ಶಿಶುವಿಗೆ 'ಮೋದಿ' ಹೆಸರು ನಾಮಕರಣ ಮಾಡಿದ ಮುಸ್ಲಿಂ ಕುಟುಂಬ

ಲಕ್ನೋ, ಮೇ 26: ಹಿಂದೂ - ಮುಸ್ಲಿಂ ಭಾವೈಕ್ಯತೆಯ ಸಂಕೇತ ಎನ್ನುವಂತೆ ಉತ್ತರಪ್ರದೇಶದ ಮುಸ್ಲಿಂ ಕುಟುಂಬವೊಂದು, ಚುನಾವಣಾ ಫಲಿತಾಂಶದಂದೇ ಜನಿಸಿದ ಗಂಡು ಮಗುವಿಗೆ 'ನರೇಂದ್ರ ಮೋದಿ' ಎಂದು ಹೆಸರಿಟ್ಟಿದೆ.

ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಹಳ್ಳಿಯೊಂದರ ಮುಸ್ಲಿಂ ಕುಟುಂಬ ತಮ್ಮ ಮಗುವಿಗೆ ನಿಯೋಜಿತ ಪ್ರಧಾನಿಯ ಹೆಸರನ್ನು ನಾಮಕರಣ ಮಾಡುವ ಮೂಲಕ, ಮೋದಿ ಮೇಲೆ ತಮ್ಮ ಅಭಿಮಾನವನ್ನು ಮೆರೆದಿದೆ.

ನಲವತ್ತು ವರ್ಷದ ಮಿನಾಜ್ ಬೇಗಂ, ಮೇ 23ರಂದು ವಝೀರ್ ಗಂಜ್ ನ ಪರ್ಸಾಪುರ ಎನ್ನುವ ಗ್ರಾಮದಲ್ಲಿ ಗಂಡು ಮಗುವಿಗೆ ಜನ್ಮವಿತ್ತಿದ್ದರು. ಈಕೆಯ ಪತಿ ದುಬೈನಲ್ಲಿ ಕೆಲಸದಲ್ಲಿದ್ದು, ಗಂಡು ಮಗುವಾದರೆ, ಮೋದಿ ಹೆಸರನ್ನು ಇಡಬೇಕೆಂದು ಬಯಸಿದ್ದರಂತೆ.

Uttar Pradesh Muslim family named PM Modi name for newly borned baby

ಶಿಶುವಿಗೆ ಮೋದಿ ಹೆಸರು ಇಡುವುದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ದುಬೈನಲ್ಲಿರುವ ಪತಿ, ದೂರವಾಣಿ ಮೂಲಕ ಮಾತನಾಡಿ ಇವರ ಮನವೊಲಿಸಿದ ನಂತರ, 'ನರೇಂದ್ರ ದಾಮೋದರ ದಾಸ್ ಮೋದಿ' ಎಂದು ನಾಮಕರಣ ಮಾಡಲಾಯಿತು.

ದುಬೈನಲ್ಲಿರುವ ಉದ್ಯೋಗದಲ್ಲಿರುವ ನನ್ನ ಪತಿ ಮುಸ್ತಾಕ್ ಅಹಮದ್, ಮೋದಿ ಅವರ ಕಟ್ಟಾ ಅಭಿಮಾನಿ. ಮೋದಿಯವರ ಕಾರ್ಯವೈಖರಿಗೆ ಮೆಚ್ಚಿ ಅವರ ಹೆಸರನ್ನು ಇಡಲು ಬಯಸಿದ್ದರು ಎಂದು ಮಿನಾಜ್ ಬೇಗಂ ಹೇಳಿದ್ದಾರೆ.

ಮೋದಿ ಹೆಸರು ಇಟ್ಟಿದ್ದಕ್ಕೆ ನಿಮ್ಮ ಸಮುದಾಯದಲ್ಲಿ ಆಕ್ಷೇಪ ವ್ಯಕ್ತವಾಗುವುದಿಲ್ಲವೇ ಎನ್ನುವ ಪ್ರಶ್ನೆಗೆ, ಮೋದಿ ನಮ್ಮ ದೇಶದ ಹೆಮ್ಮೆಯ ಪ್ರಧಾನಿ, ಜೊತೆಗೆ, ನಮ್ಮ ಮಗುವಿಗೆ ಯಾವ ಹೆಸರನ್ನು ಇಡಬೇಕು ಎನ್ನುವುದು ನಮ್ಮ ಕುಟುಂಬದ ನಿರ್ಧಾರವೆಂದು ಮಿನಾಜ್ ಬೇಗಂ, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+