ದೀದಿಗೆ ಹೇಗೆ ಗೊತ್ತು ಮೋದಿ ಕುರ್ತಾ ಸೈಜ್ ಎಂದ ಬಬ್ಬರ್ ಗೆ ಛೀಮಾರಿ!

ಪ್ರಧಾನ ನರೇಂದ್ರ ಮೋದಿ ಅವರಿಗೆ ವರ್ಷಕ್ಕೆರಡು ಬಾರಿ ಕುರ್ತಾ ಕಳಿಸುತ್ತೇನೆ ಎಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮೋದಿ ಅವರ ಕುರ್ತಾ ಸೈಜ್ ಹೇಗೆ ಗೊತ್ತು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಪ್ರಶ್ನಿಸಿದ್ದರು. ಅವರ ಈ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ತೀವ್ರ ಟೀಕೆ ವ್ಯಕ್ತವಾಗಿದ್ದು, ಬಬ್ಬರ್ ದು ಕೀಳುಮನೋಭಾವ ಎಂದು ದೂರಲಾಗಿದೆ.

"ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಎಲ್ಲರೂ ಒಂದೇ. ಅವರು ಮೋದಿ ಅವರಿಗೆ ಬೈದರೂ, ಅವರ ಬೆಂಬಲವೇನಿದ್ದರೂ ಮೋದಿ ಅವರಿಗೇ. ಅದಕ್ಕೆ ಉದಾಹರಣೆ ಎಂದರೆ ಅವರು ಯಾರಿಗೂ ಸ್ವೀಟು, ಕುರ್ತಾ ಕಳಿಸದೆ ಕೇವಲ ಮೋದಿ ಅವರಿಗೆ ಮಾತ್ರ ಕಳಿಸುವುದೇಕೆ? ಅಷ್ಟಕ್ಕೂ ದೀದಿಗೆ ಮೋದಿ ಅವರ ಕುರ್ತಾ ಸೈಜ್ ಹೇಗೆ ಗೊತ್ತು ಎಂದು ಬಬ್ಬರ್ ಪ್ರಶ್ನಿಸಿದ್ದರು.

ಇತ್ತೀಚೆಗಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ಮಾಡಿದ್ದರು. ಆ ಸಂದರ್ಭದಲ್ಲಿ ಮೋದಿ ಅವರು ರಾಜಕೀಯೇತರ ವಿಷಯಗಳನ್ನು ಹಂಚಿಕೊಂಡಿದ್ದರು.

ಆಗ ತಮಗೆ ಮಮತಾ ದೀದಿ ಪ್ರತಿ ವರ್ಷವೂ ಎರಡು ಕುರ್ತಾ ಮತ್ತು ಸ್ವೀಟು ಕಳಿಸುತ್ತಾರೆ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದರು.

ತಾವು ಈ ಬಾರಿ ಮೋದಿ ಅವರಿಗೆ ಕಲ್ಲು ಮತ್ತು ಮಣ್ಣಿನ ಸ್ವೀಟು ಕಳಸುವುದಾಗಿ ಮಮತಾ ಬ್ಯಾನರ್ಜಿ ಈ ಹೇಳಿಕೆಗೆ ಪ್ರತಿಕ್ರಿಯೆಯನ್ನೂ ನೀಡಿದ್ದರು.

ದೀದಿಗೆ ಹೇಗೆ ಗೊತ್ತು ಅಂದ್ರೆ...

ನಿಮ್ಮ ತಂಗಿ ಅಥವಾ ಅಮ್ಮನಿಗೆ ನಿಮ್ಮ ಕುರ್ತಾ ಸೈಜ್ ಗೊತ್ತಿರುವಂತೆಯೇ ದೀದಿಗೂ ಮೋದಿಯ ಕುರ್ತಾ ಸೈಜ್ ಗೊತ್ತು ಎಂದು ಶಿವಾಜಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ನಿಮಗೆ ಹುಚ್ಚೇ?

ನಿಮಗೇನು ಹುಚ್ಚೆ? ನೀವು ಏನು ಮಾತನಾಡುತ್ತಿದ್ದೀರಿ ಎಂಬುದು ನಿಮಗೆ ಗೊತ್ತೆ? ನೀವು ಬಾಲಿವುಡ್ ನಲ್ಲಿ ಅಭಿನಯಿಸಿದ್ದಕ್ಕಿಂತ, ಕೆಟ್ಟ ಚಟಗಳಿಂದಲೇ ಸುದ್ದಿಯಾದವರು ಎಂಬುದು ನಮಗೆ ಗೊತ್ತಿಲ್ಲವೇ?

ಇವರೆಲ್ಲ ಬಿಜೆಪಿ ಪ್ರಚಾರಕರು!

ತಮ್ಮ್ ನಾಲಿಗೆಯನ್ನು ಕೀಳಾಗಿ ಹರಿಬಿಟ್ಟು ಇವರೆಲ್ಲ ಕಾಂಗ್ರೆಸ್ ಹಣದಿಂದ ಬಿಜೆಪಿಗೆ ಪ್ರಚಾರ ನೀಡುತ್ತಿದ್ದಾರೆ. ಸಿಧು, ರಾಹುಲ್ ಗಾಂಧಿ, ರಾಜ್ ಬಬ್ಬರ್, ಶತ್ರುಘ್ನ ಸಿನ್ಹಾ ಎಲ್ಲರೂ ಅಂಥವರೇ ಎಂದು ಅಂಜುಲ್ ಟ್ವೀಟ್ ಮಾಡಿದ್ದಾರೆ.

ಅದೇನು ದೊಡ್ಡ ಸಾಹಸವೇ?

ರಾಜ್ ಬಬ್ಬರ್ ಏನು ಹೇಳುವುದಕ್ಕೆ ಹೊರಟಿದ್ದಾರೆ? ಒಬ್ಬರ ಕುರ್ತಾ ಅಳತೆ ತಿಳಿದುಕೊಳ್ಳುವುದೇನು ದೊಡ್ಡ ಸಾಹಸದ ಕೆಲಸವೇ ಎಂಮದು ದಿನೇಶ್ ಸೋನಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+