ಮಗ ತುತ್ತು ನೀಡಿದ ಶ್ವಾನದಿಂದ ಹೆತ್ತವಳ ಜೀವಕ್ಕೆ ಬಂತು ಕುತ್ತು
ಲಕ್ನೋ ಜುಲೈ 13: ಮಂಗಳವಾರ ಬೆಳಗ್ಗೆ ಲಕ್ನೋದ ಕೈಸರ್‌ಬಾಗ್ ಪ್ರದೇಶದಲ್ಲಿ 82 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರನ್ನು ಆಕೆಯ ಮಗನ ಮುದ್ದಿನ ಪಿಟ್‌ಬುಲ್ ನಾಯಿ ಕಚ್ಚಿ ಕೊಂದ ಅಘಾತಕಾರಿ ಘಟನೆ ನಡೆದಿದೆ. ಈ ಘಟನೆ ಪ್ರಾಣಿ ಪ್ರಿಯರನ್ನು ಬೆಚ್ಚಿ ಬೀಳಿಸಿದೆ.
ಮೃತರನ್ನು ಸುಶೀಲಾ ತ್ರಿಪಾಠಿ ಎಂದು ಗುರುತಿಸಲಾಗಿದೆ. ಮೃತಳ ಕುಟುಂಬ ಕೈಸರ್‌ಬಾಗ್‌ನ ಬಂಗಾಳಿ ಟೋಲಾ ಪ್ರದೇಶದಲ್ಲಿ ವಾಸಿಸುತ್ತಿದೆ. ಮೃತ ಸುಶೀಲಾ ತ್ರಿಪಾಠಿ ಅವರ ಮಗ, ಜಿಮ್ ತರಬೇತುದಾರ ಅಮಿತ್ ಎರಡು ಸಾಕು ನಾಯಿಗಳನ್ನು ಹೊಂದಿದ್ದರು. ಒಂದು ಪಿಟ್ಬುಲ್ ಮತ್ತೊಂದು ಲ್ಯಾಬ್ರಡಾರ್. ಮಹಿಳೆಯ ಮೇಲೆ ದಾಳಿ ಮಾಡಿದ ಬ್ರೌನಿ ಎಂಬ ನಾಯಿಯನ್ನು ಮೂರು ವರ್ಷಗಳ ಹಿಂದೆ ಮನೆಗೆ ತರಲಾಗಿತ್ತು.
ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದಾಗ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯಲ್ಲಿ ಸುಶೀಲ ಒಬ್ಬರೇ ಇದ್ದ ವೇಳೆ ಈ ಘಟನೆ ನಡೆದಿದೆ. ಆಕೆಯ ಮಗ ಆಕೆಯನ್ನು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ತಕ್ಷಣ ಆಕೆಯನ್ನು ಬಲರಾಂಪುರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಧಿಕ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸುಶೀಲಾ ಅವರ ದೇಹದಲ್ಲಿ ಕುತ್ತಿಗೆಯಿಂದ ಹೊಟ್ಟೆಯವರೆಗೆ ಒಟ್ಟು 12 ತೀವ್ರ ಗಾಯಗಳು ಪತ್ತೆಯಾಗಿವೆ.
ನೆರೆಹೊರೆಯವರ ಪ್ರಕಾರ, "ಬೆಳಗ್ಗೆ 6 ಗಂಟೆ ಸುಮಾರಿಗೆ ನಾಯಿಗಳು ಬೊಗಳುವುದು ಮತ್ತು ಸುಶೀಲಾ ಮೇಲೆ ದಾಳಿ ಮಾಡಿದಾಗ ಸಹಾಯಕ್ಕಾಗಿ ಕೂಗುವುದು ಕೇಳಿತು. ನಾವು ಅವರ ಮನೆಗೆ ಧಾವಿಸಿದೆವು ಆದರೆ ಅದು ಒಳಗಿನಿಂದ ಬೀಗ ಹಾಕಿತ್ತು. ಮಹಿಳೆಯ ಮಗ ಮನೆಗೆ ಬಂದಾಗ ಅವರು ಬಾಗಿಲನ್ನು ತೆರೆದಿದ್ದಾರೆ. ಈ ವೇಳೆ ಆಕೆಗೆ ತೀವ್ರ ಗಾಯಗಳಾಗಿದ್ದವು.
ನಾಯಿಗಳನ್ನು ಸಾಕಲು ನಿಯಂತ್ರಣ; ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ (LMC) ಸ್ವಾನ್ ಲೈಸೆನ್ಸ್ ಕಂಟ್ರೋಲ್ ಮತ್ತು ರೆಗ್ಯುಲೇಶನ್ ಬೈ-ಲಾ 2003 ಎಂಬ ಹೆಸರಿನ ನಾಯಿಗಳನ್ನು ಸಾಕಲು ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಕೈಪಿಡಿಯ ಪ್ರಕಾರ, ನಾಯಿಗಳನ್ನು ಸಾಕಲು ಇಷ್ಟಪಡುವ ಜನರು ಹಲವಾರು ಷರತ್ತುಗಳನ್ನು ಅನುಸರಿಸಿದ ನಂತರ ಕಡ್ಡಾಯವಾಗಿ ಪರವಾನಗಿಯನ್ನು ಪಡೆಯಬೇಕಾಗುತ್ತದೆ.

ಯಾವುದೇ ವ್ಯಕ್ತಿಯು ತನ್ನ ನಾಯಿಯನ್ನು ನೆರೆಹೊರೆಯವರಿಗೆ ಯಾವುದೇ ಆಕ್ಷೇಪಣೆಯಿಲ್ಲದ ರೀತಿಯಲ್ಲಿ ಇಟ್ಟುಕೊಳ್ಳಬೇಕು ಮತ್ತು ಬಂಧಿಸಬೇಕು ಎಂದು ಕೈಪಿಡಿಯಲ್ಲಿ ಹೇಳಲಾಗಿದೆ. ಲಕ್ನೋ ನಗರದಲ್ಲಿ ಒಟ್ಟು 4,824 ಪರವಾನಗಿಗಳನ್ನು ನೀಡಲಾಗಿದ್ದು, ಇವುಗಳಲ್ಲಿ 2,370 ದೊಡ್ಡ ತಳಿಯ ನಾಯಿಗಳಿವೆ.












Click it and Unblock the Notifications