'ರಾಹುಲ್ ಅಮೇಥಿಯ ಮಿಸ್ಸಿಂಗ್ ಸಂಸದ' ಎಂದು ಟೀಕಿಸಿದ ಸ್ಮೃತಿ ಇರಾನಿ
ಲಕ್ನೋ, ಏ.25: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಅಮೇಥಿಯ ಮಿಸ್ಸಿಂಗ್ ಎಂಪಿ ಎಂದು ಕರೆದು ಅವರನ್ನು ಕೆರಳಿಸುವ ಪ್ರಯತ್ನವನ್ನು ಸಚಿವೆ ಸ್ಮೃತಿ ಇರಾನಿ ಮಾಡಿದ್ದಾರೆ.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಅವರು ಮಾತನಾಡಿದರು.
ರಾಹುಲ್ ಗಾಂಧಿ ಅವರು ಅಮೇಥಿಯಲ್ಲಿ ಯಾವುದೇ ಅಭಿವೃದ್ಧಿಯನ್ನೂ ಮಾಡಿಲ್ಲ ಅವರೊಬ್ಬ ಕಾಣಿಸದ ಸಂಸದ ಎಂದು ಟೀಕಿಸಿದ್ದಾರೆ. ಕಳೆದ 15 ವರ್ಷಗಳಿಂದ 75 ಸಾವಿರ ಕೋಟಿ ರೂ ಅನುದಾನವನ್ನೂ ಕೂಡ ಅವರಿಂದ ಬಳಕೆ ಮಾಡಲು ಸಾಧ್ಯವಾಇಲ್ಲ, ಯಾವ ಅಭಿವೃದ್ಧಿ ಕೆಲಸಗಳನ್ನೂ ಅಮೇಥಿಯಲ್ಲಿ ಮಾಡಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

2017ರಲ್ಲಿ ಅಮೇಥಿಯ 5 ಲೋಕಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಐದನೇ ಸೀಟು ಸಮಾಜವಾದಿ ಪಕ್ಷ ಪಡೆದುಕೊಂಡಿತ್ತು. ಆದರೆ ಎಸ್‌ಪಿ-ಬಿಎಸ್‌ಪಿ ಮೈತ್ರಿಯಲ್ಲಿ ಯಾವುದೇ ಅಭ್ಯರ್ಥಿಯನ್ನು ಈ ಬಾರಿ ಅಮೇಥಿಯಲ್ಲಿ ನಿಲ್ಲಿಸಿಲ್ಲ ಎಂದು ಹೇಳಿದರು.
ಬಡ ವರ್ಗದವರಿಗಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಿಲ್ಲ, ಆದರೆ ಪ್ರಧಾನಮಂತ್ರಿಗಳು ಎರಡು ಲಕ್ಷ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ.ಸಿಲಿಂಡರ್‌ಗಳನ್ನು ಒದಗಿಸಿದ್ದಾರೆ, ರೈತರಿಗೆ 4 ಸಾವಿರ ರೂ ನೀಡಿದ್ದಾರೆ, ಅವರಿಗೆ ಆರೋಗ್ಯ ವಿಮೆ ಮಾಡಿಸಿದ್ದಾರೆ, ಹಾಗಾಗಿ ಬಿಜೆಪಿಗೆ ಮತ ನೀಡಿದರೆ ಅಮೇಥಿಯ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.











Click it and Unblock the Notifications