ಪತ್ನಿ ರುಂಡದೊಂದಿಗೆ ಪೊಲೀಸ್ ಠಾಣೆಗೆ ಹೋಗಿ ರಾಷ್ಟ್ರಗೀತೆ ಹಾಡಿದ
ಲಕ್ನೋ, ಫೆಬ್ರವರಿ 2: ವ್ಯಕ್ತಿಯೊಬ್ಬ ಪತ್ನಿಯ ರುಂಡ ಹಿಡಿದು ಪೊಲೀಸ್ ಠಾಣೆಗೆ ಹೋಗಿ ರಾಷ್ಟ್ರಗೀತೆ ಹಾಡಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಬಾರಬಂಕಿಯಲ್ಲಿ ನಡೆದಿದೆ.
ಬಹದ್ದೂರ್‌ಪುರದಲ್ಲಿರುವ ಜಹಂಗೀರ್‌ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪತ್ನಿಯ ರುಂಡ ಹಿಡಿದು ಊರುಸುತ್ತಿಕೊಂಡು ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ.
ವ್ಯಕ್ತಿಯ ಕೈಯಲ್ಲಿದ್ದ ರುಂಡವನ್ನು ಪೊಲೀಸರು ವಶಪಡಿಸಿಕೊಳ್ಳಲು ಪ್ರಯತ್ನ ಮಾಡಿದಾಗ ತಕ್ಷಣವೇ ರಾಷ್ಟ್ರಗೀತೆ ಹಾಡಿದ ಆತ 'ಬೋಲೋ ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗಿದ್ದಾನೆ.

ಸಾಕಷ್ಟು ಹೊತ್ತಿನ ಕಲಹದ ಬಳಿಕ ಕೊನೆಗೂ ವ್ಯಕ್ತಿಯ ಕೈಯಿಂದ ರುಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರದೇಶದಲ್ಲಿ ವಾಸಿಸುವ ಮಂದಿಯಲ್ಲಿ ಆತಂಕ ಆರಂಭವಾಗಿದೆ.
ಆರೋಪಿ ಅಖಿಲೇಶ್ ರಾವತ್ ಮೊದಲು ಪತ್ನಿಯನ್ನು ಕೊಂದು ಕೊನೆಗೆ ರುಂಡವನ್ನು ಕತ್ತರಿಸಿದ್ದಾನೆ. ಆದರೆ ಪತ್ನಿ ಕೊಲೆಗೆ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications