ಟ್ರಂಪ್ ಭೇಟಿ: ಸ್ಥಳೀಯ ಮಂಗಗಳಿಂದ ರಕ್ಷಣೆಗೆ ಭಾರೀ ಪೊಲೀಸ್ ನಿಯೋಜನೆ
ಲಕ್ನೋ, ಫೆ 24: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಸಮೇತರಾಗಿ ಭಾರತೀಯ ಕಾಲಮಾನ 11.50ಕ್ಕೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ಮೊಟೆರೋದಲ್ಲಿರುವ ಸರ್ದಾರ್ ಪಟೇಲ್ ಕ್ರೀಡಾಂಗಣದವರೆಗೆ ರೋಡ್ ಶೋ, ನಂತರ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ.
ಇದಾದ ನಂತರ ಸಂಜೆ 4.30ರ ಸುಮಾರಿಗೆ ಆಗ್ರಾದಲ್ಲಿರುವ ಪ್ರೇಮ ಸೌಧ ತಾಜ್ ಮಹಲ್ ಗೆ ಟ್ರಂಪ್ ಭೇಟಿ ನೀಡಲಿದ್ದಾರೆ. ಟ್ರಂಪ್ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಲು ಆಗ್ರಾ ಜಿಲ್ಲಾಡಳಿತ ಸಜ್ಜಾಗಿದೆ.
ಆಗ್ರಾದ ಖೇರಿಯಾ ವಿಮಾನ ನಿಲ್ದಾಣದಲ್ಲಿ ಟ್ರಂಪ್ ದಂಪತಿಗಳನ್ನು ಸ್ವಾಗತಿಸಲು ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಜರಿರಲಿದ್ದಾರೆ. ಆದರೆ, ಇವರು, ಟ್ರಂಪ್ 'ತಾಜ್ ಮಹಲ್' ವೀಕ್ಷಣೆಯ ವೇಳೆ ಅವರ ಜೊತೆಗೆ ಇರುವುದಿಲ್ಲ.

ಆಗ್ರಾ ಜಿಲ್ಲಾಡಳಿತಕ್ಕೆ ಬಹುದೊಡ್ಡ ಸಮಸ್ಯೆ ಸ್ಥಳೀಯ ಮಂಗಗಳದ್ದು. ಸುಮಾರು 1000-5000 ಸಂಖ್ಯೆಯಲ್ಲಿರುವ ಮಂಗಗಳದ್ದು, ತಾಜ್ ಮಹಲ್ ಸುತ್ತಮುತ್ತ ದರ್ಬಾರ್ ಜೋರಾಗಿಯೇ ಇದೆ. ಟ್ರಂಪ್ ಭೇಟಿಯ ವೇಳೆ ಇವುಗಳಿಂದ ಉಪಟಳ ಎದುರಾಗದಂತೆ ನೋಡಿಕೊಳ್ಳಲು, ಪೊಲೀಸರನ್ನು ನಿಯೋಜಿಸಲಾಗಿದೆ.
ಸುಮಾರು 130 ಪೊಲೀಸರನ್ನು ಮಂಗನಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ನಿಯೋಜಿಸಲಾಗಿದೆ. ವಿವಿಧ ಗೇಟ್ ಮತ್ತು ಚಾವಣಿಗಳಲ್ಲಿ ಪೊಲೀಸರ ಸರ್ಪಗಾವಲು ಇರಲಿದೆ. "ಸ್ಥಳೀಯ ಮಂಗಗಳಿಂದ ಪ್ರವಾಸಿಗರನ್ನು ರಕ್ಷಿಸಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಂಡರೂ, ಅದು ಪ್ರಯೋಜವಾಗಲಿಲ್ಲ" ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ವಿಶ್ವವಿಖ್ಯಾತ ತಾಜ್ ಮಹಲ್ ಈಗ ತಾನೇ ಉದ್ಘಾಟನೆಗೆ ಸಜ್ಜುಗೊಂಡಂತೆ ನವೀಕೃತಗೊಂಡಿದೆ. ಟ್ರಂಪ್ ಮತ್ತು ಅವರ ಕುಟುಂಬ ಸುಮಾರು ಒಂದು ತಾಸು ತಾಜ್ ಮಹಲ್ ಸುತ್ತ ಕಾಲಕಳೆಯಲಿದ್ದಾರೆ. (ಚಿತ್ರ;ಎಪಿ)












Click it and Unblock the Notifications