ಲೋಕಸಭೆ ಚುನಾವಣೆ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಧೂಳಿಪಟ?!
ಲಕ್ನೋ, ನವೆಂಬರ್ 16: ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೆ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರವನ್ನೇನಾದರೂ ತೆಗೆದುಕೊಂಡರೆ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಾಣಬೇಕಾಗುತ್ತದೆ ಎಂದು ಇಂಡಿಯಾ ಟಿವಿ ಮತ್ತು ಸಿಎನ್ ಎಕ್ಸ್ ಸಮೀಕ್ಷೆ ಹೇಳಿದೆ.
ಇಂದೇ ಲೋಕಸಭಾ ಚುನಾವಣೆ ನಡೆದರೆ ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಬರುತ್ತದೆ ಎಂದು ಸರ್ವೆ ಆಧಾರದ ಮೇಲೆ ಭವಿಷ್ಯ ನುಡಿದಿರುವ ಇಂಡಿಯಾ ಟಿವಿ, ಉತ್ತರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಯಾವ ಪಕ್ಷ ಎಷ್ಟು ಸೀಟು ಗೆಲ್ಲಲಿದೆ ಎಂಬ ಅಂದಾಜು ವಿವರ ನೀಡಿದೆ.
ಒಟ್ಟು 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದು ಎಲ್ಲ ಪಕ್ಷಗಳ ಗುರಿ. ಕಳೆದ ಬಾರಿ 71 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 2014 ರ ಸತ್ಯುತ್ತಮ ಪ್ರದರ್ಶನವನ್ನು ಮರುಕಳಿಸುವಂತೆ ಮಾಡಲು ವಿಫಲವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಉತ್ತರ ಪ್ರದೇಶ
* ಎಸ್ಪಿ-ಬಿಎಸ್ಪಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳದೆ ಇದ್ದರೆ
ಎನ್ ಡಿಎ - 45, ಕಾಂಗ್ರೆಸ್-02, ಎಸ್ಪಿ-ಬಿಎಸ್ಪಿ-33
* ಎಸ್ಪಿ-ಬಿಎಸ್ಪಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ
ಎನ್ ಡಿಎ - 31, ಕಾಂಗ್ರೆಸ್-ಎಸ್ಪಿ-ಬಿಎಸ್ಪಿ(ಮಹಾಘಟಬಂಧನ)-49
* ಎಲ್ಲ ಪಕ್ಷಗಳೂ ಸ್ವತಂತ್ರವಾಗಿ ಸ್ಪರ್ಧಿಸಿದರೆ
ಎನ್ ಡಿಎ - 39, ಕಾಂಗ್ರೆಸ್-05, ಎಸ್ಪಿ-09 ಬಿಎಸ್ಪಿ-9, ಇತರರು-02

ಪಶ್ಚಿಮ ಬಂಗಾಳ
ಬಿಜೆಪಿ-8 (2014 ರಲ್ಲಿ 2)
ಟಿಎಂಸಿ- 27(2014 ರಲ್ಲಿ 34)
ಕಾಂಗ್ರೆಸ್- 2(2014 ರಲ್ಲಿ 4)
ಎಡಪಕ್ಷ- 05(2014 ರಲ್ಲಿ 2)
ಒಟ್ಟು ಲೋಕಸಭಾ ಕ್ಷೇತ್ರಗಳು - 42

ಒಡಿಶಾ
ಬಿಜೆಪಿ- 05 (2014 ರಲ್ಲಿ 01)
ಬಿಜೆಡಿ- 16 (2014 ರಲ್ಲಿ 20)
ಕಾಂಗ್ರೆಸ್- 0 (2014 ರಲ್ಲಿ 0)
ಒಟ್ಟು ಲೋಕಸಭಾ ಕ್ಷೇತ್ರಗಳು - 21

ಇಂಡಿಯಾ ಟಿವಿ-ಸಿಎನ್ ಎಕ್ಸ್ ಸಮೀಕ್ಷೆ
ಇಂಡಿಯಾ ಟಿವಿ-ಸಿಎನ್ ಎಕ್ಸ್ ನ್ಯೂಸ್ ಏಜೆನ್ಸಿ ನಡೆಸಿದ ಒಪಿನಿಯನ್ ಪೋಲ್ ನಲ್ಲಿ 18 ರಿಂದ 60 ವರ್ಷ ವಯಸ್ಸಿನ 17100 ಮತದಾರರನ್ನು ಪ್ರಶ್ನಿಸಲಾಯಿತು. ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಕುರಿತು ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ವತಂತ್ರವಾಗಿ ಸ್ಪರ್ಧಿಸುವುದು ಅಪಾಯವನ್ನು ಮೈಮೇಲೆಳೆದುಕೊಂಡಂತೆ ಎಂಬುದು ದೃಢವಾಗಿದೆ.












Click it and Unblock the Notifications