ವೈರಲ್ ವಿಡಿಯೋ: ಸಚಿವ ಸ್ಥಾನ ಕೊಡಿ, ಬಾಂಬ್ ಹಾಕುತ್ತೇನೆ ಎಂದ ಬಿಜೆಪಿ ಶಾಸಕ!

ಲಕ್ನೋ, ಜನವರಿ 04: "ಈ ದೇಶದಲ್ಲಿ ತಮಗೆ ರಕ್ಷಣೆ ಇಲ್ಲ ಎನ್ನುವವರಿಗೆ ಬಾಂಬ್ ಹಾಕಬೇಕು! ನನಗೆ ಸಚಿವ ಸ್ಥಾನ ನೀಡಿ. ಇಂಥವರಿಗೆಲ್ಲ ನಾನು ಬಾಂಬ್ ಹಾಕುತ್ತೇನೆ" ಎಂದು ಬಿಜೆಪಿ ಶಾಸಕರೊಬ್ಬರು ಹೇಳಿರುವ ವಿಡಿಯೋ ಇದೀಗ ವಿವಾದ ಸೃಷ್ಟಿಸಿದೆ.

ಉತ್ತರ ಪ್ರದೇಶದ ಮುಜಾಫರ್ ನಗರದ ಬಿಜೆಪಿ ಶಾಸಕ ವಿಕ್ರಮ್ ಸೈನಿ, ಇತ್ತೀಚೆಗೆ ದೇಶದಲ್ಲಿ ಮತ್ತೆ ಅಸಹಿಷ್ಣುತೆಯ ಕೂಗು ಏಳುತ್ತಿರುವುದನ್ನು ಖಂಡಿಸಿದ್ದಾರೆ.

Viral video: Controversial statement by BJP MLA Vikram Saini

"ನನ್ನ ವೈಯಕ್ತಿಕ ಅಭಿಪ್ರಾಯ ಏನು ಎಂದರೆ, ಭಾರತದಲ್ಲಿ ಯಾರು ಅಸುರಕ್ಷಿತರು ಎನ್ನುತ್ತಾರೋ, ಭಯವಿದೆ ಎನ್ನುತ್ತಾರೋ ಅಥವರಿಗೆ ಬಾಂಬ್ ಹಾಕಬೇಕು. ನನಗೆ ಸಚಿವ ಸ್ಥಾನ ನೀಡಿ. ನಾವು ಅಂಥವರನ್ನೊಬ್ಬರನ್ನೂ ಬಿಡದೆ ಬಾಂಬ್ ಹಾಕುತ್ತೇನೆ" ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವುದರಲ್ಲೇ ಸುದ್ದಿಯಾಗಿರುವ ಸೈನಿ, 2017 ರಲ್ಲಿ ಒಂದೇ ಮಾತರಂ ಎನ್ನಲು ಇಷ್ಟವಿಲ್ಲದಿರುವವರು, ಭಾರತ್ ಮಾತಾಕೀ ಜೈ ಎಂದರೆ ನೋವಾಗುತ್ತದೆ ಎನ್ನುವವರು ಮತ್ತು ಹಸುವಿಗೆ ಗೌರವ ನೀಡದವರು, ಗೋಹತ್ಯೆ ಮಾಡುವವರ ಕೈ ಕಾಲು ಮುರಿಯುತ್ತೇನೆ ಎಂದಿದ್ದರು.

ದೇಶವಿಭಜನೆಯ ಸಮಯದಲ್ಲಿ ಮುಸ್ಲಿಮರು ಭಾರತ ತೊರೆದಿದ್ದರೇ ಹಿಂದುಗಳು ನೆಮ್ಮದಿಯಿಂದಿರುತ್ತಿದ್ದರು ಎಂದು ಸಹ ಅವರ ಒಮ್ಮೆ ಹೇಳಿಕೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+