ಪ್ರಧಾನಿ ನರೇಂದ್ರ ಮೋದಿ ಮುಗ್ಗರಿಸಿ ಬಿದ್ದ ಸಂದರ್ಭ ಯಾವುದು?

ಕಾನ್ಪುರ, ಡಿಸೆಂಬರ್ 14: 'ನಮಾಮಿ ಗಂಗಾ' ಯೋಜನೆಯ ಪರಿಶೀಲನೆಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಎಡವಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ.

ಉತ್ತರ ಪ್ರದೇಶದ ಕಾನ್ಪುರಕ್ಕೆ ತೆರಳಿದ್ದ ಮೋದಿ ಅವರನ್ನು ಬೆಳಿಗ್ಗೆ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ದರು. ಬಳಿಕ ಅಟಲ್ ಘಾಟ್‌ಗೆ ತೆರಳಿದ್ದ ಮೋದಿ ಗಂಗಾ ನದಿಯಲ್ಲಿ ಸುಮಾರು 50 ನಿಮಿಷಗಳ ಕಾಲ ದೋಣಿ ವಿಹಾರ ನಡೆಸಿದ್ದರು. ಎನ್‌ಡಿಎಯ ಪ್ರಮುಖ ಮಿತ್ರಪಕ್ಷಗಳ ನಾಯಕರು ಅವರೊಂದಿಗೆ ಇದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹಾಗೂ ವಿವಿಧ ಕೇಂದ್ರ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಮೋದಿ ಅವರು ಗಂಗಾ ನದಿಯ ಪುನರುಜ್ಜೀವನ, ರಕ್ಷಣೆ ಮತ್ತು ನಿರ್ವಹಣಾ ರಾಷ್ಟ್ರೀಯ ಸಮಿತಿಯ ಮೊದಲ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಇನ್ನು ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ಮುಖ್ಯಮಂತ್ರಿಗಳು ಸಭೆಗೆ ಗೈರಾಗಿದ್ದಾರೆ.

ದೋಣಿ ವಿಹಾರದಲ್ಲಿ ನಾಯಕರು

ದೋಣಿ ವಿಹಾರದಲ್ಲಿ ನಾಯಕರು

'ನಮಾಮಿ ಗಂಗಾ' ಕುರಿತಾದ ಸಭೆಯಲ್ಲಿ ಭಾಗವಹಿಸಲು ತೆರಳಿದ್ದ ಮೋದಿ ಅವರು ಅಟಲ್ ಘಾಟ್‌ನಲ್ಲಿ ದೋಣಿ ವಿಹಾರ ನಡೆಸಿದ್ದರು. ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಟಿಎಸ್ ರಾವತ್ ಅವರ ಜತೆ ತೆರಳಿದ್ದರು.

ಮಹತ್ವಾಕಾಂಕ್ಷೆಯ ಯೋಜನೆ

ಮಹತ್ವಾಕಾಂಕ್ಷೆಯ ಯೋಜನೆ

ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯ ನಮಾಮಿ ಗಂಗಾ ಯೋಜನೆಯನ್ನು ಆರಂಭಿಸಿದ್ದರು. ಅದರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಲು ತೆರಳಿದ್ದ ಅವರು, ಗಂಗಾ ನದಿಯನ್ನು ಸ್ವಚ್ಚಗೊಳಿಸುವ ಕಾರ್ಯ ಎಷ್ಟರಮಟ್ಟಗೆ ನಡೆದಿದೆ ಎಂಬುದನ್ನು ಖುದ್ದಾಗಿ ಪರಿಶೀಲಿಸಲು ಇತರೆ ನಾಯಕರೊಂದಿಗೆ ದೋಣಿಯಲ್ಲಿ ತೆರಳಿದ್ದರು.

ಎಡವಿ ಬಿದ್ದ ಮೋದಿ

ಎಡವಿ ಬಿದ್ದ ಮೋದಿ

ಸುಮಾರು 50 ನಿಮಿಷಗಳ ಕಾಲ ಗಂಗಾ ನದಿಯ ಮೇಲೆ ದೋಣಿ ವಿಹಾರ ನಡೆಸಿದ ಮೋದಿ, ಸ್ವಚ್ಚತಾ ಕಾರ್ಯವನ್ನು ಪರಿಶೀಲಿಸಿದ್ದರು. ಜತೆಗೆ ನಡೆದಿರುವ ಸ್ವಚ್ಚತಾ ಕಾರ್ಯದ ಪ್ರಗತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದರು. ನಂತರ ಅವರು ನದಿ ತೀರಕ್ಕೆ ಇಳಿದಿದ್ದರು. ಮುಂದೆ ನಡೆಯುತ್ತಿದ್ದ ಮೋದಿ ಎತ್ತರದ ಮೆಟ್ಟಿಲುಗಳನ್ನು ಏರುವಾಗ ಎಡವಿ ಬಿದ್ದಿದ್ದರು. ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಮೇಲಕ್ಕೆತ್ತಿದರು.

ವಿಶ್ವವಿದ್ಯಾಲಯದಲ್ಲಿ ಸಭೆ

ವಿಶ್ವವಿದ್ಯಾಲಯದಲ್ಲಿ ಸಭೆ

ಬಳಿಕ ಕಾನ್ಪುರದ ಚಂದ್ರಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದ ಗಂಗಾ ನದಿ ಪುನರುಜ್ಜೀವನ, ರಕ್ಷಣೆ ಹಾಗೂ ನಿರ್ವಹಣೆಯ ರಾಷ್ಟ್ರೀಯ ಸಮಿತಿಯ ಮೊದಲ ಸಭೆ ನಡೆಯಿತು. ವಿವಿಧ ರಾಜ್ಯಗಳ ನಾಯಕರು ಮತ್ತು ಅಧಿಕಾರಿಗಳ ಜತೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಕೂಡ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+