ಅಕ್ರಮ ಗಣಿಗಾರಿಕೆ: ಮಾಜಿ ಸಚಿವನ ಮನೆ ಮೇಲೆ ಸಿಬಿಐ ದಾಳಿ!
ಲಕ್ನೋ, ಜೂನ್ 13: ಅತ್ಯಾಚಾರದ ಆರೋಪದ ಜಾಮೀನು ಪಡೆದಿರುವ ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ನಾಯಕ ಗಾಯತ್ರಿ ಪ್ರಜಾಪತಿ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಲಾಗಿದೆ.
49 ವರ್ಷದ ಗಾಯತ್ರಿ ಪ್ರಜಾಪತಿ ಹಾಗೂ 6 ಜನರ ಮೇಲೆ ಮಹಿಳೆಯೊಬ್ಬರನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಮತ್ತು ಆಕೆಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಫೆಬ್ರವರಿ 17ರಂದು ಎಫ್ಐಆರ್ ದಾಖಲಾಗಿತ್ತು.
2016ರಲ್ಲಿ ಸಮಾಜವಾದಿ ಪಕ್ಷದಲ್ಲಿ ಬಿಕ್ಕಟ್ಟು ಉಲ್ಬಣವಾದಾಗ ಸಚಿವ ಸಂಪುಟದಿಂದ ಗಾಯತ್ರಿ ಪ್ರಜಾಪತಿಯನ್ನು ಕೆಳಕ್ಕಿಳಿಸಲಾಗಿತ್ತು. ಆದರೆ ನಂತರ ಮತ್ತೆ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು.

ಅಕ್ರಮ ಗಣಿಗಾರಿಕೆ ಕೇಸ್ : ಉತ್ತರಪ್ರದೇಶದ 22 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಸಿಬಿಐ, ಅಮೇಥಿಯಲ್ಲಿರುವ ಗಾಯಿತ್ರಿ ಪ್ರಜಾಪತಿ ಅವರ ಮನೆ ಮೇಲೆ ದಾಳಿ ನಡೆಸಿರುವುದನ್ನು ಖಚಿತಪಡಿಸಿದೆ.
ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಪ್ರಜಾಪತಿ ಅವರು ಗಣಿಗಾರಿಕೆ ಸಚಿವರಾಗಿದ್ದರು. ಅಖಿಲೇಶ್ ಯಾದವ್ ಸರ್ಕಾರದಿಂದ ಅಕ್ರಮ ಗಣಿಗಾರಿಕೆ ಲೈಸನ್ಸ್ ನೀಡುವುದರಲ್ಲಿ ಪ್ರಜಾಪತಿ ಮಹತ್ವದ ಪಾತ್ರ ವಹಿಸಿದ್ದರು ಎಂಬ ಆರೋಪವಿದೆ.












Click it and Unblock the Notifications