3 ವಿಡಿಯೋಗಳಲ್ಲಿ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಮಾಹಿತಿ ನೀಡಿದ್ದ ಹತ್ರಾಸ್ ಸಂತ್ರಸ್ತೆ

ಆಗ್ರಾ, ಅಕ್ಟೋಬರ್ 13: ದೇಶದಲ್ಲಿ ಆತಂಕ ಮೂಡಿಸಿದ ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವಿಡಿಯೋಗಳು ಲಭ್ಯವಾಗಿವೆ.

ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದರಲ್ಲಿ ವಿಶ್ಲೇಷಿಸಿದ 19 ವರ್ಷದ ಯುವತಿಯ ಮೂರು ಪ್ರತ್ಯೇಕ ವೀಡಿಯೊಗಳು ಆಕೆಯ ಮೇಲೆ ಅತ್ಯಾಚಾರ ನಡೆದುದ್ದನ್ನು ಹೇಳುವುದನ್ನು ಕಾಣಬಹುದಾಗಿದೆ.

ಈ ವೀಡಿಯೊ 19 ವರ್ಷದ ಸಂತ್ರಸ್ತೆಯ ಕೊನೆಯ ಸಾರ್ವಜನಿಕವಾಗಿ ಲಭ್ಯವಿರುವ ಹೇಳಿಕೆಯಾಗಿದೆ. ಅಷ್ಟೇ ಅಲ್ಲದೆ ಅತ್ಯಾಚಾರ ಮಾಡಿ ಕತ್ತು ಹಿಸುಕಲು ಮುಂದಾಗಿದ್ದರು ಎಂದು ಹೇಳಿದ್ದಾಳೆ.

ಇಂಡಿಯಾ ಟುಡೆ ಟಿವಿಯಿಂದ ಪರೀಕ್ಷಿಸಲ್ಪಟ್ಟ ವಿಡಿಯೋದಲ್ಲಿ ಸಂತ್ರಸ್ತೆ ಕತ್ತು ಹಿಸುಕುವ ಪ್ರಯತ್ನವಿದೆ ಎಂದು ಹೇಳಿದ್ದಾರೆ. ಆದರೆ ಅದನ್ನು ಈಗ ಬೇರೆಯದೇ ಬಣ್ಣ ಹಾಕಿ, ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಗಾಯಗೊಂಡ ಮಗಳೊಂದಿಗೆ ಪೊಲೀಸ್ ಠಾಣೆಯ ಹೊರಗೆ ಸಂತ್ರಸ್ತೆಯ ತಾಯಿಯ ವಿಡಿಯೋವನ್ನು ಅಮಿತ್ ಮಾಲ್ವಿಯಾ ಪೋಸ್ಟ್ ಮಾಡಿದ್ದು, ನೆಲದ ಮೇಲೆ ಮಲಗಿದ್ದು, ಸಂತ್ರಸ್ತೆ ಅಳುತ್ತಾಳೆ. ತುಣುಕಿನಲ್ಲಿ,ಆಕೆ ಅತ್ಯಾಚಾರದ ಬಗ್ಗೆ ಮಾತನಾಡಿಲ್ಲ.

ಅತ್ಯಾಚಾರದ ಬಗ್ಗೆ ಹೇಳಿಕೆ ನೀಡಿದ್ದ ಸಂತ್ರಸ್ತೆ

ಅತ್ಯಾಚಾರದ ಬಗ್ಗೆ ಹೇಳಿಕೆ ನೀಡಿದ್ದ ಸಂತ್ರಸ್ತೆ

ಸಂತ್ರಸ್ತೆಯ ಮೂರು ವೀಡಿಯೊ ಹೇಳಿಕೆಗಳನ್ನು ಎಚ್ಚರಿಕೆಯಿಂದ ಕೇಳಿದಾಗ ಅವಳು ತನ್ನ ಮೇಲೆ ಅತ್ಯಾಚಾರವಾಗಿರುವ ಬಗ್ಗೆ ಆಕೆ ಮಾಹಿತಿ ನೀಡಿದ್ದಾಳೆ. ಸೆಪ್ಟೆಂಬರ್ 14 ರಂದು ದಾಖಲಾದ ಮೊದಲ ಲಭ್ಯವಿರುವ ವೀಡಿಯೊ ಹೇಳಿಕೆಯಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ವಿಡಿಯೋ ಚಿತ್ರೀಕರಣ

ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ವಿಡಿಯೋ ಚಿತ್ರೀಕರಣ

ಎರಡನೇ ವಿಡಿಯೋವನ್ನು ಅದೇ ದಿನ ಹತ್ರಾಸ್‌ನ ಬಾಗ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿತ್ರೀಕರಿಸಲಾಗಿದೆ. ಈ ಕ್ಲಿಪ್‌ನಲ್ಲಿ ಸಂತ್ರಸ್ತೆಯು ಆರೋಪಿಗಳನ್ನು ಗುರುತಿಸಿದ್ದಾನೆ. ದಾಳಿಯ ಹಿಂದಿನ ಘಟನೆ ಮತ್ತು ಉದ್ದೇಶದ ಬಗ್ಗೆ ಕೇಳಿದಾಗ, ನಾನು ಹುಲ್ಲು ತರಲು ಹೋಗಿದ್ದೆವು, ಅವರು ಅಲ್ಲಿಂದ ನನ್ನನ್ನು ಎತ್ತಿಕೊಂಡು ಹೋದರು. ನಂತರ ನಾನು ಪ್ರತಿಭಟಿಸಿದಾಗ ಕಟ್ಟು ಹಿಸುಕಿದರು. ನಂತರ ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದರು ಎಂದು ತಿಳಿಸಿದ್ದಾರೆ.

ಮೂರನೇ ವಿಡಿಯೋದಲ್ಲಿ ಅತ್ಯಾಚಾರಿಗಳ ಬಗ್ಗೆ ಮಾಹಿತಿ

ಮೂರನೇ ವಿಡಿಯೋದಲ್ಲಿ ಅತ್ಯಾಚಾರಿಗಳ ಬಗ್ಗೆ ಮಾಹಿತಿ

ಮೂರನೇ ವಿಡಿಯೋದಲ್ಲಿ ಸಂತ್ರಸ್ತೆ ಅತ್ಯಾಚಾರಿಗಳೆಂದು ರವಿ ಮತ್ತು ಸಂದೀಪ್ ಎಂದು ಹೆಸರಿಸಿದ್ದಾರೆ. ಈ ಕ್ಲಿಪ್ ಅನ್ನು ಸೆಪ್ಟೆಂಬರ್ 22 ರಂದು ಅಲಿಗಢದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.

ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದರು

ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದರು

ಅಲ್ಲಿ ಬಂದ ಜನರು ಹಾಗೂ ತಾಯಿಯನ್ನು ನೋಡಿದ ಅವರು ಓಡಿಹೋದರು ಎಂದು ಹೇಳಿದಾಗ ಇದನ್ನು ಅತ್ಯಾಚಾರ ಎಂದು ಕರೆಯಲು ಅವಳ ಮೇಲೆ ಏನಾದರೂ ಒತ್ತಡವಿದೆಯೇ ಎಂದು ಕೇಳಿದಾಗ, ಇಲ್ಲ, ಯಾವುದೇ ಒತ್ತಡವಿಲ್ಲ ಎಂದು ಕೂಡ ಅವಳು ಹೇಳಿದ್ದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+