ಪಬ್ಜಿಗಾಗಿ ತಾಯಿಯನ್ನೇ ಕೊಂದ ಮಗ: ತಂದೆಗೆ ವಿಡಿಯೋ ಕಾಲ್
ಲಕ್ನೋ ಜೂನ್ 13: ಆನ್‌ಲೈನ್ ಗೇಮಿಂಗ್ ಅಂದ್ರೆ ಯಾವ ಮಕ್ಕಳಿಗೆ ಇಷ್ಟ ಇಲ್ಲ ಹೇಳಿ. ಮಕ್ಕಳು ಎಷ್ಟರ ಮಟ್ಟಿಗೆ ಆನ್‌ಲೈನ್ ಗೀಳು ಅಂಟಿಸಿಕೊಂಡಿದ್ದಾರೆ ಅಂದರೆ ಊಟ, ಸ್ನಾನ, ನಿದ್ದೆ ಮಾಡಲೂ ಅವರಿಗೆ ಆನ್‌ಲೈನ್ ಗೇಮ್ ಬೇಕೇಬೇಕು. ಒಂದು ಪಕ್ಷ ಇದನ್ನು ಮಾಡಲು ಬೇಡ ಅಂದ ಪೋಷಕರ ಮೇಲೆ ಅವರು ಸಿಟ್ಟು ತೋರಿಸುತ್ತಾರೆ. ಕೋಪ ಮಾಡಿಕೊಳ್ಳುತ್ತಾರೆ. ಅದೆಷ್ಟೋ ಮಕ್ಕಳು ಊಟ, ತಿಂಡಿ ಬಿಟ್ಟಿರುವ ಉದಾಹರಣೆಗಳು ಇವೆ. ಆದರೆ ಆನ್‌ಲೈನ್ ಗೇಮಿಂಗ್‌ಗಾಗಿ ತಾಯಿಗೆ ಬಾಲಕನೊಬ್ಬ ಶೂಟ್ ಮಾಡಿದ್ದಾನೆ.
ಹೌದು.. ಅಪ್ರಾಪ್ತ ಬಾಲಕ PUBG ಆಡುವುದನ್ನು ತಡೆದ ಕಾರಣ ತಾಯಿಯ ಮೇಲೆ ಗುಂಡು ಹಾರಿಸಿದ ಭಯಾನಕ ಘಟನೆ ಲಕ್ನೋದಲ್ಲಿ ಬೆಳಕಿಗೆ ಬಂದಿದೆ. ಪೊಲೀಸರಿಗೆ ಸಿಕ್ಕಿರುವ ಹೊಸ ಸುಳಿವು ಪ್ರಕಾರ, ಆರೋಪಿಯು ಕೊಲೆಯಾದ ಮೂರು ದಿನಗಳ ನಂತರ ಜೂನ್ 7 ರಂದು ತನ್ನ ತಂದೆಗೆ ಘಟನೆಯ ಬಗ್ಗೆ ತಿಳಿಸಲು ಕರೆ ಮಾಡಿದ್ದ ಎನ್ನಲಾಗಿದೆ.

ತಂದೆಗೆ ವಿಡಿಯೋ ಕರೆ ಮಾಡಿದ ಬಾಲಕ
ಬಾಲಕ ತನ್ನ ತಂದೆಗೆ ವಿಡಿಯೋ ಕರೆ ಮಾಡಿ ತಾಯಿಯನ್ನು ಕೊಂದಿರುವುದಾಗಿ ತಿಳಿಸಿದ್ದಾನೆ. ಬಳಿಕ ಬಾಗಿಲ ಬಳಿಯೇ ನಿಂತು ಪೊಲೀಸರು ಬರುವುದನ್ನೇ ಕಾಯುತ್ತಿದ್ದ ಎನ್ನಲಾಗಿದೆ. ಪೊಲೀಸರು ಆಗಮಿಸಿದ ತಕ್ಷಣ, 16 ವರ್ಷದ ಬಾಲಕ ಅವರನ್ನು ಒಳಗೆ ಕರೆದೊಯ್ದು ಕೊಲೆಗೆ ಬಳಸಿದ ಪಿಸ್ತೂಲ್ ಅನ್ನು ತೋರಿಸಿದ್ದಾನೆ ಮತ್ತು ನಂತರ ಅವರಿಗೆ ಮೃತ ದೇಹವನ್ನು ತೋರಿಸಿದ್ದಾನೆ.

ಗೊತ್ತಿರುವ ಜನರನ್ನು ವಿಚಾರಿಸಿದ್ದ ತಂದೆ
ಪ್ರಸ್ತುತ ಅಸನ್ಸೋಲ್‌ನಲ್ಲಿ ಕೆಲಸಕ್ಕೆ ನಿಯೋಜಿತರಾಗಿರುವ ಬಾಲಾಪರಾಧಿಯ ತಂದೆ ಜೂನ್ 3 ರಿಂದ ತನ್ನ ಮಗ ಮತ್ತು ಹೆಂಡತಿಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಅವನು ತನ್ನ ಮಗನ ಟ್ಯೂಷನ್ ಟೀಚರ್ ಸೇರಿದಂತೆ ಅನೇಕ ಜನರನ್ನು ತನ್ನ ಕುಟುಂಬವನ್ನು ಪರೀಕ್ಷಿಸಲು ಕಳುಹಿಸಿದ್ದರು, ಆದರೆ ಯಾರೂ ಕೂಡ ಮನೆಯ ಬಾಗಿಲು ತೆರೆದಿಲ್ಲ ಎಂದಿದ್ದರು. ಬಳಿಕ ಮಗನೇ ವಿಡಿಯೋ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ವಿಡಿಯೋ ಕರೆಯಲ್ಲಿ ಘಟನೆಯನ್ನು ಕಂಡ ತಂದೆ ಶಾಕ್ ಆಗಿದ್ದಾರೆ.

ಪೊಲೀಸರ ತನಿಖೆ ಚುರುಕು
ಜೂನ್ 7 ರಂದು ಮಗನಿಗೆ ಕರೆ ಬಂದಿದ್ದು, ಆತನ ಮಗ ಕೊಲೆ ಮಾಡುವ ಅಸ್ತ್ರವನ್ನು ತೋರಿಸಿದ್ದಾನೆ. ಆರೋಪಿ ತಂದೆಗೆ ವಿಡಿಯೋ ಕರೆ ಮೂಲಕ ಏನು ಹೇಳಿದರು ಮತ್ತು ಅವನು ಕೊಲೆಯಾದ ಮೂರು ದಿನಗಳ ಬಳಿಕ ಬಾಗಿಲಲ್ಲಿ ಏಕೆ ಕಾಯುತ್ತಿದ್ದನು ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.

ತಪ್ಪೊಪ್ಪಿಕೊಂಡ ಬಾಲಕ
ಹುಡುಗ ಲಕ್ನೋದಲ್ಲಿ ತನ್ನ ನಿವಾಸದಲ್ಲೇ ತನ್ನ ತಾಯಿಯನ್ನು ಕೊಂದಿದ್ದಾನೆ. ಬಳಿಕ ಶವವನ್ನು ಕೋಣೆಗೆ ತಳ್ಳಿದ್ದಾನೆ. ತನ್ನ ತಂಗಿಯನ್ನು ಮತ್ತೊಂದು ಕೋಣೆಯಲ್ಲಿ ಬೀಗ ಹಾಕಿದ್ದನೆಂದು ತನಿಖೆಯಿಂದ ತಿಳಿದು ಬಂದಿದೆ. ಜೊತೆಗೆ ವಿಚಾರಣೆ ವೇಳೆ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. PUBG ಆಡಲು ಅವಕಾಶ ನೀಡದಿದ್ದಕ್ಕಾಗಿ ಬಾಲಕಿ ತನ್ನ ತಾಯಿಯ ಮೇಲೆ ಕೋಪಗೊಂಡಿದ್ದ. ಕಳೆದ ತಿಂಗಳ ಕೊನೆಯಲ್ಲಿ ಭಾನುವಾರ ಮಧ್ಯರಾತ್ರಿಯಲ್ಲಿ ತನ್ನ ತಂದೆಯ ಪರವಾನಗಿ ಪಡೆದ ಬಂದೂಕಿನಿಂದ ಅವಳನ್ನು ಹೊಡೆದುರುಳಿಸಿದನು.












Click it and Unblock the Notifications