ್ನಡದ ಕಿರಿಕ್ ಪಾರ್ಟಿ, ಅಂಜನಿ ಪುತ್ರ, ಚಮಕ್, ತೆಲುಗಿನ ಗೀತ ಗೋವಿಂದಂ, ದೇವದಾಸ್, ಡಿಯರ್ ಕಾಮ್ರೇಡ್, ಭೀಷ್ಮ ಚಿತ್ರಗಳಲ್ಲಿ ನಟಿಸಿದ್ದಾರೆ.

      2016ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. 10 ಕ್ಕೂ ಹೆಚ್ಚು ಅಧಿಕಾರಿಗಳಿಂದ ಶೋಧ ನಡೆಯುತ್ತಿದೆ.

      ಬೆಳಗ್ಗೆ 7.30ರಿಂದ ಮಂದಣ್ಣ ಅವರ ಸೆರೆನಿಟಿ ಹಾಲ್‌ನಲ್ಲಿ ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

      ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿಗೆ ಈ ಅಂಶಗಳೂ ಕಾರಣವಾಗಿರಬಹುದು. ರಶ್ಮಿಕಾ ಮಂದಣ್ಣ ಸಂಭಾವನೆ ಬಗ್ಗೆ ತಪ್ಪು ಮಾಹಿತಿ ಇರಬಹುದು, ಜಾಹೀರಾತು ಏಜೆನ್ಸಿಗಳ ಜೊತೆಗೆ ಷೇರು ವ್ಯವಸಹಾರವಿದೆ ಎಂದು ಹೇಳಲಾಗುತ್ತಿದೆ.

      ಟಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇದೆಲ್ಲಾ ಕಾರಣಗಳಿಂದಾಗಿ ಅಧಿಕಾರಿಗಳು ದಾಳಿ ನಡೆಸಿರಬಹುದು.

      ಐಟಿ ಸಮನ್ಸ್‌

      ಐಟಿ ಸಮನ್ಸ್‌

      ಹೈದರಾಬಾದಿನಲ್ಲಿ ಚಿತ್ರೀಕರಣದಲ್ಲಿರುವ ರಶ್ಮಿಕಾ ಮಂದಣ್ಣಗೆ ಮೈಸೂರು ವಿಭಾಗದ ಐಟಿ ಅಧಿಕಾರಿಗಳು ಸಮನ್ಸ್‌ ಜಾರಿ ಮಾಡಿದ್ದಾರೆ. ಕೂಡಲೇ ವಿರಾಜಪೇಟೆಗೆ ಬರುವಂತೆ ಸೂಚಿಸಲಾಗಿದೆ.

      ರಶ್ಮಿಕಾ ಮಂದಣ್ಣ ನಟಿಸಿದ್ದ ಕನ್ನಡ ಚಿತ್ರಗಳಿವು

      ರಶ್ಮಿಕಾ ಮಂದಣ್ಣ ನಟಿಸಿದ್ದ ಕನ್ನಡ ಚಿತ್ರಗಳಿವು

      2016ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ರಶ್ಮಿಕಾ ಮೊದಲು ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿಯಲ್ಲಿ ಅಭಿನಯಿಸಿದ್ದರು. ಬಳಿಕ ಹರ್ಷ ನಿರ್ದೇಶನದ ಪುನಿತ್ ರಾಜ್‌ಕುಮಾರ್ ನಾಯಕನಟರಾಗಿದ್ದ ಅಂಜನಿಪುತ್ರ ಸಿನಿಮಾದಲ್ಲಿ ನಟಿಸಿದ್ದಾರೆ. ಬಳಿಕ ಗಣೇಶ್ ನಾಯಕನಟನಾಗಿದ್ದ ಸುನಿ ನಿರ್ದೇಶನದ ಚಮಕ್ ಚಿತ್ರದಲ್ಲಿ ನಟಿಸಿದ್ದಾರೆ. ದರ್ಶನ ಅಭಿನಯಿಸುತ್ತಿರುವ ಯಜಮಾನ, ದೃವ ಸರ್ಜಾ ಅವರ ಪೊಗರು ಚಿತ್ರ ಇನ್ನೇನು ತೆರೆ ಕಾರಣಬೇಕಿದೆ.

      ತೆಲುಗು ಚಿತ್ರಗಳಲ್ಲಿ ರಶ್ಮಿಕಾ ಅಭಿನಯ

      ತೆಲುಗು ಚಿತ್ರಗಳಲ್ಲಿ ರಶ್ಮಿಕಾ ಅಭಿನಯ

      ರಶ್ಮಿಕಾ ಮಂದಣ್ಣ ಅವರು 2018ರಲ್ಲಿ ಪರಶುರಾಮ್ ನಿರ್ದೇಶನದ ವಿಜಯ್ ದೇವರಕೊಂಡ ನಾಯಕನಟರಾಗಿದ್ದ ಗೀತಾ ಗೋವಿಂದಂ ಚಿತ್ರದಲ್ಲಿ ನಟಿಸಿದ್ದರು. ಶ್ರೀರಾಮ್ ಆದಿತ್ಯ ನಿರ್ದೇಶನದ ದೇವದಾಸ್, ಇದೀಗ ಭರತ್ ಕಮ್ಮ ಅವರ ನಿರ್ದೇಶನದ ಡಿಯರ್ ಕಾಮ್ರೇಡ್ ಹಾಗೂ ವೆಂಕಿ ಕುಂದುಮುಲ ನಿರ್ದೇಶನದ ಭೀಷ್ಮ ಚಿತ್ರದಲ್ಲಿ ನಟಿಸಿದ್ದಾರೆ.

      ಇನ್ನೂ ತೆರೆ ಕಾಣದ ಚಿತ್ರಗಳಾವುವು?

      ಇನ್ನೂ ತೆರೆ ಕಾಣದ ಚಿತ್ರಗಳಾವುವು?

      ದರ್ಶನ್ ತೂಗುದೀಪ್ ಅವರ ಯಜಮಾನ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದು, 2018ರಲ್ಲಿ ಚಿತ್ರೀಕರಣ ಆರಂಭವಾಗಿತ್ತು. ಇನ್ನು ಧ್ರುವಸರ್ಜಾ ಅವರ ಪೊಗರು ಚಿತ್ರ ಕೂಡ ಪ್ರಗತಿಯಲ್ಲಿದೆ. ಇನ್ನು ತೆಲುಗಿನಲ್ಲಿ ವೆಂಕಿ ಕುಂದುಮುಲ ನಿರ್ದೇಶನದ ಭೀಷ್ಮ ಚಿತ್ರೀಕರಣ ಪ್ರಗತಿಯಲ್ಲಿದ್ದು ತೆರೆ ಕಾಣಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+