ಯೋಗಿ ಸರಕಾರದ ಬಜೆಟ್ ನಲ್ಲಿ ಗೋ ರಕ್ಷಣೆಗೆ 613 ಕೋಟಿ ಮೀಸಲು

ಲಖನೌ (ಉತ್ತರಪ್ರದೇಶ), ಫೆಬ್ರವರಿ 7: ಬೀದಿ ಬದಿಯ ಹಸುಗಳಿಗಾಗಿ ಉತ್ತರಪ್ರದೇಶದ ಬಜೆಟ್ ನಲ್ಲಿ ಭಾರೀ ಮೊತ್ತವನ್ನು ಮೀಸಲಿಡಲಾಗಿದೆ. ಒಟ್ಟಾರೆ ಐನೂರು ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು ಗೋ ಕಲ್ಯಾಣಕ್ಕಾಗಿ ಎತ್ತಿಡಲಾಗಿದೆ. ಕಳೆದ ವರ್ಷ ರಾಜ್ಯ ಸರಕಾರವು ಬಜೆಟ್ ನಲ್ಲಿ ಮೀಸಲಿಟ್ಟ ಮೊತ್ತದ ಕನಿಷ್ಠ ಎರಡು ಪಟ್ಟು ಇದು ಜಾಸ್ತಿಯಾಗಿದೆ.

ಒಟ್ಟಾರೆ ಗೋ ಕಲ್ಯಾಣಕ್ಕೆ ಮೀಸಲಾದ 613 ಕೋಟಿಯಲ್ಲಿ 165 ಕೋಟಿ (ಮದ್ಯ ಮಾರಾಟದ ಮೇಲೆ ವಿಶೇಷ ಸೆಸ್) ರಾಜ್ಯದಲ್ಲಿನ ಬಿಡಾಡಿ ದನಗಳ ನಿರ್ವಹಣೆಗೆ ಮೀಸಲಾಗಿದೆ. 248 ಕೋಟಿ ರುಪಾಯಿಯನ್ನು ಗ್ರಾಮೀಣ ಭಾಗದ ಗೋ ಶಾಲೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಮೀಸಲಿಡಲಾಗಿದೆ.

200 ಕೋಟಿ ರುಪಾಯಿಯನ್ನು ಇದೇ ರೀತಿ ಗೋ ಶಾಲೆ ನಿರ್ಮಾಣ-ನಿರ್ವಹಣೆಯನ್ನು ನಗರ ಪ್ರದೇಶದಲ್ಲಿ ಮಾಡಲು ಮೀಸಲಿಡಲಾಗಿದೆ. 2018-19ನೇ ಸಾಲಿನಲ್ಲಿ ಗೋ ಶಾಲೆಗಳನ್ನು ಬಲಪಡಿಸಲು 5.16 ಕೋಟಿ ಮಾತ್ರ ಬಜೆಟ್ ನಲ್ಲಿ ಇಡಲಾಗಿತ್ತು. ಬಿಡಾಡಿ ದನಗಳ ನಿರ್ವಹಣೆಗೆ 17.52 ಕೋಟಿ ಇಡಲಾಗಿತ್ತು. 92 ಕೋಟಿಯನ್ನು ಬುಂದೇಲ್ ಖಂಡ್ ಪ್ರದೇಶದಲ್ಲಿ ಗೋ ಸಂರಕ್ಷಣಾ ಕೇಂದ್ರಗಳ ಸ್ಥಾಪನೆಗೆ ನೀಡಲಾಗಿತ್ತು.

Uttar Pradesh government allocated 613 crore for cow welfare in budget

20 ಕೋಟಿ ರುಪಾಯಿಯನ್ನು ಗೋ ಸೇವಾ ಆಯೋಗಕ್ಕೆ ನೀಡಿದ್ದು ಸೇರಿ ಒಟ್ಟಾರೆಯಾಗಿ ಬಜೆಟ್ ನಲ್ಲಿ ಗೋವಿನ ಸಂರಕ್ಷಣೆ ಮತ್ತಿತರ ಚಟುವಟಿಕೆಗೆ 136 ಕೋಟಿ ಮೀಸಲಿಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+