ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಗೆ ಸಹಾಯ ಮಾಡಿದ ಮುಸ್ಲಿಮರು

ಲಕ್ನೋ, ಮಾರ್ಚ್ 30: ಹಿಂದೂ ಮುಸ್ಲಿಂ ಗಲಾಟೆಗಳು ಭಾರತದ ಅನೇಕ ಭಾಗಗಳಲ್ಲಿ ಆಗಾಗ ನಡೆಯುತ್ತಲೇ ಇರುತ್ತದೆ. ಆದರೆ, ಕೆಲವು ಬಾರಿ ಜನರು ಎಲ್ಲ ಧರ್ಮಕ್ಕಿಂತ ಮಾನವ ಧರ್ಮ, ಮಾನವೀಯತೆ ದೊಡ್ಡದು ಎನ್ನುವುದನ್ನು ಸಾಭೀತು ಮಾಡಿಬಿಡುತ್ತಾರೆ.

ಉತ್ತರ ಪ್ರದೇಶದ ಬುಲಂದ್‌ಶಹರ್ ನಲ್ಲಿ ಇಂತಹ ಘಟನೆಯೊಂದು ನಡೆದಿದೆ. ಇಲ್ಲಿ ಹಿಂದೂ ಮೃತದೇಹದ ಅಂತ್ಯಕ್ರಿಯೆ ಮಾಡಲು ಮುಸ್ಲಿಂ ಯುವಕರು ಸಹಾಯ ಮಾಡಿದ್ದಾರೆ. 'ರಾಮ್ ನಾಮ್ ಸತ್ಯ ಹೇ' ಎಂದು ಹೇಳುತ್ತಾ ಮೃತ ದೇಹವನ್ನು ಹೊತ್ತು ಸ್ಮಶಾನಕ್ಕೆ ಸೇರಿಸಿದ್ದಾರೆ.

ಆನಂದ್ ವಿಹಾರದ ನಿವಾಸಿ ರವಿ ಶಂಕರ್ ಎಂಬುವವರಿಗೆ 40 ವರ್ಷ ವಯಸ್ಸಾಗಿದ್ದು, ಕ್ಯಾನ್ಸರ್ ನಿಂದ ಮರಣ ಹೊಂದಿದ್ದಾರೆ. ಈ ಸಾವಿನಿಂದ ಪತ್ನಿ ಹಾಗೂ ನಾಲ್ಕು ಮಕ್ಕಳು ಕಂಗಾಲಾಗಿದ್ದರು. ಲಾಕ್ ಡೌನ್ ಇರುವ ಕಾರಣ ಅಂತ್ಯಕ್ರಿಯೆ ಮಾಡಲು ದಿಕ್ಕು ತೋಚದೆ ಇರುವ ಹಾಗೆ ಆಗಿತ್ತು.

Muslims Help Perform Last Rites To A Hindu Family

ಈ ವೇಳೆ ಅವರ ಸಹಾಯಕ್ಕೆ ಸ್ಥಳಿಯ ಮುಸ್ಲಿಮರು ಬಂದಿದ್ದಾರೆ. ತಾವೇ ಅಂತ್ಯಕ್ರಿಯೆಯ ವ್ಯವಸ್ಥೆ ಮಾಡಿ, ಮೃತದೇಹವನ್ನು ಹೊತ್ತು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರು ಹಿಂದೂ, ನಾವು ಮುಸ್ಲಿಂ ಎಂದು ಧರ್ಮವನ್ನು ನೋಡದೆ, ಮಾನವೀಯತೆ ಮರೆದಿದ್ದಾರೆ.

ಹಿಂದೂ ಮೃತದೇಹವನ್ನು ಹೊತ್ತ ಮುಸ್ಲಿಮರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಕಾರ್ಯವನ್ನ ಅನೇಕರು ಮೆಚ್ಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+