ಹೊಸ ಪಕ್ಷದ ಹೆಸರು ಘೋಷಿಸಿದ ಶಿವಪಾಲ್ ಯಾದವ್
ಲಕ್ನೋ, ಅಕ್ಟೋಬರ್ 23: ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೋದರ ಶಿವಪಾಲ್ ಯಾದವ್ ಅವರು ತಮ್ಮ ಹೊಸ ಪಕ್ಷವನ್ನು ಘೋಷಿಸಿದ್ದಾರೆ.
ಸಮಾಜವಾದಿ ಪಕ್ಷದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಎಸ್ ಪಿ ಮುಖಂಡ ಶಿವಪಾಲ್ ಯಾದವ್ ಅವರು 'ಸಮಾಜವಾದಿ ಜಾತ್ಯಾತೀತ ಮೋರ್ಚಾ'(ಎಸ್ಎಸ್ಎಂ) ಎಂಬ ಪಕ್ಷವನ್ನು ಆಗಸ್ಟ್ ತಿಂಗಳಿನಲ್ಲಿ ಘೋಷಿಸಿದ್ದರು. ಅಣ್ಣನ ಮಗ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಂದ ಬೇರ್ಪಟ್ಟು ಆಗಸ್ಟ್ 29ರಂದು ಎಸ್ಎಸ್ಎಂ ಘೋಷಿಸಿದ್ದರು.
ಆದರೆ, ಈಗ ಚುನಾವಣಾ ಆಯೋಗಕ್ಕೆ ಹೊಸ ಪಕ್ಷದ ಹೆಸರನ್ನು 'ಪ್ರಗತಿಶೀಲ್ ಸಮಾಜವಾದಿ ಪಾರ್ಟಿ ಲೋಹಿಯಾ' ಎಂದು ನೀಡಿದ್ದಾರೆ.

'ನನ್ನ ಹೊಸ ಪಕ್ಷದ ಹೆಸರನ್ನು ನೋಂದಾಯಿಸಲಾಗಿದೆ. ಪ್ರಗತಿಶೀಲ್ ಸಮಾಜಶೀಲ್ ಸಮಾಜವಾದಿ ಪಕ್ಷ ಲೋಹಿಯಾ ಎಂಬ ಹೆಸರು ಸ್ಥಿರವಾಗಲಿದೆ, ಹೊಸ ಶಕ್ತಿಯಾಗಲಿದೆ ಎಂದರು. 2019ರ ಚುನಾವಣೆಯಲ್ಲಿ 80ಕ್ಕೂ ಅಧಿಕ ಲೋಕಸಭೆ ಸ್ಥಾನದಲ್ಲಿ ಸ್ಪರ್ಧಿಸಲು ಶಿವಪಾಲ್ ಯಾದವ್ ಅವರ ಪಕ್ಷ ಸಿದ್ಧವಾಗುತ್ತಿದೆ.
ಜಸ್ವಂತ್ ನಗರದ ಎತಾವಾ ಜಿಲ್ಲೆಯ ಸಮಾಜವಾದಿ ಪಕ್ಷದ ಶಾಸಕರಾಗಿರುವ ಶಿವಪಾಲ್ ಯಾದವ್ ಅವರಿಗೆ ಇತ್ತೀಚೆಗೆ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅರ್ಪಣಾ ಯಾದವ್ ಅವರು ಕೂಡಾ ಬೆಂಬಲ ವ್ಯಕ್ತಪಡಿಸಿದ್ದರು.












Click it and Unblock the Notifications