ಯುವತಿ ಮೇಲೆ 6 ವರ್ಷ ಅತ್ಯಾಚಾರವೆಸಗಿದ್ದ ಪಾಪಿ ಕೊನೆಗೂ ಅರೆಸ್ಟ್

ಘಾಜಿಯಾಬಾದ್, ಮೇ 24: ಬ್ಲ್ಯಾಕ್‌ಮೇಲ್ ಮಾಡಿ ಯುವತಿಯ ಮೇಲೆ 6 ವರ್ಷಗಳ ಕಾಲ ಅತ್ಯಾಚಾರವೆಸಗಿದ್ದ ವ್ಯಕ್ತಿಯನ್ನು ಪೊಲೀಸರು ಬಂದಿಸಿದ್ದಾರೆ.

ಯುವತಿಗೆ ಆತ ಪರಿಚಯವಾಗಿದ್ದ, ಹೀಗೆಯೇ ಒಂದು ದಿನ ಮನೆಗೆ ಆಕೆಯನ್ನು ಆಹ್ವಾನಿಸಿದ್ದ ಬಳಿಕ ಜ್ಯೂಸ್‌ನಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಇಷ್ಟಕ್ಕೂ ಸುಮ್ಮನಿರದೆ ಆಕೆಯ ನಗ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಆಕೆಯ ಮೇಲೆ 6 ವರ್ಷಗಳ ಕಾಲ ಅತ್ಯಾಚಾರ ವೆಸಗಿರುವ ವಿಷಯ ಈಗ ಬೆಳಕಿಗೆ ಬಂದಿದೆ.

ಯುವತಿ ಕಾನೂನು ವಿದ್ಯಾರ್ಥಿಯಾಗಿದ್ದಾರೆ, ಆರೋಪಿಯನ್ನು ಇಕ್ರಾಮ್ ಎಂದು ಗುರುತಿಸಲಾಗಿದೆ.ಅತ್ಯಾಚಾರದ ಬಳಿಕ ಆಕೆಯನ್ನು ಮದುವೆಯಾಗುವುದಾಗಿ ಆತ ತಿಳಿಸಿದ್ದ, ವಿದ್ಯಾರ್ಥಿನಿಯು ಐದನೇ ವರ್ಷದ ಕಾನೂನು ಶಿಕ್ಷಣವನ್ನು ಪಡೆಯುತ್ತಿದ್ದಳು.

man rapes girl for 6 years

ಆತನಿಗೆ ಈಗಾಗಲೇ ಮದುವೆಯಾಗಿದ್ದು ಮಕ್ಕಳು ಕೂಡ ಇದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಆತನ ಸಂತ್ರಸ್ತೆಯ ಕಾಲೇಜಿಗೆ ಹೋಗಿ ಆಕೆಯ ಬಳಿ ದುರ್ವರ್ತನೆ ತೋರಿದ್ದಾನೆ. ಐಪಿಸಿ ಸೆಕ್ಷನ್ 376 ಅಡಿ ಪ್ರಕರಣ ದಾಖಲಾಗಿದೆ.

ಅದೇ ಪ್ರದೇಶದಲ್ಲಿ 11 ವರ್ಷದ ಅಪ್ರಾಪ್ತೆ ಮೇಲೆ ಎನ್‌ಟಿಪಿಸಿ ಸಿಬ್ಬಂದಿಯೊಬ್ಬ ವರ್ಷಗಳ ಕಾಲ ನಿರಂತರ ಅತ್ಯಾಚಾರವೆಸಗಿದ್ದ ಘಟನೆ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+