ವರ ಮೃತಪಟ್ಟು 8 ದಿನದ ಬಳಿಕ ಮಹಿಳೆ ಸೇರಿ 8 ಮಂದಿಗೆ ಕೊರೊನಾ ಸೋಂಕು
ಲಕ್ನೋ, ಡಿಸೆಂಬರ್ 10: ನವ ವಧು ಸೇರಿ ಒಂದೇ ಕುಟುಂಬದ 9 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಮದುವೆಯಾದ ಕೆಲವೇ ದಿನಗಳಲ್ಲಿ ಕೊರೊನಾ ಸೋಂಕಿನಿಂದ ವರನ ಸಾವಾಗಿದ್ದು, ಇದೀಗ ಮನೆಯ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಆರೋಗ್ಯಾಧಿಕಾರಿ ನೀಡಿರುವ ಮಾಹಿತಿ ಪ್ರಕಾರ ಮದುವೆಯಾಗಿ ಕೇವಲ 10 ದಿನಗಳ ಮಾತ್ರ ಕಳೆದಿದೆ. ಮದುವೆಯಾದ ಬಳಿಕ ವರನಿಗೆ ಆರೋಗ್ಯ ಅಷ್ಟು ಸರಿ ಇರಲಿಲ್ಲ.
ಡಿಸೆಂಬರ್ 1 ರಂದು ಮೃತಪಟ್ಟಿದ್ದರು. ಅವರು ಕೊರೊನಾ ಪರೀಕ್ಷೆ ಮಾಡಿಸಿಲ್ಲದ ಕಾರಣ ಕೊರೊನಾದಿಂದಲೇ ಮೃತಪಟ್ಟಿದ್ದಾರೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೂ ಅವರ ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ತಗುಲಿರುವುದು ಮಾತ್ರ ನಿಜವಾಗಿದೆ.

ನವ ವಧು , ಆಕೆ ಅತ್ತೆ, ಮಾವ, ಮೈದುನ ಎಲ್ಲರಿಗೂ ಸೋಂಕು ತಗುಲಿದೆ, ಚಿಕಿತ್ಸೆ ಪಡೆಯುತ್ತಿದ್ದಾರೆ.ಫಿರೋಜಾಬಾದ್‌ನಲ್ಲಿ 3673 ಪ್ರಕರಣಗಳಿವೆ. 171 ಸಕ್ರಿಯ ಪ್ರಕರಣಗಳಿವೆ. 67 ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಭಾರತದಲ್ಲಿ ಇಂದು 31,522 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 97,67,372 ಪ್ರಕರಣಗಳಿವೆ, ಒಂದೇ ದಿನದಲ್ಲಿ 412 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 1,41,772 ಮಂದಿ ಸಾವನ್ನಪ್ಪಿದ್ದಾರೆ. 3,72,293 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನದಲ್ಲಿ 37,725 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದುವರೆಗೆ 92,53,306 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications