ಮೋದಿ ಬದಲು ಅಮಿತಾಬ್ ಬಚ್ಚನ್ ಅವರನ್ನು ಪ್ರಧಾನಿ ಮಾಡಬಹುದಿತ್ತು: ಪ್ರಿಯಾಂಕಾ ಗಾಂಧಿ
ಲಖನೌ, ಮೇ 17: ನೀವು ಜಗತ್ತಿನ ಶ್ರೇಷ್ಠ ನಟನನ್ನು ಪ್ರಧಾನಿಯನ್ನಾಗಿ ಮಾಡಿದ್ದೀರಿ, ಮೋದಿ ಬದಲಿಗೆ ಅಮಿತಾಬ್ ಬಚ್ಚನ್ ಅವರನ್ನೇ ಪ್ರಧಾನಿಯನ್ನಾಗಿ ಆರಿಸಬಹುದಾಗಿತ್ತು ಎಂದು ಪ್ರಿಯಾಂಕಾ ಗಾಂಧಿ ಅವರು ವ್ಯಂಗ್ಯ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಿರ್ಜಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಬಹಿರಂಗ ಪ್ರಚಾರ ನಡೆಸಿದ ಅವರು, ಮೋದಿ ಮತ್ತು ಅಮಿತಾ ಬಚ್ಚನ್ ಇಬ್ಬರ ಮೇಲೂ ವಾಗ್ದಾಳಿ ನಡೆಸಿದ ಅವರು, ಇಬ್ಬರೂ ನಿಮಗಾಗಿ ಹೆಚ್ಚಿನದ್ದೇನೂ ಮಾಡಿಲ್ಲ ಎಂದು ಹೇಳಿದರು.
ಅಮಿತಾಬ್ ಬಚ್ಚನ್ ಹಾಗೂ ಪ್ರಿಯಾಂಕಾ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಆತ್ಮೀಯ ಗೆಳೆಯರಾಗಿದ್ದರು, ಅಮಿತಾಬ್ ಬಚ್ಚನ್ ಅವರು ಕಾಂಗ್ರೆಸ್ ಟಿಕೆಟ್‌ನಿಂದ ಒಮ್ಮೆ ಗೆದ್ದಿದ್ದರೂ ಸಹ, ಆದರೆ ಆ ನಂತರ ಅವರ ಹೆಸರು ಬೋಪೋರ್ಸ್ ಹಗರಣದಲ್ಲಿ ಕೇಳಿಬಂತು ಆದರೆ ಅವರು ನಿರ್ದೋಷಿ ಎಂದು ಸಾಬೀತಾಯಿತು.

ರಾಜೀವ್ ಗಾಂಧಿ ನಂತರ ಕಾಂಗ್ರೆಸ್ ಸಖ್ಯ ಹಾಗೂ ಗಾಂಧಿ ಕುಟುಂಬ ಗೆಳೆತನ ಕೈಬಿಟ್ಟಿದ್ದ ಅಮಿತಾಬ್ ಸಮಾಜವಾದಿ ಪಕ್ಷ ಸೇರ್ಪಡೆಗೊಂಡಿದ್ದರು, ಅವರ ಪತ್ನಿ ಜಯಾಬಚ್ಚನ್ ಸಮಾಜವಾದಿ ಪಕ್ಷದಿಂದ ಸಂಸದರೂ ಆಗಿದ್ದರು. ಆದರೆ ಇತ್ತೀಚೆಗೆ ಅವರು ಮೋದಿ ಅವರ ಪರ ಹೆಚ್ಚು ಒಲವು ತೋರಿದಂತೆ ಕಾಣುತ್ತಿದೆ. ಹಾಗಾಗಿಯೇ ಪ್ರಿಯಾಂಕಾ ಗಾಂಧಿ ಅವರು ಅಮಿತಾಬ್ ಅವರ ವಿರುದ್ಧವೂ ಟೀಕಿಸಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications