'ಹತ್ರಾಸ್ ಸಂತ್ರಸ್ತೆ ವಾರದ ಬಳಿಕ ಅತ್ಯಾಚಾರ ನಡೆದಿದ್ದ ವಿಷಯ ತಿಳಿಸಿದ್ದಳು'

ಲಕ್ನೋ, ಅಕ್ಟೋಬರ್ 02: ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಘಟನೆ ನಡೆದು ಒಂದು ವಾರದ ಬಳಿಕ ಅತ್ಯಾಚಾರ ನಡೆದಿರುವ ವಿಷಯವನ್ನು ತಿಳಿಸಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

20 ವರ್ಷದ ದಲಿತ ಯುವತಿಯನ್ನು ಹೊಲದಿಂದ ಅಪಹರಿಸಿ ನಾಲ್ಕು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅತ್ಯಾಚಾರ ನಡೆದು ಒಂದು ವಾರದ ಬಳಿಕ ವಿಷಯವನ್ನು ಆಕೆ ಹೇಳಿದ್ದಳು.

ಆದರೆ ಗುರುವಾರ ಬಂದಿರುವ ಫಾರೆನ್ಸಿಕ್ ವರದಿ ಆಕೆಯ ಮೇಲೆ ಯಾವುದೇ ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಹೇಳುತ್ತದೆ. ಮಹಿಳೆಯನ್ನು ಅಂತಿಮವಾಗಿ ಪೋಷಕರಿಗೆ ನೀಡಲು ಅನುವು ಮಾಡಿಕೊಡದೆ, ಮಧ್ಯರಾತ್ರಿ 2.30ರವೇಳೆಗೆ ಅಂತ್ಯಕ್ರಿಯೆ ನೆರವೇರಸಿದ್ದರ ಕುರಿತು ಸಾಕಷ್ಟು ಅನುಮಾನಗಳು ಹುಟ್ಟಿವೆ.

ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಹೇಳುವುದೇನು?

ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಹೇಳುವುದೇನು?

ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಾತನಾಡಿ, ಮಹಿಳೆಯ ದೂರಿನ ಮೇರೆಗೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಆದರೆ ಫಾರೆನ್ಸಿಕ್ ವರದಿ ಪ್ರಕಾರ ಮಾದರಿಯಲ್ಲಿ ಯಾವುದೇ ಸ್ಪರ್ಮ್ ಇರಲಿಲ್ಲ ಎಂದು ಹೇಳಿದೆ.

ನಾವು ಸಂತ್ರಸ್ತೆಯ ಮಾತನ್ನು ನಂಬುತ್ತೇವೆ

ನಾವು ಸಂತ್ರಸ್ತೆಯ ಮಾತನ್ನು ನಂಬುತ್ತೇವೆ

ನಾವು ಮೊದಲ ದಿನದಿಂದಲೇ ಸಂತ್ರಸ್ತೆಯ ಮಾತನ್ನು ನಂಬಿದ್ದೇವೆ, ಸರಿಯಾದ ಸೆಕ್ಷನ್‌ಗಳಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಘಟನೆ ನಡೆದು ಒಂದು ಗಂಟೆ ಬಳಿಕ ಸಂತ್ರಸ್ತೆ ಆಕೆಯ ಸಹೋದರನ ಜೊತೆ ಪೊಲೀಸ್ ಠಾಣೆಗೆ ಬಂದಿದ್ದಳು. ಬಳಿಕ ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಅಲಿಗಢ ಆಸ್ಪತ್ರೆಗೆ ರವಾನೆ

ಅಲಿಗಢ ಆಸ್ಪತ್ರೆಗೆ ರವಾನೆ

ಬಳಿಕ ಅಲಿಗಢ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಯಿತು. ಅಂದು ಸೆಪ್ಟೆಂಬರ್ 22 ಮೊದಲ ಬಾರಿಗೆ ತನ್ನ ಮೇಲೆ ಅತ್ಯಾಚಾರ ನಡೆದಿದ್ದ ಬಗ್ಗೆ ಮಾಹಿತಿ ನೀಡಿದ್ದಳು. ತಕ್ಷಣವೇ ಪ್ರಕರಣ ದಾಖಲಿಸಿ ಆ ನಾಲ್ವರನ್ನು ಬಂಧಿಸಿದೆವು ಎಂದು ಪೊಲೀಸರು ಹೇಳಿದ್ದಾರೆ.

ಮಾದರಿಗಳನ್ನು ತೆಗೆದುಕೊಂಡರು

ಮಾದರಿಗಳನ್ನು ತೆಗೆದುಕೊಂಡರು

ಸೆಪ್ಟೆಂಬರ್ 25 ರಂದು ಫಾರೆನ್ಸಿಕ್ ಮಾದರಿಯನ್ನು ತೆಗೆದುಕೊಳ್ಳಲಾಯಿತು.
ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಘಟನೆ ನಡೆದು ಒಂದು ವಾರದ ಬಳಿಕ ಅತ್ಯಾಚಾರ ನಡೆದಿರುವ ವಿಷಯವನ್ನು ತಿಳಿಸಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
20 ವರ್ಷದ ದಲಿತ ಯುವತಿಯನ್ನು ಹೊಲದಿಂದ ಅಪಹರಿಸಿ ನಾಲ್ಕು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅತ್ಯಾಚಾರ ನಡೆದು ಒಂದು ವಾರದ ಬಳಿಕ ವಿಷಯವನ್ನು ಆಕೆ ಹೇಳಿದ್ದಳು.
ಆದರೆ ಗುರುವಾರ ಬಂದಿರುವ ಫಾರೆನ್ಸಿಕ್ ವರದಿ ಆಕೆಯ ಮೇಲೆ ಯಾವುದೇ ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಹೇಳುತ್ತದೆ. ಮಾದರಿಯಲ್ಲಿ ಯಾವುದೇ ಸ್ಪರ್ಮ್ ಪತ್ತೆಯಾಗದ ಕಾರಣ ಇನ್ಯಾವ್ಯಾವ ದಾಖಲೆಗಳಿವೆಯೋ ಎಲ್ಲವನ್ನೂ ಪರೀಕ್ಷೆ ಮಾಡಲಾಯಿತು. ಆದರೆ ಅತ್ಯಾಚಾರವಾಗಿರುವ ಬಗ್ಗೆ ಯಾವುದೇ ಕುರುಹುಗಳಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+