ಫೈಜಾಬಾದ್ ಇನ್ನು ಮುಂದೆ ಅಯೋಧ್ಯಾ: ಯೋಗಿಯಿಂದ ಮತ್ತಷ್ಟು ಹೆಸರು ಬದಲು

ಅಯೋಧ್ಯಾ, ನವೆಂಬರ್ 6: ಇತ್ತೀಚೆಗಷ್ಟೇ ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಿಸಿದ್ದ ಉತ್ತರ ಪ್ರದೇಶ ಸರ್ಕಾರ, ಮತ್ತೊಂದು ಹೆಸರು ಬದಲಾವಣೆಗೆ ಮುಂದಾಗಿದೆ.

ಫೈಜಾಬಾದ್ ಜಿಲ್ಲೆಯ ಹೆಸರನ್ನು ಅಯೋಧ್ಯಾ ಎಂದು ಬದಲಿಸುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

ದೀಪಾವಳಿ ಪ್ರಯುಕ್ತ ಮಾಡಿದ ಭಾಷಣದ ವೇಳೆ ಯೋಗಿ ಈ ಪ್ರಕಟಣೆ ನೀಡಿದ್ದಾರೆ.

yogi adityanath announced name change of faizabad as ayodhya

'ಅಯೋಧ್ಯಾ ನಮ್ಮ ಹೆಮ್ಮೆ ಮತ್ತು ಘನತೆಯ ಸಂಕೇತ. ಶ್ರೀರಾಮನೊಂದಿಗೆ ಅದು ತನ್ನ ಗುರುತನ್ನು ಪಡೆದುಕೊಂಡಿದೆ' ಎಂದು ಯೋಗಿ ಹೇಳಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಫೈಜಾಬಾದ್ ಜಿಲ್ಲೆಯಲ್ಲಿ ಫೈಜಾಬಾದ್ ಮತ್ತು ಅಯೋಧ್ಯಾ ಅವಳಿನಗರಗಳಿವೆ. ಸರಯು ನದಿ ತಟದಲ್ಲಿರುವ ಈ ಜಿಲ್ಲೆ ಇನ್ನು ಮುಂದೆ ಅಯೋಧ್ಯಾ ಎಂಬ ಹೆಸರು ಪಡೆದುಕೊಳ್ಳಲಿದೆ.

ರಾಮಾಯಣ ಮಹಾಕಾವ್ಯದಲ್ಲಿನ ಶ್ರೀರಾಮನ ತಂದೆ ರಾಜ ದಶರಥನ ಹೆಸರನ್ನು ವೈದ್ಯಕೀಯ ಕಾಲೇಜೊಂದಕ್ಕೆ ಇರಿಸಲಾಗುವುದು. ಹಾಗೆಯೇ ಅಯೋಧ್ಯಾದಲ್ಲಿರುವ ವಿಮಾನ ನಿಲ್ದಾಣವು ಶ್ರೀರಾಮನ ಹೆಸರು ಪಡೆದುಕೊಳ್ಳಲಿದೆ.

ಶ್ರೀರಾಮನ ವಂಶದ ಹೆಸರು ಎಂದೆಂದಿಗೂ ಉಳಿಯುವಂತಾಗಬೇಕು ಎಂದು ಯೋಗಿ ಪ್ರತಿಪಾದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+