ಹಾನಿಕಾರಕ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ಮೋದಿ ಸಮರ

ಮಥುರಾ (ಉ.ಪ್ರದೇಶ), ಸೆಪ್ಟೆಂಬರ್ 11: ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಮೋದಿ ಅವರು, ಒಂದು ಬಾರಿ ಬಳಸಿ ಬಿಸಾಡುವಂತಹಾ ಹಾನಿಕಾರಕ ಪ್ಲಾಸ್ಟಿಕ್ ಅನ್ನು ಬಳಸಬೇಡಿ ಎಂದು ಕರೆ ನೀಡಿದ್ದಾರೆ.

ಮಥುರಾದಲ್ಲಿ ಆಯೋಜಿಸಿದ್ದ 'ಸ್ವಚ್ಛ ಹೇ ಶಿವಾ' ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಕಚೇರಿ, ಮನೆಗಳನ್ನು ಬಳಸಿ ಬಿಸಾಡುವ ಹಾನಿಕಾರಕ ಪ್ಲಾಸ್ಟಿಕ್‌ನಿಂದ ಅಕ್ಟೋಬರ್ 2ರ ಗಾಂಧಿ ಜಯಂತಿಯ ಒಳಗಾಗಿ ಮುಕ್ತ ಮಾಡಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿಯೇ ಪೌರಕಾರ್ಮಿಕ ಮಹಿಳೆಯರೊಂದಿಗೆ ಕೂತು ಪ್ರಧಾನಿ ಮೋದಿ ಅವರು ಪ್ಲಾಸ್ಟಿಕ್ ಅನ್ನು ವಿಂಗಡಣೆ ಮಾಡಿದರು. ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸ್ವಚ್ಛತಾ ಸಾಮಗ್ರಿಗಳನ್ನು ವಿತರಿಸಲಾಯಿತು.

Narendra Modi Started Campaign Against Plastic

ಮೋದಿ ಅವರು ಪ್ಲಾಸ್ಟಿಕ್‌ನ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಪೌರಕಾರ್ಮಿಕರಿಗೆ ಪ್ಲಾಸ್ಟಿಕ್ ತ್ಯಾಜದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಪೌರ ಕಾರ್ಮಿಕರು ಉತ್ತರಿಸಿದರು. ಕಾರ್ಯಕ್ರಮದಲ್ಲಿ ತ್ಯಾಜ್ಯವನ್ನು ಕ್ರಶ್ ಮಾಡುವ ಯಂತ್ರವನ್ನು ಸಹ ಉದ್ಘಾಟಿಸಲಾಯಿತು.

ಇದೇ ಕಾರ್ಯಕ್ರಮದಲ್ಲಿ ಪ್ರಾಣಿಗಳ ಖಾಯಿಲೆ ತಡೆ ಕಾರ್ಯಕ್ರಮ (ಎನ್‌ಎಡಿಸಿಪಿ) ಗೂ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಭಾಗವಾಗಿ ನೂರಾರು ಹಸುಗಳಿಗೆ ಲಸಿಕೆ ಹಾಕಲಾಯಿತು.

ಈ ಬಗ್ಗೆ ಮಾತನಾಡಿದ ಮೋದಿ, 'ಪ್ಲೇಗ್ ಮತ್ತು ಇತರೆ ಜೀವಹರಣ ಕಾಯಿಲೆಗಳ ಬಗ್ಗೆ ಈ ಹಿಂದಿನ ಸರ್ಕಾರ ಗಮನವಹಿಸದೇ ಇರುವುದು ಆಶ್ಚರ್ಯ ತಂದಿದೆ. ನಾನು ಈ ಬಗ್ಗೆ ಅಭಿಯಾನವನ್ನೇ ಆರಂಭಿಸಿದ್ದೇನೆ' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+