ಕಾಶಿಯಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಆರಂಭಿಸಲಿರುವ ಮೋದಿ

Recommended Video

      ನರೇಂದ್ರ ಮೋದಿ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಶನಿವಾರ ಭೇಟಿ | Narendra Modi

      ನವದೆಹಲಿ, ಜುಲೈ 6: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಶನಿವಾರ ಭೇಟಿ ನೀಡಲಿದ್ದು, ಬಿಜೆಪಿ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

      ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದ ಲೋಕಸಭೆಯ ಚುನಾವಣೆಯಲ್ಲಿ ಪಕ್ಷ ಭರ್ಜರಿ ಜಯಗಳಿಸಿದ ಬಳಿಕ ಅವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೆಯ ಬಾರಿ.

      'ನಮ್ಮ ಸ್ಫೂರ್ತಿಯಾದ ಡಾ. ಶ್ಯಾಮ ಪ್ರಸಾದ್ ಮೂಖರ್ಜಿ ಅವರ ಜನ್ಮದಿನದಂದು ಬಿಜೆಪಿಯ ಸದಸ್ಯತ್ವ ನೋಂದಣಿ ಆರಂಭವಾಗಲಿದೆ. ಈ ಕಾರ್ಯಕ್ರಮವನ್ನು ನಾನೂ ಕಾಶಿಯಿಂದ ಆರಂಭಿಸುತ್ತೇನೆ. ಇದು ಅಭಿಯಾನವು ಜನರನ್ನು ಎಲ್ಲ ಸಂದರ್ಭದಲ್ಲಿಯೂ ಬಿಜೆಪಿ ಕುಟುಂಬದೊಂದಿಗೆ ಸಂಪರ್ಕಿಸುತ್ತದೆ' ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

      PM Narendra Modi Varansi kashi bjp membership

      ವಾರಣಾಸಿಗೆ ಬೆಳಿಗ್ಗೆ 10 ಗಂಟೆಗೆ ಬರಲಿರುವ ಮೋದಿ ಅವರು, ವಿಮಾನ ನಿಲ್ದಾಣದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಸಚಿವ ಮಹೇಂದ್ರ ನಾಥ್ ಪಾಂಡೆ ಅವರನ್ನು ಸ್ವಾಗತಿಸಲಿದ್ದಾರೆ. ಇದರ ಬಳಿಕ ಮೋದಿ ಅವರನ್ನು ಗಿಡವೊಂದನ್ನು ನೆಡಲಿದ್ದಾರೆ.

      'ನಗರದ ಸಾಂಸ್ಕೃತಿಕ ಹೆಗ್ಗುರುತು ದಶಶ್ವಮೇಧ ಘಾಟ್‌ನ ಮನ್ ಮೊಹಲ್‌ನಲ್ಲಿರುವ ವರ್ಚ್ಯುಯಲ್ ಮ್ಯೂಸಿಯಂಗೆ ನಾನು ಭೇಟಿ ನೀಡಲಿದ್ದೇನೆ. ಅದು ನಮ್ಮ ಮಹಾನ್ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತದೆ' ಎಂದು ಮೋದಿ ಶುಕ್ರವಾರ ಟ್ವೀಟ್ ಮಾಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+